ನ್ಯಾಮತಿ :ಪಟ್ಟಣದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಸಮಿತಿಯ ವತಿಯಿಂದ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾ, ಪ್ರಭಾಮಲ್ಲಿಕಾರ್ಜುನ್ ಅವರ ಪರವಾಗಿ ಕಾಂಗ್ರೆಸ್ ಪಂಚ ನ್ಯಾಯ ಗ್ಯಾರಂಟಿ ಕಾರ್ಡುಗಳನ್ನು ಪಕ್ಷದ ಕಾರ್ಯಕರ್ತರು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆಯನ್ನು ನೆರವೇರಿಸಿ ಚಾಲನೆ ನೀಡಲಾಯಿತು. ಪಕ್ಷದ ಕಾರ್ಯಕರ್ತಗಳಿಂದ ಕಾಂಗ್ರೆಸ ಪಂಚನ್ಯಾಯ ಗ್ಯಾರಂಟಿ ಕಾರ್ಡುಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಿ ಚುನಾವಣಾ ಪ್ರಚಾರ ನಡೆಸಿದರು.ಪಟ್ಟಣದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಗುಂದೂರ್ ಲೋಕೇಶ್, ಮಾ ಗ್ರಾ ಪಂ ಸದಸ್ಯ ನಾಗರಾಜ ರೆಡ್ಡಿ, ಕಾರ್ಯದರ್ಶಿ ಕರಬಸಪ್ಪ ಮುಖಂಡರುಗಳಾದ ಷಣ್ಮುಖಪ್ಪ, ಉಮೇಶ ರೆಡ್ಡಿ, ಸುರೇಶ ರೆಡ್ಡಿ, ಶಿವಕುಮಾರ್, ಸಿಕೆ ಸುರೇಶ್, ಕುಂಬಾರ ಕರಬಸಪ್ಪ ಮೊಬೈಲ್ ಸಂತೋಷ್, ಮತ್ತು ಮಹಿಳಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಸಹ ಇದ್ದರು.