ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2021-22ನೇ ಸಾಲಿನಲ್ಲಿ,
ಜಿಲ್ಲೆಯಲ್ಲಿ ವಿದ್ಯುತ್‍ಮಗ್ಗ ನೇಕಾರರ ಹಾಗೂ ಮಗ್ಗ ಪೂರ್ವ
ಚಟುವಟಿಕೆಗಳಲ್ಲಿ ತೊಡಗಿರುವ ಕೆಲಸಗಾರರ ಗಣತಿ ಹಾಗೂ
ಘಟಕಗಳ ಸಮೀಕ್ಷೆಯನ್ನು ಮೆ.ಅಕಾಡೆಮಿ ಆಫ್
ಮ್ಯಾನೇಜ್‍ಮೆಂಟ್ ಸ್ಟಡೀಸ್, ನವದೆಹಲಿ ಸಂಸ್ಥೆಯ ಮೂಲಕ
ಆರಂಭಿಸಲಾಗಿದೆ.
ಗಣತಿ ಹಾಗೂ ಸಮೀಕ್ಷೆಯ ನೋಂದಣಿ ಮಾಡಿಕೊಳ್ಳಲು ಈ
ಸಂಸ್ಥೆಯವರು ಜವಳಿ ಘಟಕಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ
ವಿದ್ಯುತ್ ಘಟಕಗಳ ಮಾಲೀಕರು /ನೇಕಾರರು ಮೂಲ
ದಾಖಲಾತಿಗಳಾದ ಆಧಾರ್ ಕಾರ್ಡ, ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ,
ಪಡಿತರ ಚೀಟಿ, ಘಟಕದ ನೋಂದಣಿ ಪ್ರಮಾಣ ಪತ್ರ, ವಿದ್ಯುತ್
ಮಂಜೂರಾತಿ ಪತ್ರ, ಇತ್ತೀಚಿನ ವಿದ್ಯುತ್ ಬಿಲ್, ಜಿಎಸ್‍ಟಿ ಪ್ರಮಾಣ
ಪತ್ರಗಳನ್ನು (ಲಭ್ಯವಿದ್ದಲ್ಲಿ) ಅವರಿಗೆ ನೀಡಿ ಸಮೀಕ್ಷೆಯ
ನೋಂದಣಿ ಕಾರ್ಯಕ್ಕೆ ಸಹಕರಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಕೈಮಗ್ಗ ಮತ್ತು ಜವಳಿ ಇಲಾಖೆ
ಉಪ ನಿರ್ದೇಶಕರ ಕಚೇರಿ ಹಾಗೂ ದೂ.ಸಂ:08192-262362 ಗೆ
ಸಂಪರ್ಕಿಸಬಹುದೆಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.