ಹೊನ್ನಾಳಿ : ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವುದು ನನ್ನ ಕನಸು, ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ 87 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಿಮ್ಮೇನಹಳ್ಳಿ ಗ್ರಾಮದಲ್ಲಿ 87 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆಯ ನಿರ್ಮಾಣ ಮಾಡಿದ್ದು, ಇದರ ಜೊತೆಗೆ ಗ್ರಾಮಕ್ಕೆ 20 ಲಕ್ಷ ರೂಪಾಯಿಯ ಬಾಕ್ಸ್ ಚರಂಡಿ,20 ಲಕ್ಷ ರೂಪಾಯಿಯ ಎರಡು ಶಾಲಾಕೊಠಡಿ, 20 ಲಕ್ಷ ರೂಪಾಯಿ ಎಸ್ಟಿ ಸಮುದಾಯ ಭವನಕ್ಕೆ ಹಾಗೂ 50 ಲಕ್ಷ ರೂಪಾಯಿಯನ್ನು ಸಿಸಿ ರಸ್ತೆಗೆ ಮಂಜೂರು ಮಾಡಿಸಿದ್ದು ಸದ್ಯದರಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಕೋಟ್ಯಾಂತರ ರೂಪಾಯಿಯ ಅನುದಾನವನ್ನು ಹಾಕಿ ಈಗಾಗಲೇ ಅಭಿವೃದ್ದಿ ಮಾಡಿದ್ದು, ಅವಳಿ ತಾಲೂಕಿನ ಪ್ರತಿಯೊಂದು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಲಾಗುವುದು ನನ್ನ ಹೆಬ್ಬಯಕೆಯಾಗಿದೆ ಎಂದರು.
ಅವಳಿ ತಾಲೂಕನ್ನು ಧೂಳು ಮುಕ್ತ ಮಾಡ ಬೇಕೆಂಬುದು ನನ್ನ ಕನಸಾಗಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದ ಶಾಸಕರು, ಮಾತು ಸಾಧನೆಯಾಗ ಬಾರದು ಸಾಧನೆ ಮಾತಾಗ ಬೇಕೆಂದರು.
ಈಗಾಗಲೇ ಹೊನ್ನಾಳಿ ಆಸ್ಪತ್ರೆಯನ್ನು ನೂರು ಹಾಸಿಗೆಯಿಂದ 200 ಹಾಸಿಗೆಗೆ ಮೇಲ್ದರ್ಜೆಗೆರಿಸಲು ಹಾಗೂ ನ್ಯಾಮತಿ ಆಸ್ಪತ್ರೆಯನ್ನು ಐವತ್ತರಿಂದ ರಿಂದ ನೂರು ಹಾಸಿಗೆಗೆ ಮೇಲ್ದರ್ಜೆಗೇರಿಸಲು ಸಂಬಂಧ ಪಟ್ಟ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ಈಗಾಗಲೇ 518 ಕೋಟಿ ವೆಚ್ಚದಲ್ಲಿ ಅವಳಿ ತಾಲೂಕಿನ 118 ಕೆರೆಗಳನ್ನು ಹನುಮಸಾಗರ, ಗೋವಿನಕೋವಿ, ಬೆನಕನಹಳ್ಳಿ ಏತ ನೀರಾವರೀ ಯೋಜನೆಯ ಮೂಲಕ ತುಂಗಭದ್ರಾ ನದಿಯಿಂದ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಫಲವನಹಳ್ಳಿ,ಹೊಸಕೊಪ್ಪ ಇತರೇ 59 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಮಾಜಿ ಸಿಎಂ ಯಡಿಯೂರಪ್ಪನವರು ಅನುಮೋದನೆ ನೀಡಿದ್ದು, ಪ್ರಸ್ತುತ ಬಸವರಾಜ್ ಬೊಮ್ಮಾಯಿ ಅವರು 83 ಕೋಟಿಗೆ ಏರಿಕೆ ಮಾಡುವ ಮೂಲಕ ಆಡಳಿತಾತ್ಮಕ ಮಂಜೂರಾತಿ ಸದ್ಯದರಲ್ಲೇ ಸದ್ಯದರಲ್ಲದೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಯಶೋಧಮ್ಮ, ಸದಸ್ಯರು ಶಾರದಮ್ಮ,ಹನುಮಂತಪ್ಪ, ಚಂದ್ರಪ್ಪ ಸೇರಿದಂತೆ ಮುಖಂಡರಾದ ಅರಕೆರೆ ನಾಗರಾಜ್, ನರಸಗೊಂಡನಹಳ್ಳಿ ರಘು, ಚಂದ್ರಪ್ಪ ಸೇರಿದಂತೆ ಗ್ರಾಮದ ಮುಖಂಡರು ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *