ಹೊನ್ನಾಳಿ;-ಏ-4- ತಾಲೂಕಿನ ಸಾಸವಳ್ಳಿ ಹೋಬಳಿ, ಹೊಸಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ವಿಜ್ರಂಬ್ರಣೆಯಿಂದ ನಡೆಯಿತು.
ಈ ರಥೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಎಸ್ ಪ್ರದೀಪ್ ಗೌಡರವರು ಶ್ರೀ ಆಂಜನೇಯ ಸ್ವಾಮಿಯ ಮೂರ್ತಿ ಮತ್ತು ರಥೋತ್ಸವಕ್ಕೆ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿ ಶ್ರೀ ಆಂಜನೇಯ ಸ್ವಾಮಿಯ ಹೊಸಳ್ಳಿ ಗ್ರಾಮಸ್ಥರಿಗೂ ಹಾಗೂ ಸುತ್ತಮುತ್ತಲಿನ ಗ್ರಾಮದವರಿಗೆ ಒಳಿತನ್ನು ಮಾಡಲಿ ಎಂದು ಸ್ವಾಮಿಯಲ್ಲಿ ಪ್ರಾರ್ಥಿಸಿದರು.
ನಂತರ ಹೊಸಳ್ಳಿ ಗ್ರಾಮಸ್ಥರಿಂದ ಅದ್ದೂರಿಯಾಗಿ ಡಿ ಎಸ್ ಪ್ರದೀಪ್ ಗೌಡ್ರರವರಿಗೆ ಸನ್ಮಾನವನ್ನು ಮಾಡಿದರು.
ಉಪಸ್ಥಿತಿಯಲ್ಲಿ ;-ಡಿ ಎಸ್ ಪ್ರದೀಪ್ ಗೌಡ್ರು ಕಾಂಗ್ರೆಸ್ ಪಕ್ಷದ ಮುಖಂಡರು ಹೊನ್ನಾಳಿ, ತಿರುಮಲ ಸ್ವಾಮಿ ಮತ್ತು ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರುಗಳು ಹಾಗೂ ಊರಿನ ಮುಖಂಡರುಗಳು ಮತ್ತು ಗ್ರಾಮಸ್ಥರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
