ನ್ಯಾಮತಿ ತಾಲೂಕಿನ ಬೆಳಗುತ್ತಿ ಕ್ಲಸ್ಟರ್ ಹಂತದ ಕೊನೆಯಎಸ್ಡಿಎಂಸಿ ಅಧ್ಯಕ್ಷರ ಮತ್ತು ಮುಖ್ಯೋಪಾಧ್ಯಾಯ ಸದಸ್ಯರ ತರಬೇತಿ ಕಾರ್ಯಗಾರವನ್ನು ಬೆಳಗುತ್ತಿ ಮಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಜಿ ಕುಬೇರಪ್ಪ ನವರು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕರ್ತವ್ಯಗಳ ತಮ್ಮ ಅನಿಸಿಕೆ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಎಲ್ಲಾ ಮಕ್ಕಳು ಪ್ರೌಢ ಶಿಕ್ಷಣಕ್ಕೆ ದಾಖಲಾಗುವಂತೆ ಕ್ರಮವಹಿಸಬೇಕು ದಾಖಲಾದ ಎಲ್ಲ ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು, ಶಾಲೆಯ ಕಟ್ಟಡ ಮತ್ತು ಆವರಣವನ್ನು ಅತಿಕ್ರಮಣ ಮಾಡದಂತೆ ನೋಡಿಕೊಳ್ಳಬೇಕು ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಸರ್ಕಾರದಿಂದ ನಿಯಮಾನುಸಾರ ಬೇಕಾದ ಉತ್ತೇಜಕಗಳನ್ನು ಸರ್ಕಾರಕ್ಕೆ ಒದಗಿಸಲು ಅಗತ್ಯ ಕ್ರಮವನ್ನು ವಹಿಸಬೇಕು.
ಶಾಲೆಗಳಲ್ಲಿ ಓದುವ ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ನಾವೆಲ್ಲರೂ ಸಹ ಶಿಕ್ಷಕರೊಂದಿಗೆ ಕೈಜೋಡಿಸಬೇಕು, ಬೇಕಾದ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಇಲಾಖೆಯಿಂದ ಏರ್ಪಡಿಸುವ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲು ತಿಳಿಸಬೇಕು. ಶಾಲೆಗೆ ಮಂಜೂರಾದ ಅನುದಾನವನ್ನು ಸಮಿತಿ ಮತ್ತು ಶಾಲಾ ಮುಖ್ಯ ಶಿಕ್ಷಕರು ಸಹಶಿಕ್ಷಕರು ರೊಂದಿಗೆ ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿ ಯೋಜನೆ ತಯಾರಿಸಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಸುರೇಶ್ ಎಸ್ ಎಚ್ ರಾಷ್ಟ್ರೀಯ ಶಿಕ್ಷಣ ನೀತಿ 20 19ನೇ ಕರಡು ನೀತಿಯ ಪ್ರಾರಂಭಿಕ ಬಾಲ್ಯ ಶಿಕ್ಷಣದ ಮಹತ್ವ ಹೆಚ್ಚು ನೀಡುತ್ತದೆ 3-6 ವರ್ಷ ವಯೋಮಾನದ ಎಲ್ಲಾ ವಿದ್ಯಾರ್ಥಿಗಳಿಗೆ 2025 ರ ವೇಳೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಗುರಿಯಾಗಿದೆ. ಸಾಕ್ಷರತೆ ಮತ್ತು ಗಣಿತ ಕೌಶಲ್ಯಗಳ ಕಲಿಕೆಗೆ ಸುಭದ್ರ ಅಡಿಪಾಯ ಒಂದರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಪ್ರಾರಂಭಿಕ ಮಟ್ಟದ ಭಾಷಾ ಕಲಿಕೆ ಮತ್ತು ಗಣಿತ ಕೌಶಲ್ಯಗಳನ್ನು ಕಲ್ಪಿಸುವ ಬಗ್ಗೆ ವಿಶೇಷ ಗಮನವನ್ನು ನೀಡುತ್ತದೆ. ಇಪ್ಪತ್ತು-ಇಪ್ಪತ್ತೈದು ರವೇಳೆಗೆ ತರಗತಿಯಲ್ಲಿ ಮತ್ತು ಅದಕ್ಕಿಂತ ಮೇಲಿನ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಭಾಷಾ ಸಾಮರ್ಥ್ಯ ಮತ್ತು ಗಣಿತ ಕೌಶಲಗಳನ್ನು ಹೊಂದಿರುವಂತೆ ನೀತಿಯ ಜಯವಾಗಿದೆ, ಪಠ್ಯಕ್ರಮ ಹಾಗೂ ಶಿಕ್ಷಣ ಕ್ರಮ ಮಕ್ಕಳ ಮೆದುಳಿನ ಚಟುವಟಿಕೆಗೆ ಹಾಗೂ ಕಲಿಕೆಗೆ ಸೂಕ್ತವಾದ ಶೈಕ್ಷಣಿಕ ಕ್ರಮ ಮತ್ತು ಪಠ್ಯಕ್ರಮವನ್ನು 5+3+3+4 ರ ಮಾದರಿಯಲ್ಲಿ ಫ್ರೀ ಕೆಜಿ +LKG+UKG+1+2=(5)—3+4+5=(3)—6+7+8=(3)-==9+10+11+12=(4) ಮುಂದಿನ ದಿನಗಳಲ್ಲಿ ಈ ಮಾದರಿಯಲ್ಲಿ ವಿನ್ಯಾಸಗೊಳಿಸಿ ಭಾಷೆ ಗಣಿತ ವಿಜ್ಞಾನ ಸಮಾಜ ವಿಜ್ಞಾನಗಳು ಮತ್ತು ಕ್ರೀಡೆಗಳಿಗೆ ಒತ್ತು ನೀಡಲಾಗುತ್ತದೆ ಹಾಗೆಯೇ ಶೈಕ್ಷಣಿಕ ಮತ್ತು ಔದ್ಯೋಗಿಕ ಶಿಕ್ಷಣ ವ್ಯವಸ್ಥೆಯ ಗುರಿಯಾಗಿದೆ ಎಂದು ತಿಳಿಸಿದರು.
ಕ್ಲಸ್ಟರ್ ನ 12 ಶಾಲೆಗಳ ಮುಖ್ಯೋಪಾಧ್ಯಾಯ ಎಸ್ಡಿಎಂಸಿ ಅಧ್ಯಕ್ಷ ಗಳು ಸದಸ್ಯರುಗಳು ಭಾಗವಹಿಸಿದರು, ಸಹ ಶಿಕ್ಷಕರಾದ ಶ್ರೀ ಜಿ ಸೋಮಶೇಖರ್ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕರಾದ ಶ್ರೀ ಸಿ ತೀರ್ಥ ಲಿಂಗಪ್ಪ ನಿರೂಪಿಸಿದರು, CRP ಆದ ಶ್ರೀ ಡಿ ನಾಗೇಶಪ್ಪ ಎಲ್ಲರನ್ನೂ ವಂದಿಸಿದರು.

Leave a Reply

Your email address will not be published. Required fields are marked *