ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ
ಹೊನ್ನಾಳಿ : ತಾಲೂಕಿನ ಲಿಂಗಾಪುರ ಸರಕಾರಿ ಶಾಲೆ ಮಕ್ಕಳಿಗೆ ತಾಲೂಕು ಎಸ್‌ಡಿಎಂಸಿ ಅಧ್ಯಕ್ಷ ಎ.ಎಸ್. ಶಿವಲಿಂಗಪ್ಪ ಹುಣಸಘಟ್ಟ ರುದ್ರನಾಯಕ್ ನೇತೃತ್ವದಲ್ಲಿ ಭಾನುವಾರ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಾದ ವಾಟರ್ ಬಾಟಲ್, ಬ್ಯಾಗ್, ಬರೆಯುವುದಕ್ಕೆ ಸ್ಟ್ಯಾಂಡ್ ಸಾಮಾಗ್ರಿ ವಿತರಿಸಿದರು.
ಅಮೆರಿಕಾದ ಕಂಪನಿ ಇವುಗಳನ್ನು ವಿತರಿಸಿತು. ನಂತರ ಮಾತನಾಡಿದ ಅಧ್ಯಕ್ಷ ಶಿವಲಿಂಗಪ್ಪ, ಸರಕಾರಿ ಶಾಲೆಯನ್ನು ಅನೇಕರು ಕಡೆಗಣಿಸಿದ್ದು, ಅವುಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಿದೆ. ಸರಕಾರಿ ಶಾಲೆಯು ಬೆಳೆಯಬೇಕೆಂದು ನಮ್ಮ ಆಸೆಯಾಗಿದೆ ಎಂದರು.
ಸ್ಟಾವೇರ್ ಎಂಜಿನಿಯರ್ ವಿನಯ್, ಅಭಿಲಾಶ್, ಪ್ರದೀಪ್, ನಿರಂಜನ್ ಮೂರ್ತಿ ಭಾಗವಹಿಸಿದ್ದರು. ಮುಖ್ಯಶಿಕ್ಷಕ ರಂಗನಾಥ್, ಇಸಿಓ ರಾಜಶೇಖರಯ್ಯ, ಹನಗವಾಡಿ ಮುಖ್ಯೋಪಾಧ್ಯಾಯ ತಿಪ್ಪೇಶಪ್ಪ, ಲಿಂಗಾಪುರ ಶಾಲೆ ಅಧ್ಯಕ್ಷೆ ಸಾವಿತ್ರಮ್ಮ, ಉಪಾಧ್ಯಕ್ಷರು, ಸದಸ್ಯರು, ಪೋಷಕರು ಭಾಗವಹಿಸಿದ್ದರು.
