ನ್ಯಾಮತಿ: ತಾಲೂಕಿನ ಸೌಳಂಗ ಚೆಕ್ ಪೆÇೀಸ್ಟ್‍ನಲ್ಲಿ ಶುಕ್ರವಾರ ಮಧ್ಯಾಹ್ನ ವಾಹನ ತಪಾಸಣೆ ಮಾಡುವಾಗ ಆಡಿ, ಕ್ಯೂ ಎಸ್ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಲಕ್ಷ ರೂಗಳು ಪತ್ತೆಯಾಗಿವೆ. ರೂ. 1 ಲಕ್ಷ ರೂಪಾಯಿಗಳನ್ನು ಮೊತ್ತವನ್ನು ವಶಕ್ಕೆ ಪಡೆದು ಎಸ್ ಎಸ್ ಟಿ ಸೌಳಂಗ ಚೆಕ್ಪೋಸ್ಟ್ ಸಿಬ್ಬಂದಿ, ಪೆÇಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ವಶಕ್ಕೆ ಪಡೆದು ಎಪ್ ಎಸ್ ಟಿ ತಂಡದ ಮುಖಾಂತರ ಉಪಕಜಾನ ಅಧಿಕಾರಿ ಹೊನ್ನಾಳಿ ಇವರ ಸುಪರ್ದಿಗೆ ಒಪ್ಪಿಸಲಾಗಿದೆ.
ಸದರಿ ಮೊತ್ತವು ಜಯಪ್ರಕಾಶ್ ಬಿನ್ ಮಣಿಯಪ್ಪ ಇವರು ಹಾರೋಗೊಪ್ಪ ಮತ್ತು ನ್ಯಾಮತಿ ತಮ್ಮ ತೋಟದ ಕೆಲಸಗಾರರಿಗೆ ಬಟವಾಡಿ ಮಾಡಲು ಆರೋಗಪ್ಪ ಶಿಕಾರಿಪುರಕ್ಕೆ ಹಣವನ್ನು ತೆಗೆದುಕೊಂಡು ಹೋಗುವಾಗ ದಾಖಲೆ ಇಲ್ಲದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾಧಿಕಾರಿ ಅಭಿಷೇಕ್ ವಿ ತಿಳಿಸಿದ್ದಾರೆ.
ಎಸ್ ಎಸ್ ಟಿ , ತಂಡದ ಗಣೇಶ್ ಬಜಂತ್ರಿ ಪ್ರವೀಣ್ ಪಿ ಎಸ್ ಐ, ಮಂಜುನಾಥ್ ಟಿ ಎಂ, ಡಿ ಶಂಕರ್ ನಾಯ್ಕ, ಎಸ್ ಎಸ್ ಟಿ ತಂಡದ ರೇವಣಸಿದ್ದಪ್ಪ, ಮಲ್ಲಿಕಾರ್ಜುನ್ ಡಿ ಎಸ್ ಇದ್ದರು.