ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ರಾಂಪುರ ಕ್ಷೇತ್ರದ ಹಾಲಸ್ವಾಮೀಜಿಯ ಮಹಾರಥೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಹಾಲಸ್ವಾಮೀಜಿಯÀವರ ಕತೃಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಉಚಿತ ಶಿವದೀಕ್ಷಾ, ಹಾಲಸ್ವಾಮೀಜಿಯ , ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ, ಮಹಾರಥೋತ್ಸವದ ಕಂಕಣಧಾರಣೆ ಕಾರ್ಯಕ್ರಮದ ಶಿವದೀಕ್ಷೆ ಪಡೆದ ಜಂಗಮ ವಟುಗಳಿಗೆ ಮಂತ್ರೋಪದೇಶ ನೀಡಿ ಆಶೀರ್ವಚನ ನೀಡಿ ಮಾತನಾಡಿದರು.
ಪ್ರಪಂಚದಲ್ಲಿ ಶಿವದೀಕ್ಷೆಗಿಂತ ದೊಡ್ಡ ದೀಕ್ಷೆ ಬೇರೊಂದಿಲ್ಲ. ಶಿವ ದೀಕ್ಷೆ ತೆಗೆದು ಕೊಂಡವರಿಗೆ ಲೌಕಿಕ ಬದುಕಿನಲ್ಲೂ ದೈವಿ ಗುಣ ಜಾಸ್ತಿಯಾಗಲಿದೆ. ರುದ್ರಾಕ್ಷಿ ಮಾಲೆಯೊಂದಿಗೆ ಲಕ್ಷಾಂತರ ವರ್ಷದ ಹಿಂದೆಯೂ ಇಷ್ಟ ಲಿಂಗಪೂಜೆ ಮಾಡಲಾಗುತ್ತಿತ್ತು. ಶಿವದೀಕ್ಷೆ ಪಡೆದವರು ಮನಸ್ಸನ್ನು ಕೇಂದ್ರೀಕೃತ ಮಾಡಿಕೊಂಡು ಪಂಚಾಕ್ಷರಿ ಮಂತ್ರವನ್ನು ಪ್ರತಿನಿತ್ಯ ಹೇಳುತ್ತಾ ಬಂದರೆ ಮನಸ್ಸಿನಲ್ಲಿ ಆತ್ಮವಿಶ್ವಾಸ ಬೆಳೆಯಲಿದೆ. ರುದ್ರಾಕ್ಷಿ ಮಾಲೆ ಧರಿಸುವುದರಿಂದ ಆಯುರ್ವೇದದ ಪ್ರಕಾರ ಆರೋಗ್ಯವೂ ವೃದ್ಧಿಯಾಗಲಿದೆ, ಆಯಸ್ಸು ಜಾಸ್ತಿಯಾಗಲಿದೆ. ಎಲ್ಲಾ ವರ್ಗದವರು ಸಹ ಶಿವದೀಕ್ಷೆ ಪಡೆಯಬಹುದಾಗಿದೆ ಎಂದರು.
ಸನಾತನ ಹಿಂದೂ ಧರ್ಮವು ಅತ್ಯಂತ ಪ್ರಾಚೀನ ಧರ್ಮವಾಗಿದೆ. ನಮ್ಮ ಧರ್ಮದಲ್ಲಿ ಸತ್ಯ ಒಂದೇ, ಮಾರ್ಗ ಹಲವು. ಆದರೆ, ಬೇರೆ ಧರ್ಮಗಳಲ್ಲಿ ಸತ್ಯವೂ ಒಂದೇ, ಮಾರ್ಗವೂ ಒಂದೇ ಆಗಿದೆ. ಎಲ್ಲಾ ಧರ್ಮವೂ ಸಹ ಮಾನವೀಯತೆಯನ್ನು ಬೋಧಿಸುತ್ತದೆ. ಮಾನವೀಯತೆಗಿಂತ ದೊಡ್ಡ ಧರ್ಮ ಜಗತ್ತಿನಲ್ಲಿ ಬೇರೆ ಇಲ್ಲ. ದೇಶದ ಹಿರಿಮೆ ಸಾರುವುದೇ ಆ ದೇಶದ ಸಂಸ್ಕೃತಿ. ಸಂಸ್ಕಾರದ ವಿಕಾಸವಾದವೇ ಸಂಸ್ಕೃತಿಯಾಗಿದೆ’ ಎಂದರು.
