ನ್ಯಾಮತಿ: ತಾಲೂಕ್ ಆಫೀಸ್ ಆವರಣದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ. 24ರಂದು ನ್ಯಾಮತಿಯಲ್ಲಿ ಎರಡನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಅದರ ಅಂಗವಾಗಿ ಕಸಾಪದ ಅಧ್ಯಕ್ಷ ಡಿ ಎಂ ಹಾಲರಾಧ್ಯ ಮತ್ತು ಉಪ ತಹಸಿಲ್ದಾರ್ ನಂಧ್ಯಪ್ಪರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಕಸಾಪದ ಅಧ್ಯಕ್ಷ ಡಿಎಂ ಹಾಲರಾಧ್ಯ ಮಾತನಾಡಿ ಈ ಸಭೆಯಲ್ಲಿ ಸರ್ವ ಸದಸ್ಯರು ಹಾಗೂ ಕನ್ನಡಪರ ಅಭಿಮಾನಿಗಳು ಫೆಬ್ರವರಿ 24 ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ಸರಳವಾಗಿ ಆಚರಿಸಬೇಕು ಅಥವಾ ಅದ್ದೂರಿಯಾಗಿ ಆಚರಿಸಬೇಕು ಎಂದು ಕೆಲವೂಂದು ಸಲಹೆ ಮತ್ತು ಸಹಕಾರ ಬಗ್ಗೆ ಚರ್ಚಿಸಲಾಯಿತು.
ನಿವೃತ್ತ ಉಪತಹಿಸಿಲ್ದಾರ್ ಡಿಟಿ ನಾಗರಾಜ್ ಮಾತನಾಡಿ ಕಸಾಪನ ಸಾಹಿತ್ಯ ಅಭಿರುಚ ಉಳ್ಳವರು ಮತ್ತು ಸಾರ್ವಜನಿಕರು ಒಟ್ಟಾಗಿ ಸೇರಿ ಒಂದು ದಿನದ ಈ ಕಾರ್ಯಕ್ರಮ ಅದ್ದೂರಿಯಾಗಿ ಮಾಡಬೇಕು ಎಂದರು.
ಸಮ್ಮೇಳನವನ್ನು ಪಟ್ಟಣದಲ್ಲಿರುವ ಮಹಾಂತೇಶ್ ಕಲ್ಯಾಣ ಮಂಟಪದಲ್ಲಿ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಸಮ್ಮೇಳದ ಮೆರವಣಿಗೆ ಮೂಲಕ ಸಾಂಸ್ಕೃತಿಕ ಕಲಾ ತಂಡಗಳೂಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು, ಬಾಲಕಿಯರ ಪ್ರೌಢಶಾಲೆ ಮೂಲಕ .ಡಾ ಗಂಗಪ್ಪ ಶಾಪಿನಿಂದ ಮಾರ್ಗವಾಗಿ ವೇದಿಕೆಗೆ ತೆರಳುವುದು ಹಾಗೂ ಪ್ರತಿಯೊಂದು ಇಲಾಖೆಯ ಸಲಹೆ ಸಹಕಾರ ಪಡೆದು ಕಾರ್ಯವನ್ನು ಹೇಗೆ ನಿಭಾಯಿಸುವುದು ಅದರ ಜೊತೆಗೆ ಎಲ್ಲ ಸಹಕಾರ ಸಂಘಗಳ ಸಹಕಾರ ಬಳಕೆ ಮತ್ತು ಸಾಹಿತಿಗಳ ಕವಿಗೋಷ್ಠಿ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದು, ಆಹಾರ ಸಮಿತಿ ಇನ್ನು ಮುಂತಾದ ಹಲವಾರು ಸಮಿತಿಗಳನ್ನು ಮುಂದಿನ ಎರಡು ಮೂರು ಸಭೆ ನಡೆಸಿ ತೀರ್ಮಾನಿಸಿ, ಪ್ರತಿಯೊಂದು ಇಲಾಖೆಯ ಸಹಕಾರದೊಂದಿಗೆ ಸಂಘ ಸಂಸ್ಥೆಗಳ ಸಹಕಾರ ,ಸಾರ್ವಜನಿಕರ ಸಲಹೆ ಸಹಕಾರ ಪಡೆದು ಅಂತಿಮ ನಿರ್ಧಾರ ಮತ್ತು ರೂಪುರೇಷೆಗಳನ್ನು ತಯಾರು ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿಎಂ ಹಾಲರಾಧ್ಯ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಡೆಪ್ಯೂಟಿ ತಹಿಸಿಲ್ದಾರ್ ಕೆಂಚಮ್ಮ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ, ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಮಪ್ಪ, ನ್ಯಾಮತಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿಜಯಕುಮಾರ, ಬೆಸ್ಕಾಂ ಅಧಿಕಾರಿ, ಗೃಹರಕ್ಷಕ ದಳದ ಅಧಿಕಾರಿ ರಾಘವೇಂದ್ರ ಮೊಳೆಕರ್, ಕಸಾಪದ ನಿಕಟ ಪೂರ್ವ ಅಧ್ಯಕ್ಷ ನಿಜಲಿಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಸರ್ವ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಅಲವಾರು ಸಂಘದ ಪದಾಧಿಕಾರಿಗಳು ಕನ್ನಡ ಪರ ಅಭಿಮಾನಿಗಳು ಸಹ ಉಪಸ್ಥಿತಿಯಲ್ಲಿದ್ದರು.