ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದಿಂದ 2021-22ನೇ
ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆ ನವೀಕರಣ, ಸ್ವಯಂ
ಉದ್ಯೋಗ ನೇರ ಸಾಲ ಯೋಜನೆಗಳ ಅನುಷ್ಠಾನಕ್ಕಾಗಿ ಹಿಂದುಳಿದ
ವರ್ಗಗಳ ಪ್ರವರ್ಗ-1ರ ಅರ್ಜಿದಾರರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈಗಾಗಲೇ ಕಳೆದ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ
ಯೋಜನೆಯಡಿ ಸೌಲಭ್ಯ ಪಡೆದ ಉಪ್ಪಾರ ವಿದ್ಯಾರ್ಥಿಗಳು 2021-22ನೇ
ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಮುಂದುವರೆದ ಕಂತುಗಳಿಗೆ
(2, 3, 4ನೇ ಕಂತುಗಳು) ಅರ್ಜಿಗಳನ್ನು ಸುವಿಧಾ ಆನ್‍ಲೈನ್ ಪೋರ್ಟಲ್
ಮುಖಾಂತರ hಣಣಠಿs://suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ 2022ರ ಜ.10ರ ಸಂಜೆ 5:30
ರೊಳಗಾಗಿ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು
ಸ್ವೀಕರಿಸುವುದಿಲ್ಲ. ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಕಳೆದ ಸಾಲಿನ ಅಂಕ
ಪಟ್ಟಿ, ಪ್ರಸ್ತುತ ಸಾಲಿನ ವ್ಯಾಸಂಗ ಪ್ರಮಾಣ ಪತ್ರ, ಸಾಲ ಮಂಜೂರಾತಿ
ಆದೇಶ, ಹಣ ಸಂದಾಯ ರಶೀದಿ, ಪೋಷಕರ ಒಪ್ಪಿಗೆ ಪತ್ರ,
ಜಾಮೀನುದಾರರ ಒಪ್ಪಿಗೆ ಪತ್ರ ದಾಖಲಾತಿಗಳನ್ನು ತರತಕ್ಕದ್ದು.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸೌಲಭ್ಯ
ಪಡೆಯಲು ಬಯಸುವ ಹಿಂದುಳಿದ ವರ್ಗಗಳ ಉಪ್ಪಾರ
ಸಮುದಯದವರು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಆರ್ಥಿಕ
ನೆರವನ್ನು ಒದಗಿಸಲಾಗಿದೆ. ಅರ್ಜಿದಾರರು ಪ್ರವರ್ಗ-1ರ ಉಪ್ಪಾರ,
ಬೆಲ್ದರ್, ಚುನಾರ್, ಗಾವಾಡಿ, ಗೌಂದಿ, ಕಲ್ಲುಕುಟಿಗ ಉಪ್ಪಾರ, ಲೋನಾರಿ,
ಮೇಲು ಸಕ್ಕರೆಯವರು, ಮೇಲು ಸಕ್ಕರೆ, ನಾಮದ ಉಪ್ಪಾರ,
ಪಡಿತ್/ಪಡ್ತಿ, ಪಡಿತಿ, ಪಾಡಿ, ಸಗರ, ಸುಣ್ಣಗಾರ, ಸುಣ್ಣ ಉಪ್ಪಾರ, ಉಪ್ಪಳಿಗ,
ಉಪ್ಪಳಿಗ ಶೆಟ್ಟಿ, ಉಪ್ಪಳಿಯನ್, ಉಪ್ಪೇರ, ಯಕಲಾರ, ಎಕ್ಕಲಿ
ಸಮುದಾಯಗಳಿಗೆ ಸೇರಿದವರಾಗಿರಬೇಕು.
ಅರ್ಜಿದಾರರು ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ
ಪತ್ರವನ್ನು ಹೊಂದಿರಬೇಕು. ಕಡ್ಡಾಯವಾಗಿ ಆಧಾರ್ ಕಾರ್ಡ್
ಹೊಂದಿರಬೇಕು. ಕುಟುಂಬದ ವಾರ್ಷಿಕ ವರಮಾನ
ಗ್ರಾಮಾಂತರದವರಿಗೆ 98,000 ರೂ. ಹಾಗೂ ನಗರ
ಪ್ರದೇಶದವರಿಗೆ 1,20,000 ರೂ.ಗಳ ಮಿತಿಯೊಳಗಿರಬೇಕು.
ಅರ್ಜಿದಾರರು 18 ವರ್ಷ ಮೇಲ್ಪಟ್ಟು 55 ವರ್ಷದ
ಒಳಗಿನವರಾಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಾಲ
ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಈಗಾಗಲೇ ನಿಗಮಗಳ
ಯಾವುದೇ ಯೋಜನೆಗಳಲ್ಲಿ ಸೌಲಭ್ಯ ಪಡೆದಿದ್ದಲ್ಲಿ ಅಂತಹ
ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರು ಸಾಲ ಸೌಲಭ್ಯ
ಪಡೆಯಲು ಅರ್ಹರಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿ ಹಾಗೂ ನಿಗಮದ
ವೆಬ್‍ಸೈಟ್ ತಿತಿತಿ.uಠಿಠಿಚಿಡಿಜeveಟoಠಿmeಟಿಣ.ಞಚಿಡಿಟಿಚಿಣಚಿಞಚಿ.gov.iಟಿ ಅನ್ನು ಅಥವಾ ಕಛೇರಿ
ದೂರವಾಣಿ ಸಂಖ್ಯೆ: 08192230934 ಕ್ಕೆ ಸಂಪರ್ಕಿಸಬಹುದು. ಅರ್ಜಿ
ನಮೂನೆಯನ್ನು ನಿಗಮದ ವೆಬ್‍ಸೈಟ್‍ನಲ್ಲಿ ಹಾಗೂ ಉಚಿತವಾಗಿ ಜಿಲ್ಲಾ
ಕಚೇರಿಯಲ್ಲಿ ಡಿ.01 ರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು
ಅಗತ್ಯ ದಾಖಲಾತಿಗಳೊಂದಿಗೆ 2022ರ ಜ.10 ರೊಳಗಾಗಿ ಸಲ್ಲಿಸಬೇಕು.
ತದನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ನಿಗಮದ
ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.