ಸಾನಿಧ್ಯ ವಹಿಸಿದ ಹಾಲಸ್ವಾಮೀಜಿ ಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, `ಧರ್ಮವನ್ನು ಯಾರೂ ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂಬ ಮಾತಿನಂತೆ ಆಸ್ತಿಕರಾದ ನಮ್ಮೆಲ್ಲರ ಜೀವನ ಧರ್ಮವಾಗಬೇಕಾಗಿದೆ. ಹಿಂದೂ ಧರ್ಮವು ಮಾನವೀಯತೆಯ ನೆಲೆಗಟ್ಟಿನ ಮೇಲೆ ನಿಂತಿದೆ. ರಾಷ್ಟ್ರಕವಿ ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಎಂಬುದು ಎಲ್ಲಾ ಧರ್ಮಗಳಂತೆ ಹಿಂದೂ ಧರ್ಮದ ಮುಖ್ಯ ತಿರುಳಾಗಿದೆ’ ಎಂದರು.
ಶಿವದೀಕ್ಷ ಕಾರ್ಯಕ್ರಮದಲ್ಲಿ ಜಂಗಮ ವಟುಗಳು ಶಿವದೀಕ್ಷೆಯನ್ನು ಪಡೆದರು, ಗ್ರಾಮದ ಮನೆ ಮನೆಗೆ ತೆರಳಿ ಬೀಕ್ಷಾಟನೆ ನಡೆಸಿದರು. ಈ ಸಂದರ್ಭದಲ್ಲಿ ಹೊನ್ನಾಳಿ ಎಂ.ಎಸ್.ಶಾಸ್ತ್ರೀ ಹೊಳೆಮಠ್, ಪ್ರಕಾಶ್‍ಯ್ಯ , ಚೀಲೂರು ಮಠದ ವಿಶ್ವನಾಥಯ್ಯ , ಕಿರಣಶಾಸ್ತ್ರಿ , ರೇಣುಕಯ್ಯಶಾಸ್ತ್ರಿಕ್ಯಾಸಿನಕೆರೆ , ಚಂದ್ರಶೇಖರಯ್ಯಶಾಸ್ತ್ರಿಸೋಗಿ , ಗಂಗಾಧರಯ್ಯಶಾಸ್ತ್ರೀಆಶೋಕನಗರ ಸೇರಿದಂತೆ ಇತರರು ಇದ್ದರು.
ಬಾಕ್ಸ್‍ಃ-ಮಣ್ಣಿಗೆ ಸಂಸ್ಕಾರ ಕೊಟ್ಟಲ್ಲಿ ಮಡಿಕೆಯಾಗಿ, ಲೋಹಕ್ಕೆ ಸಂಸ್ಕಾರ ನೀಡಿದಲ್ಲಿ ಆಭರಣವಾಗಿ, ನೀರಿಗೆ ಸಂಸ್ಕಾರ ನೀಡಿದಲ್ಲಿ ತೀರ್ಥವಾಗುತ್ತದೆ. ಹಾಗೆಯೇ ತಾಯಂದಿರೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮನೆಯಲ್ಲಿ, ಮನದಲ್ಲಿ ಜ್ಯೋತಿ ಬೆಳಗುವಂತಾಗಬೇಕು. ಬದುಕಿನಲ್ಲಿ ಸತ್ಯ, ಶುದ್ಧ ಹಾಗೂ ಕಾಯಕ ಇರಬೇಕು ಕೋಣಂದೂರು ಶ್ರೀ ಶಿವಲಿಂಗೇಶ್ವರ ಬೃಹ್ಮನಮಠದ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ರಾಂಪುರ ಕ್ಷೇತ್ರದ ಹಾಲಸ್ವಾಮೀಜಿಯ ಮಹಾರಥೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಹಾಲಸ್ವಾಮೀಜಿಯÀವರ ಕತೃಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಉಚಿತ ಶಿವದೀಕ್ಷಾ, ಹಾಲಸ್ವಾಮೀಜಿಯ , ಜಗದ್ಗುರು ಪಂಚಾಚಾರ್ಯರ ಧ್ವಜಾರೋಹಣ, ಮಹಾರಥೋತ್ಸವದ ಕಂಕಣಧಾರಣೆ ಕಾರ್ಯಕ್ರಮದ ಶಿವದೀಕ್ಷೆ ಪಡೆದ ಜಂಗಮ ವಟುಗಳೊಂದಿಗೆ ಉಭಯ ಸ್ವಾಮೀಜಿಯವರು.