ಹೊನ್ನಾಳಿ -ಪೆ ;-9 ಪಟ್ಟಣದಲ್ಲಿ ಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯವರ ವತಿಯಿಂದ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ವರು ಸುಮಾರು ವಿದೇಶಗಳನ್ನು ಸುತ್ತಿ ಹಲವಾರು ಸಂವಿಧಾನಗಳನ್ನು ಓದಿ ಭಾರತ ದೇಶದ ಎಲ್ಲಾ ವರ್ಗದ ಜನರಿಗೆ ಮತ್ತು ಸರ್ವಕಾಲಕ್ಕೆ ಅನ್ವಯಿಸುವಂತೆ ಸಂವಿಧಾನವನ್ನು ರಚಿಸಿದವರು. 1950 ಜನವರಿ 26ರಂದು ಸಂವಿಧಾನ ಸಮರ್ಪಣಾ ದಿನವನ್ನು ಬಾದಾಸಾಹೇಬರಿಗೆ ಸಮರ್ಪಿಸಬೇಕಾದುದು ಮಹತ್ವವಾದದ್ದು.
ಈ ದೇಶದ ಸಂವಿಧಾನದ ಅಡಿಯಲ್ಲಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿ ಸರ್ವಧರ್ಮ ಸರ್ವ ಜನ ಹಿತಕಾಯಬೇಕಾಗಿರುವುದು ನಾಯಾಧೀಶರ ಕರ್ತವ್ಯ ಶಾಸಕಾಂಗ ಕಾರ್ಯಾಂಗಗಳು ವಿಫಲವಾದಾಗ ನ್ಯಾಯಾಂಗವು ಎಚ್ಚರಿಸಿ ತಿದ್ದಬೇಕಾಗಿರುವುದು ನ್ಯಾಯಾಧೀಶರ ಕರ್ತವ್ಯ. ಬದಲಾಗಿ ನ್ಯಾಯಾಧೀಶರೇ ಜಾತಿ ಕಲಹ ಹಚ್ಚಿ ಸಮಾಜ ಸ್ವಾಸ್ವತೆಗೆ ಕಾರಣರಾದ ಮಾನ್ಯ ಮಲ್ಲಿಕಾರ್ಜುನ ಗೌಡರವರು ಈ ಜನವರಿ 26 – 2022ರಂದು ಡಾ|| ಅಂಬೇಡ್ಕರ್‌ರವರ ಭಾವ ಚಿತ್ರವನ್ನು ತೆಗೆಯಸಿ ಅಪಮಾನ ಮಾಡಿರುವ ಇವರನ್ನು ಸೇವೆಯಿಂದ ವಜಾ ಮಾಡಿ ನ್ಯಾಯಾಂಗ ತನಿಖೆ ನಡೆಸಲು ಈ ದೇಶದ ದಲಿತರಲ್ಲದೆ 135 ಕೋಟಿ ಜನರ ಆಶಾಕಿರಣವಾದ ಬಾಬಾ ಸಾಹೇಬ್ ಅಂಬೇಡ್ಕರ್‌ವರಿಗೆ ಅವಮಾನ ದಲಿತರನ್ನು ರೊಚ್ಚಿಗೆಬ್ಬಿಸಿ, ಆಶಾಂತಿ ಉಂಟು ಮಾಡಿ ಮಾಡಿದ ಮಲ್ಲಿಕಾರ್ಜುನ ಗೌಡರವರನ್ನು ವಜಾಗೊಳಿಸಲು ಒತ್ತಾಯಿಸಿ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಯಾವ ಜಿಲ್ಲೆಯಲ್ಲಿ ನ್ಯಾಯಾಧೀಶರಾಗಿ ಅವರು ಕಾರ್ಯನಿರ್ವಹಿಸಿರುತ್ತಾರೋ ಅಲ್ಲಿಯೂ ಸಹ ನಮ್ಮ ದಲಿತರ ಕೇಸುಗಳಿಗೆ ಅನ್ಯಾಯ ಮಾಡಿರಬಹುದು ಆದ್ದರಿಂದ ಅವುಗಳನ್ನು ನ್ಯಾಯಬದ್ಧವಾಗಿ ತನಿಖೆ ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಯವರು ಸಂಗೂಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಆಪಿಸಿನವರೆಗೆ ಪ್ರತಿಭಟನೆ ಮೆರವಣಿಗೆ ಮಾಡಿ ಮಾನ್ಯ ತಾಲೂಕ್ ತಹಿಶಿಲ್ದಾರ ಮುಖಾಂತರ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಅವರಿಗೆ ಮನವಿ ಪತ್ರವನ್ನು ಸಲ್ಲಿಸುವಂತೆ ಒತ್ತಾಯಿಸಿದರು .
ಉಪಸ್ಥಿತಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ದಿಡಗೂರು ರುದ್ರೇಶ್
ಸಂಘಟನಾ ಸಂಚಾಲಕರು ಕೆ.ಹೆಚ್. ರಾಜಪ್ಪ ಹೊನ್ನಾ
Ak. ತಾಲ್ಲೂಕು ಸಂಚಾಲಕರು, ಎ.ಕೆ.ಪರಮೇಶ್ವರಪ್ಪ ಬೆನಕನಹಳ್ಳಿ ಇನ್ನೂ ಮುಂತಾದವರು ಸಹ ಬಾಗಿಯಾಗಿದ್ದರು.