ನ್ಯಾಮತಿ: ತಾಲೂಕ್ ಆಫೀಸ್ ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವವನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮುಖ್ಯೇನ ಸರಳವಾಗಿ ಆಚರಿಸಲಾಯಿತು. ಡಿ ,ಟು ತಹಸಿಲ್ದಾರ್ ಎಚ್ ಬಿ ಗೋವಿಂದಪ್ಪ, ಸಮಾಜದ ಮುಖಂಡರಾದ ಮಂಜುನಾಥ್, ಕೊಡ್ತಾಳ ಸಿದ್ದೇಶ್, ಹರೀಶ್, ಚಂದ್ರಪ್ಪ ಜಿನೇಹಳ್ಳಿ, ನರಸಿಂಹ ಗೋವಿನಕೋವಿ ಸೇರಿದಂತೆ ತಾಲೂಕ ಕಚೇರಿ ಸಿಬ್ಬಂದಿ ವರ್ಗದವರು ಹಾಗೂ ಸಮಾಜದ ಬಾಂಧವರು ಭಾಗವಹಿಸಿದ್ದರು.