ಹೊನ್ನಾಳಿ:- ಏಪ್ರಿಲ್- 30 :-ತಾಲೂಕಿನ ಕೆಂಗನಹಳ್ಳಿ ಗ್ರಾಮದಲ್ಲಿ ಸುಮಾರು 5 ತಿಂಗಳಿಂದ ಚೇತನ್ ಬೀನ್ ಬಸಲಿಂಗಪ್ಪ 22 ವರ್ಷದ ಯುವಕ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎ ಸಗಿರುವ ಹಿನ್ನಲೆಯಲ್ಲಿ ಆ ಯುವತಿಯು 4 ತಿಂಗಳ ಗರ್ಭ ಧರಿಸಲಿಕ್ಕೆ ಕಾರಣರಾಗಿದ್ದಾನೆ ಎಂದು ದೂರನ್ನು ಹೊನ್ನಾಳಿ ಪೊಲೀಸ್ ಠಾಣೆಗೆ ಕೂಟ್ಟ ತಕ್ಷಣ ಕೃತ್ಯ ಎಸಗಿದ ಆರೋಪಿ ಯನ್ನು ಹಿಡಿಯಲಿಕ್ಕೆ ಕಾರ್ಯಪ್ರವೃತ್ತರಾದ ಹೊನ್ನಾಳಿ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ಟಿವಿ ದೇವರಾಜ್ ಅವರ ನೇತೃತ್ವದಲ್ಲಿ ಪಿಎಸ್ಐ ಬಸವರಾಜ್ ಬಸವರಾಜ್ ಬಿರದಾರ್ ರವರ ತಂಡದಿಂದ ಕೃತ್ಯ ಎಸಗಿದ ಆರೋಪಿ ಯುವಕನನ್ನು ತಕ್ಷಣವೇ ಪತ್ತೆಹಚ್ಚಿ ಹೊನ್ನಾಳಿ ಪೊಲೀಸ್ ಠಾಣೆ ಗುನ್ನೆ ನಂ- 88/ 2022 ಕಲಂ 376(2) N 376(2) (i) 506 ಐಪಿಸಿ ಜೊತೆಗೆ 4.6 ಪೋಕ್ಸೋ ಆಕ್ಟ್ ಅಡಿಯಲ್ಲಿ ಬಂದಿಸಿ ಕೇಸ್ ದಾಖಲಿಸಲಾಗಿದೆ. ಲೈಂಗಿಕ ಕೃತ್ಯಕ್ಕೆ ಒಳಗಾದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಹೊನ್ನಾಳಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಟಿವಿ ದೇವರಾಜ್ ರವರು ಮಾಹಿತಿ ನೀಡಿದರು.