ಹೊನ್ನಾಳಿ,28: ರಾಜ್ಯದಲ್ಲಿ ಒಟ್ಟು 55 ಸಾವಿರಕ್ಕೂ ಹೆಚ್ಚು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಸಂಗತಿ ನಿಜಕ್ಕೂ ಆತಂಕಕಾರಿ ಬೆಳವಣಗೆಯಾಗಿದೆ ಎಂದು ರಾಜ್ಯ ಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ.ಈಶ್ವರಪ್ಪ ಹೇಳಿದರು.
ಅವರು ಪ್ರವಾಸಿ ಮಂದಿರದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಕುಟಂಬ ವರ್ಗದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾ ಹಮ್ಮಿಕೊಳ್ಳುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮೀಸಲಾತಿ ವಿರೋದಿಸುತ್ತಿದ್ದವರೇ ಇಂದು ತಮ್ಮನ್ನು ಒಳಪಂಗದ ಮೀಸಲಾತಿಗೆ ಸೇರಿಸಿ ಎಂದು ಬೇಡಿಕೆಯೊಂದಿಗೆ ಹೋರಾಟ ದುರದೃಷ್ಟಕರ ಸಂಗತಿಯಾಗಿ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಆಶಯದಂತೆ ತುಳಿತಕ್ಕೆ ಒಳಗಾಗದವರಿಗೆ ಸಂವಿಧಾನದಡಿಯಲ್ಲಿ ಮೀಸಲಾತಿ ನೀಡಲಾಗಿದೆ ಆದರೆ ಶಾಸಕರು ಅದನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದ ಅವರು 7600 ಜಾತಿಗಳಿದ್ದು. ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 3600 ಬೇಡ ಜಂಗಮರಿದ್ದು ಮೀಸಲಾತಿ ಸರ್ಟಿಪೀಕೇಟ್ ಪಡೆಯುವ ಅರ್ಹತೆ ಪಡೆದಿರುವ ಬೇಡಜಂಗಮರು ಹೊನ್ನಾಳಿಯಲ್ಲಿ ಯಾರು ಕಂಡುಬರುವುದಿಲ್ಲ.
ಡಾ.ಈಶ್ವರ್‍ನಾಯ್ಕ್ ಮಾತನಾಡಿ,ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ಮಗಳಿಗೆ ಪರಿಶಿಷ್ಟಜಾತಿ ನಕಲಿ ಜಾತಿ ಪ್ರಮಾಣಪತ್ರ ಕೊಡಿಸಿದ್ದಾರೆ ಅಲ್ಲದೆ ಅವರ ಸಹೋದರ ಡಾ.ಎಂ.ಪಿ.ಧಾರಕೇಶ್ವರಯ್ಯ ಅವರು ಸಹ ತಮ್ಮ ಮಗಳಿಗೆ ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡು ಪರಿಶಿಷ್ಟಜಾತಿ ಪಂಗಡದ ನಿಜವಾದ ಅರ್ಹ ಫಲಾನುಭವಿಗಳಿಗೆ ಮೋಸ ಮಾಡಿದ್ದಾರೆ,ಇದನ್ನು ಗಂಬೀರವಾಗಿ ಪರಿಗಣಿಸಿ ಅವರ ವಿರುದ್ದ ಪ್ರಕರಣ ದಾಖಲು ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಒತ್ತಾಯಕ್ಕೆ ಮಣಿದು ನಕಲಿ ಜಾತಿ ಪ್ರಮಾಣಪತ್ರ ನೀಡಿರುವ ಅಂದಿನ ಬೆಂಗಳೂರು ಉತ್ತರ ತಾಲೂಕಿನ ತಹಸೀಲ್ದಾರ್,ರಾಜಸ್ವ ನಿರೀಕ್ಷಕ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ವಿರುದ್ದ ಪರಿಶಿಷ್ಟಜಾತಿ ಹಾಗೂ ಪಂಗಡಗಳ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದರು.
ಜಿ.ಪಂ. ಮಾಜಿ ಅಧ್ಯಕ್ಷ ಆರ್.ನಾಗಪ್ಪ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ನೀಡಬೇಕಾದ ಎಸ್ಸಿ ಪ್ರಮಾಣಪತ್ರ ಪಡೆದಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಹಾಗೂ ಅವರ ಸಹೋದರರ ಪಡೆದು ಸಂವಿಧಾನದ ವಿರುದ್ದ ನಡೆದುಕೊಂಡಿದ್ದಾರೆ,ಅಲ್ಲದೆ 2017 ರಲ್ಲಿ
ಎಂ.ಪಿ.ರೇಣುಕಾಚಾರ್ಯ,ಎಂ.ಪಿ.ದ್ವಾರಕೇಶ್ವರಯ್ಯ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಪ್ರಮಾಣಪತ್ರದಲ್ಲಿ ಬೇಡಜಂಗಮ ಹಾಗೂ ಎಸ್ಸಿ ಜಾತಿ ನಮೂದಿಸಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ದಲಿತ ಮುಖಂಡ ಕೊಡತಾಳ್ ರುದ್ರೇಶ್ ಮಾತನಡಿ,ಇತರರಿಗೆ ಮಾದರಿಯಾಗಬೇಕಿದ್ದ ಶಾಸಕ ಎಂಪಿ.ರೇಣುಕಾಚಾರ್ಯ ಅವರು ನಕಲಿ ಜಾತಿ ಪ್ರಮಾಣಪತ್ರ ಪಡೆದು ಅವಳಿ ತಾಲೂಕಿನ ಪರಿಶಿಷ್ಟಜಾತಿಯವರ ಅನ್ನಕ್ಕೆ ಕನ್ನ ಹಾಕಿದ್ದಾರೆ,ಅವಳಿ ತಾಲೂಕಿನ ಜನತೆಗೆ ವಂಚನೆ ಮಾಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಜಿ.ಪಂ. ಮಾಜಿ ಸದಸ್ಯ ಶಿವರಾಂನಾಯ್ಕ್,ತಾ.ಪಂ.ಮಾಜಿ ಸದಸ್ಯ ಪೀರ್ಯನಾಯ್ಕ್,ಕ್ಯಾಸಿನಕೇರಿಶೇಖರಪ್ಪ,ಅರಕೆರಿ ಕೃಷ್ಣ,ಶಂಕರನಾಯ್ಕ್,ಬೆನಕನಹಳ್ಳಿಪರಮೇಶ್,ಸಿದ್ದೇಶ್‍ಮಾದಾಪುರ,ಚಂದ್ರಪ್ಪ ರವಿನಾಯ್ಕ ರಾಜಶೇಖರ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *