ಒಂದು ಪಾರಿವಾಳದ ಗುಂಪು ಮಸೀದಿ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದವು.
ರಂಜಾನ್ ಬಂತು ಮಸೀದಿಗೆ ಸುಣ್ಣಬಣ್ಣ ಬಳಿಯಲು ಎಲ್ಲಾ ಸ್ವಚ್ಛಗೊಳಿಸತೊಡಗಿದರು.
ಆಗ ಆ ಪಾರಿವಾಳಗಳು ಅಲ್ಲಿಂದ ಹಿಂದೂ ದೇವಾಲಯಕ್ಕೆ ಹೋಗಿ ವಾಸವಾದವು………….
ಕೆಲದಿನಗಳಲ್ಲಿ ದಸರಾ ಹಬ್ಬ ಬಂತು. ಅಲ್ಲಿಂದ ಪಾರಿವಾಳಗಳು ಹಾರಿ ಚರ್ಚ್ ಮೇಲೆ ನೆಲೆಸಿದವು.ಕ್ರಿಸ್ ಮಸ್ ವೇಳೆಗೆ ಮತ್ತೆ ಮಸೀದಿಗೆ ನೆಲೆ ಬದಲಾಯಿಸಿದವು………….
ಒಂದು ದಿನ ಮಸೀದಿ ಮುಂದೆ ಕೋಮುಗಲಭೆ ನಡೆಯಿತು. ಆಗ ಅದನ್ನು ನೋಡಿದ ಮರಿ ಪಾರಿವಾಳ ತಾಯಿ ಪಾರಿವಾಳವನ್ನು ಕೇಳಿತು…….
ಯಾರು ಅವರು ಬಡಿದಾಡಿಕೊಳ್ಳುತ್ತಿರುವುದು..?
ತಾಯಿ ಪಾರಿವಾಳ ಹೇಳಿತು…
ಅವರು ಮನುಷ್ಯರು ಮಗು…..
ಯಾಕೆ ಅವರು ಜಗಳವಾಡುತ್ತಿದ್ದಾರೆ……?
ಮಸೀದಿಗೆ ಹೋಗುವವರು ಮುಸ್ಲಿಮರಂತೆ…….
ಗುಡಿಗೆ ಹೋಗುವವರು ಹಿಂದುಗಳಂತೆ……..
ಚರ್ಚ್ ಗೆ ಹೋಗುವವರು ಕ್ರೈಸ್ತರಂತೆ……….
ಇದು ಅವರೊಳಗಿನ ಮತ ಮತಗಳ ಸಂಘರ್ಷಣೆ.
ಮರಿ ಪಾರಿವಾಳಕ್ಕೆ ಆಶ್ಚರ್ಯವಾಯಿತು.!
ನಾವು ಕೂಡ ಮಸೀದಿ ಮೇಲೆ ವಾಸಿಸುತ್ತೆವೆ……..
ಗುಡಿ ಗುಂಡಾರಗಳ ಮೇಲೆ ವಾಸಿಸುತ್ತೆವೆ……..
ಚರ್ಚ್ ಮೇಲೆ ವಾಸಿಸುತ್ತೆವೆ…..!
ನಾವು ಎಲ್ಲಿಗೆ ಹೋದರೂ ಕೂಡ ಪಾರಿವಾಳಗಳೇ ಆಗಿದ್ದೇವೆ ಆದರೆ ಈ ಮನುಷ್ಯರು ಯಾಕೆ ಹೀಗೆ….?
ಅವರು ಮನುಷ್ಯರು ಎಲ್ಲಿಗೆ ಹೋದರೂ ಮನುಷ್ಯರೇ ಅಲ್ಲವೇ…?
ತಾಯಿ ಪಾರಿವಾಳ ನಕ್ಕು ಹೇಳಿತು………..
