ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ…. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ದೇವಸ್ಥಾನದ ನೂತನ ಆಡಳಿತ ಮಂಡಳಿ ಹಾಗೂ ಒಕ್ಕೂಟದ ಸಹಕಾರದೊಂದಿಗೆ ದಿನಾಂಕ 28 2 2022ರ ಸೋಮವಾರದಂದು ಶಿವರಾತ್ರಿಯ ಹಬ್ಬದ ಪ್ರಯುಕ್ತ ಐತಿಹಾಸಿಕ ಪ್ರಸಿದ್ಧ ಪಡೆದ ಶ್ರೀ ತೀರ್ಥ ಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ ರಸ್ತೆ ಉದ್ಯಾನವನ ಸಮುದಾಯ ಭವನವನ್ನು ಸುಮಾರು 280 ಜನ ಸ್ವಯಂಸೇವಕರ ತಂಡದೊಂದಿಗೆ ಸೇವಾಮನೋಭಾವ ದೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ನಿಸ್ವಾರ್ಥ ಸೇವೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಬಂಧುಗಳು ನೆರವೇರಿಸಿದರು.. ಈ ಒಂದು ಕಾರ್ಯಕ್ರಮದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಪದಾಧಿಕಾರಿಗಳು ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕದ ಓಂಕೇಶ್. ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಹರೀಶ್.
ಅರಳೆಹಳ್ಳಿ ವೀರಭದ್ರೇಶ್ವರ ದೇವಸ್ಥಾನ ಹಾಗೂ ತಿಮ್ಮಪ್ಪ ದೇವಸ್ಥಾನದಕಮಿಟಿಯ ಅಧ್ಯಕ್ಷರಾದ ರಮೇಶ್ ಒಕ್ಕೂಟದ ಅಧ್ಯಕ್ಷರುಗಳಾದ ಶ್ರೀಮತಿ ಶಾರದಮ್ಮ ಅಶ್ವಿನಿ ಈರನಗೌಡ ಗಂಗಣ್ಣ ವೀರೇಶ್ ಸೇವಾ ಪ್ರತಿನಿಧಿಗಳ ಆದ ಜಯಮ್ಮ ಶಶಿಕಲಾ ತುಂಗ ಮಮತಾ ಪ್ರಕಾಶ್ ಮಧುಕುಮಾರ್ ಉಪಸ್ಥಿತರಿದ್ದು ಈ ಒಂದು ಕಾರ್ಯದ ಮತ್ತು ಅರ್ಜಿ ವಹಿಸಿ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು ಧರ್ಮಕ್ಷೇತ್ರದ ಸ್ವಚ್ಛತೆಯ ಬಗ್ಗೆ ಸ್ಲೋಗನ್ ಗಳನ್ನು ಬರೆದು ದೇವಸ್ಥಾನಕ್ಕೆ ಬರುವ ಸದ್ಭಕ್ತ ರಲ್ಲಿ ಜಾಗೃತಿ ಮೂಡಿಸುವ ಮೂಲಕ ಶಾಶ್ವತವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ಜವಾಬ್ದಾರಿಯ ನಿರ್ಣಯವನ್ನು ಕಮಿಟಿಯವರು ಕೈಗೊಂಡರು…..