ನ್ಯಾಮತಿ ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಇಂದು ಯುಗಾದಿ ಹಬ್ಬ ನಡೆದು 8ನೇ ದಿನದ ಅಂಗವಾಗಿ ವರ್ಷದ ಮೊದಲ ಬೇಸಾಯವನ್ನ ಶ್ರೀ ದೇವರ ಜಮೀನಿನಲ್ಲಿ ಗ್ರಾಮದ ರೈತ ಬಾಂಧವರು ಭೂತಾಯಿಗೆ ಪೂಜೆ ಸಲ್ಲಿಸಿ ಕೃಷಿ ಚಟುವಟಿಕೆ ಆರಂಭಿಸಿದರು.
ಕೃಷಿ ಪರ ರೈತರಾದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಪರಮೇಶಣ್ಣನವರು ಮೊದಲನೆಯ ಕೃಷಿ ಚಟುವಟಿಕೆ ಬೇಸಾಯವನ್ನ ಪ್ರಾರಂಭಿಸಿ ನಂತರ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೊಸ ವರ್ಷದ ಯುಗಾದಿ ಹಬ್ಬದ ಅಂಗವಾಗಿ ಮಾದನೆಯ ದಿವಸ ಆಂಜನೇಯ ಸ್ವಾಮಿ ದೇವರಮೂರ್ತಿ ಹೊರಡಿಸಿಕೊಂಡು ಬಸವೇಶ್ವರ ಸ್ವಾಮಿಯ ಸಮ್ಮುಖದಲ್ಲಿ ಮೊದಲನೆಯ ಉಳಿಮೆಯನ್ನು ಯಾವ ರೈತ ಮಾಡಬೇಕು ಎಂದು ಆಂಜನೇಯ ಸ್ವಾಮಿ ಅಪ್ಪಣೆಯ ಮೇರೆಗೆ ರೈತನನ್ನು ಗುರುತಿಸುವ ಕಾರ್ಯ ನಡೆಯುತ್ತದೆ. ಗುರುತಿಸಿದ ನಂತರ ಯುಗಾದಿ ಹಬ್ಬವಾಗಿ ಎಂಟನೇ ದಿವಸಕ್ಕೆ ಮೊದಲನೇ ಬೇಸಾಯ ಮಾಡುವ ರೈತರ ಸಣ್ಣ ತಿಮ್ಮೊಳ್ ಶಿವಪ್ಪನವರ ಮಗ ತಿಮ್ಮೇಶ್ ಎಂಬುವ ರೈತ ಆಂಜನೇಯ ಸ್ವಾಮಿ ದೇವಸ್ಥಾನದ ದೇವರ ಜಮೀನಿನಲ್ಲಿ ಭೂಮಿ ತಾಯಿಗೆ ಪೂಜಾ ಕೈಂಕರ್ಯದೊಂದಿಗೆ ನೇಗಿಲು ಮತ್ತು ಜೋಡಿ ಎತ್ತುಗಳಿಗೆ ಪೂಜಿಸಿ, ಮೊದಲನೆಯ ಕೃಷಿ ಚಟುವಟಿಕೆ ಪ್ರಾರಂಭಿಸಿದ ನಂತರ ಊರಿನ ಪ್ರತಿಯೊಬ್ಬ ರೈತ ಕುಟುಂಬದವರು ಸುಮಾರು 200ಕ್ಕೂ ಹೆಚ್ಚು ಜೋಡಿತ್ತುಗಳ ಶೃಂಗರಿಸಿಕೊಂಡು ಹೆಗಲ ಮೇಲೆ ನೇಗಲನ್ನು ಹೊತ್ತುಕೊಂಡು ಬಂದು ಭೂಮಿ ತಾಯಿ ಮತ್ತು ನೇಗಿಲಿಗೆ ಪೂಜೆಯನ್ನ ಮಾಡಿ ಈ ವರ್ಷವೂ ಮಳೆ ಬೆಳೆ ಚೆನ್ನಾಗಿ ಆಗಿ, ಭೂಮಿತಾಯಿಯಲ್ಲಿ ನಾವು ಬಿತ್ತಿದಂತಹ ಬೀಜವೂ ಮೊಳಕೆಯಾಗಿ ಸಮೃದ್ಧಿಯಾಗಿ ಬೆಳೆದು, ಉತ್ತಮ ಫಸಲು ಬಂದು, ರೈತನ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಪುನಃ ತಮ್ಮ ತಮ್ಮ ಮನೆಗೆ ತೆರಳುತ್ತಾರೆ ಎಂದು ಗ್ರಾಮದ ಶಿವ ಬ್ಯಾಂಕಿನ ನಿರ್ದೇಶಕ ಬಸರಾಜಪ್ಪನವರು ತಿಳಿಸಿದರು. ಊರಿನ ಪ್ರತಿಯೊಂದು ರೈತ ಬಾಂಧವರು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.