ಮಗು ನಾವು ಅವರಿಗಿಂತ ಎತ್ತರದಲ್ಲಿದ್ದೇವೆ.ವಿಶಾಲವಾದ ಪ್ರಪಂಚದಲ್ಲಿ ಜೀವಿಸುತ್ತಿದೆವೆ ನಮ್ಮದು ನಿಷ್ಕಲ್ಮಶ ಸ್ವೇಚ್ಛಾ ಜಗತ್ತು. ಎಲ್ಲಾ ಜೀವಿಗಳಲ್ಲಿ ಮೇಧಾವಿಯಾದ ಮಾನವ ಕಣ್ಣಿಗೆ ಕಾಣದ ಅಮಾನವೀಯ ಕುಲ ಮತ ಜಾತಿ ಲಿಂಗ ವರ್ಗ ಎಂಬ ಗೋಡೆಯನ್ನು ನಿರ್ಮಿಸಿಕೊಂಡಿದ್ದಾನೆ……..
ಎಲ್ಲವನ್ನೂ ಬಿಟ್ಟರೆ ಮಾತ್ರ ಅವರು ನಮ್ಮ ‘ಎತ್ತರ’ಕ್ಕೆ ಬರುತ್ತಾನೆ. ಇಂತಹ ಕೋಮ ಘರ್ಷಣೆಗಳು ಯಾವಾಗ ಅಂತ್ಯವಾಗುತ್ತವೆಯೊ ಅಂದು ಮನುಕುಲ ಸುಖವಾಗಿ ನೆಮ್ಮದಿಯಾಗಿ ಬದುಕಲಿಕ್ಕೆ ಸಾಧ್ಯ ಎಂದು ಹಿರಿಯ ಪಾರಿವಾಳ ತನಗೆ ಜನಿಸಿದ ಮರಿ ಪರಿವಾಳಗೆ ಹೇಳಿದಾಗ ಅದನ್ನು ಕೇಳಿಸಿಕೊಂಡ ಮರಿ ಪಾರಿವಾಳವು ನಾವು ಮನುಷ್ಯರಿಗಿಂತ ಚಿಕ್ಕವರು ಅಂದುಕೊಂಡಿದ್ದೇವು ಆದರೆ ಬುದ್ಧಿಜೀವಿಗಳಾದ ಮನುಷ್ಯರು ಧರ್ಮ ಧರ್ಮ ಜಾತಿಗಳ ಮಧ್ಯೆ ಹೊಂದಾಣಿಕೆ ಇಲ್ಲದಾಗ ನೆಮ್ಮದಿಯಾಗಿ ಇರಲಿಕ್ಕೆ ಸಾಧ್ಯವಿಲ್ಲ ಎಂದು ಮುಗುಳ್ನಗೆ ನಕ್ಕು ತಾಯಿಗೆ ಹೇಳಿ ಸುಮ್ಮನಾಯಿತು. ಮರಿ ಪಾರಿವಾಳ ಹೇಳಿದ ಮಾತಿಗೆ ದೊಡ್ಡ ಪಾರಿವಾಳವು ತಲೆತಗ್ಗಿಸಿ ಮೂಕಪ್ರೇಕ್ಷಕರಾಗಿ ನಿಂತುಬಿಟ್ಟಿತು ಇದು ಪಾರಿವಾಳದ ಕಥೆ ಈ ಪಾರಿವಾಳಕ್ಕೆ ಇರುವ ಬುದ್ಧಿಯು ಮನುಷ್ಯರಿಗೆ ಬಂದರೆ ದೇಶದಲ್ಲಿ ಎಲ್ಲಾ ಧರ್ಮದವರು ಸಾಮರಸ್ಯದಿಂದ ಕೂಡಿ ಬದುಕಿದಾಗ ದೇಶ ಶಾಂತವಾಗಿ ಇರಬಹುದು ಎಂದು ಮನಗಾಣ ಬಹುದು ಇದು ಪಾರಿವಾಳಗಳ ತಾತ್ಪರ್ಯ.