ಹೊನ್ನಾಳಿ-ಪೆ-21;- ಹೊನ್ನಾಳಿ ಪುರಸಭೆಗೆ ಈ ಹಿಂದೆ ಚೆನ್ನಗಿರಿ ಪುರಸಭೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದ ಎಚ್ಎಂ ವೀರಭದ್ರಯ್ಯ ನವರು ಹೊನ್ನಾಳಿ ಪುರಸಭೆಯ ಮುಖ್ಯಾಧಿಕಾರಿಗಳಾಗಿ ಇಂದು ಸಂಜೆ 5-30ಕ್ಕೆ ಸರಿಯಾಗಿ ಅಧಿಕಾರವನ್ನು ವಹಿಸಿಕೊಂಡರು.
ಹೆಚ್ಎಂ ವೀರಭದ್ರಯ್ಯನವರು ಅಧಿಕಾರವನ್ನು ವಹಿಸಿಕೊಂಡು ನಂತರ ಮಾತನಾಡಿ, ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ರವರ ಸಹಕಾರ ಮತ್ತು ಮಾರ್ಗದರ್ಶನ ದೊಂದಿಗೆ ಹಾಗೂ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪಕ್ಷಾತೀತವಾಗಿ ಸರ್ವ ಸದಸ್ಯರುಗಳ ಸಹಕಾರದೊಂದಿಗೆ ಹಾಗೂ ದಿನನಿತ್ಯ ಪುರಸಭೆಗೆ ಬರುವ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ತಕ್ಷಣವೇ ಸಮಸ್ಯೆಗಳಿಗೆ ಸ್ಫಂದಸಿ ಬಗೆ ಹರಿಸುವ ಕೆಲಸವನ್ನು ಪುರಸಭೆಯ ಸಿಬ್ಬಂದಿಗಳ ಹಾಗೂ ಪೌರ ಕಾರ್ಮಿಕರ ಸಹಕಾರದೊಂದಿಗೆ ಕೈಜೋಡಿಸಿ ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಎಬಿಸಿನ್ಯೂಸ್ ಆನ್ಲೈನ್ ಚಾನಲ್ ರವರಿಗೆ ತಿಳಿಸಿದರು.