ಹುಣಸಘಟ್ಟ: ತ್ಯಾಜ್ಯ ಕಾಯ್ದೆಯ ಉದ್ದೇಶವು ನೈಸರ್ಗಿಕ ಸಂಪನ್ಮೂಲಗಳ ತರ್ಕಬದ್ಧ ಬಳಕೆಯನ್ನು ಉತ್ತೇಜಿಸುವ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುವುದು ಮತ್ತು ತ್ಯಾಜ್ಯದಿಂದ ಉಂಟಾಗುವ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಮತ್ತು ಹಾನಿಯನ್ನು ತಡೆಗಟ್ಟುವುದಾಗಿದೆ ಎಂದು ಸಿ ಎಂ ಆಪ್ತಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕುಳಗಟ್ಟೆ ಗ್ರಾಮದಲ್ಲಿ ಸುಮಾರು 18 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ವಚ್ಛ ಸಂಕೀರ್ಣ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿ ಮಾತನಾಡಿದ ಅವರು ಜನಸಂಖ್ಯೆ ಹೆಚ್ಚಳ ಮತ್ತು ಪ್ರಪಂಚಾದ್ಯಂತ ಜನರ ಸುಧಾರಿತ ಜೀವನ ಶೈಲಿಯು ಸಂಪನ್ಮೂಲಗಳ ಅತಿಯಾದ ಶೋಷಣೆಗೆ ಕಾರಣವಾಗುತ್ತಿದೆ.ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕ ಸರಿಯಾಗಿ ನಿರ್ವಹಣೆ ಆಗಬೇಕು. ಈ ನಿಟ್ಟಿನಲ್ಲಿ ಗ್ರಾಮದ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಗ್ರಾ ಪಂ ಅಧ್ಯಕ್ಷ ಚಂದ್ರಪ್ಪ ಬಂಗಾರಿ ಕಾರ್ಯಕ್ರಮದ ಅಧ್ಯಕ್ಷೆ ತೆ ವಯಿಸಿ ಮಾತನಾಡಿದ ಸಭೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ ಎಲ್ ರಂಗನಾಥ, ಬಗರುಕುಂ ಸಮಿತಿ ನಿರ್ದೇಶಕಮಹಾಂತೇಶ್, ಪಿ ಡಿ ಓ ರಾಮಪ್ಪ, ಕಾರ್ಯದರ್ಶಿ ಹೊನ್ನಪ್ಪ, ಗ್ರಾ ಪಂ ಉಪಾಧ್ಯಕ್ಷ ಗೀತಮ್ಮ, ಸದಸ್ಯರುಗಳಾದ ಎಂ ಆರ್ ಹನುಮಂತಪ್ಪ, ರತ್ನಮ್ಮ, ಹನುಮಮ್ಮ, ರಾಮಪ್ಪ, ರುದ್ರನ ಗೌಡಗ್ರಾಮದ ಮುಖಂಡರು ಹಾಗೂ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.
