ನ್ಯಾಮತಿ: ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ ಗುಡುಗು ಸಿಡಿಲು ಸಹಿತ ಮಿಂಚಿನ ಆರ್ಭಟದೊಂದಿಗೆ ಮಳೆ ಸುರಿದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ಕಡೆ ಅಶ್ವಿನಿ ಮಳೆಯು ಭೂಮಿಗೆ ತಂಪೆರೆದು ರೈತರಿಗೆ ಮಂದಹಾಸ ಮೂಡಿದ್ದರೂ ಸಹ ಇನ್ನೊಂದು ಕಡೆ ಗಾಳಿಯ ರಭಸಕ್ಕೆ ಕುದುರೆಕೊಂಡ ಗ್ರಾಮದಲ್ಲಿ 1 ಎಕ್ಕರೆ ಜಮೀನಿನಲ್ಲಿ ಬಾಳೆ ಬೆಳೆಯು ಪಸಲಿಗೆ ಬಂದಿತ್ತು, ಗಾಳಿಯ ರಭಸಕ್ಕೆ ಬಾಳೆ ಗಿಡಗಳು ನೆಲ ಕುರುಳಿ ಸುಮಾರು 1 ಲಕ್ಷ ರೂಗಳ ಷ್ಟು ಹಾನಿಯಾಗಿವೆ. ಇನ್ನೊಂದು ಕಡೆ ರಾಮೇಶ್ವರ ಗ್ರಾಮದಲ್ಲಿ 1 ಎಕ್ಕರೆ 30 ಗುಂಟೆ ಜಮೀನಿನಲ್ಲಿ ಮೆಕ್ಕೆಜೋಳದ ಬೆಳೆದಿದ್ದ ರೈತ ಮಳೆ ಮತ್ತು ಗಾಳಿಯ ಕಬಸಕ್ಕೆ ಮೆಕ್ಕೆಜೋಳ ನೆಲಕ್ಕುರುಳಿ ಸುಮಾರು 60 ಸಾವಿರ ರೂಗಳಷ್ಟು ಹಾನಿಯಾಗಿದೆ. ನ್ಯಾಮತಿ ಪಟ್ಟಣದ ಪೆÇಲೀಸ್ ಸ್ಟೇಷನ್ ಪಕ್ಕದಲ್ಲಿರುವ ಮನೆಯ ಯೊಂದರ ಮೇಲೆ ಮರವು ಬಿದ್ದು ಭಾಗಶ 1 ಲಕ್ಷರೂ ಹಾನಿಯಾಗಿದೆ ಎಂದು ಕಂದಾಯ ನಿರೀಕ್ಷಕರು ತಿಳಿಸಿದ್ದಾರೆ.