ದಾವಣಗೆರೆ, ಜುಲೈ 13  : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು (BLO) ಜೂನ್ 30 ರಿಂದಲೇ ಎನುಮೆರೇಷನ್ ಫಾರಂ ಗಳೊಂದಿಗೆ (Enumeration Forms) ಮತದಾರರ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಈ ಮಾಹಿತಿ ಸಂಗ್ರಹ ಹಾಗೂ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯು ಜೂನ್ 30 ರಿಂದ ಜುಲೈ 29 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಜೂನ್ 16 ರವರೆಗೆ ಒಟ್ಟು 14,99,282 ಮತದಾರರಿದ್ದು, ಬಿಎಲ್ಒಗಳಿಗೆ ಅಗತ್ಯವಿರುವ ಎಲ್ಲಾ ಫಾರಂಗಳನ್ನು ಮುದ್ರಿಸಿ ವಿತರಿಸಲಾಗಿದೆ.

ವಿಧಾನಸಭಾವಾರು ಎನುಮೆರೇಷನ್ ನಮೂನೆ ವಿತರಣೆ ಮತ್ತು ಗಣಕೀಕರಣ ಪ್ರಗತಿ:

ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಇಂದಿನವರೆಗೆ ಬಿಎಲ್ಒಗಳು ಒಟ್ಟು 14,99,282 ಎನುಮೆರೇಷನ್ ನಮೂನೆಗಳನ್ನು ವಿತರಿಸಿದ್ದು, ಈ ಪೈಕಿ 7,77,198 ನಮೂನೆಗಳನ್ನು ಗಣಕೀಕರಿಸಲಾಗಿದೆ.

ಕ್ಷೇತ್ರವಾರು ವಿವರ:

 103-ಜಗಳೂರು: ಒಟ್ಟು 2,00,836 ಮತದಾರರಿದ್ದು, ಬಿಎಲ್ಒಗಳಿಂದ ಎಲ್ಲಾ 2,00,836 ನಮೂನೆಗಳನ್ನು ವಿತರಿಸಲಾಗಿದ್ದು, 1,01,643 ನಮೂನೆಗಳನ್ನು ಗಣಕೀಕರಿಸಲಾಗಿದೆ.

105-ಹರಿಹರ: ಒಟ್ಟು 2,11,023 ಮತದಾರರಿದ್ದು, ಎಲ್ಲಾ 2,11,023 ನಮೂನೆಗಳನ್ನು ವಿತರಿಸಲಾಗಿದ್ದು,

1,32,135 ನಮೂನೆಗಳನ್ನು ಗಣಕೀಕರಿಸಲಾಗಿದೆ.

106-ದಾವಣಗೆರೆ ಉತ್ತರ : ಒಟ್ಟು 2,58,718 ಮತದಾರರಿದ್ದು, ಎಲ್ಲಾ 2,58,718 ನಮೂನೆಗಳನ್ನು ವಿತರಿಸಲಾಗಿದ್ದು, 63,783 ನಮೂನೆಗಳನ್ನು ಗಣಕೀಕರಿಸಲಾಗಿದೆ.

107-ದಾವಣಗೆರೆ ದಕ್ಷಿಣ : ಒಟ್ಟು 2,27,996 ಮತದಾರರಿದ್ದು, ಎಲ್ಲಾ 2,27,996 ನಮೂನೆಗಳನ್ನು ವಿತರಿಸಲಾಗಿದ್ದು, 66,343 ನಮೂನೆಗಳನ್ನು ಗಣಕೀಕರಿಸಲಾಗಿದೆ.

 108-ಮಾಯಕೊಂಡ : ಒಟ್ಟು 1,97,048 ಮತದಾರರಿದ್ದು, ಎಲ್ಲಾ 1,97,048 ನಮೂನೆಗಳನ್ನು ವಿತರಿಸಲಾಗಿದ್ದು, 1,46,248 ನಮೂನೆಗಳನ್ನು ಗಣಕೀಕರಿಸಲಾಗಿದೆ.

109-ಚನ್ನಗಿರಿ : ಒಟ್ಟು 2,03,628 ಮತದಾರರಿದ್ದು, ಎಲ್ಲಾ 2,03,628 ನಮೂನೆಗಳನ್ನು ವಿತರಿಸಲಾಗಿದ್ದು, 1,25,061 ನಮೂನೆಗಳನ್ನು ಗಣಕೀಕರಿಸಲಾಗಿದೆ.

110-ಹೊನ್ನಾಳಿ : ಒಟ್ಟು 2,00,033 ಮತದಾರರಿದ್ದು, ಎಲ್ಲಾ 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 1,08,985 ನಮೂನೆಗಳ ಗಣಕೀಕರಿಸಲಾಗಿದೆ.

ಸ್ಥಳಾಂತರ, ಮರಣ ಹಾಗೂ ದ್ವಿಪತಿ ಮತದಾರರ ಗುರುತಿಸುವಿಕೆ ಪ್ರಗತಿ:

ಮನೆ ಮನೆ ಭೇಟಿ ಸಂರ‍್ಭದಲ್ಲಿ ಜುಲೈ 13 ರ ವರೆಗೆ ಜಿಲ್ಲೆಯಾದ್ಯಂತ ಒಟ್ಟು 13,387 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 199 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 5096 ಶಾಶ್ವತ ವಲಸೆ, 5798 ಮರಣ ಪ್ರಕರಣ, 2231 ದ್ವಿಪ್ರತಿ ನಮೂನೆಗಳು ಹಾಗೂ 63 ಇತರೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.

ಕ್ಷೇತ್ರವಾರು ವಿವರ :

ಜಗಳೂರು ಕ್ಷೇತ್ರದಲ್ಲಿ ಒಟ್ಟು 1334 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 22 ಸಂಗ್ರಹವಾಗದ, 575 ಶಾಶ್ವತ ವಲಸೆ, 445 ಮರಣ, 286 ದ್ವಿಪ್ರತಿ ಹಾಗೂ 6 ಇತರೆ ಪ್ರಕರಣಗಳಿವೆ.

ಹರಿಹರ ಕ್ಷೇತ್ರದಲ್ಲಿ ಒಟ್ಟು 1954 ಪ್ರಕರಣಗಳು ಪತ್ತೆಯಾಗಿದ್ದು, 12 ಸಂಗ್ರಹವಾಗದ, 509 ಶಾಶ್ವತ ವಲಸೆ, 1041 ಮರಣ, 388 ದ್ವಿಪ್ರತಿ ಮತ್ತು 4 ಇತರೆ ಪ್ರಕರಣಗಳಿವೆ.

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಒಟ್ಟು 1698 ಪ್ರಕರಣಗಳಿದ್ದು, 21 ಸಂಗ್ರಹವಾಗದ, 575 ಶಾಶ್ವತ ವಲಸೆ, 875 ಮರಣ, 216 ದ್ವಿಪ್ರತಿ ಹಾಗೂ 11 ಇತರೆ ಪ್ರಕರಣಗಳಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 1330 ಪ್ರಕರಣಗಳಿದ್ದು, 40 ಸಂಗ್ರಹವಾಗದ, 366 ಶಾಶ್ವತ ವಲಸೆ, 558 ಮರಣ, 356 ದ್ವಿಪ್ರತಿ ಹಾಗೂ 10 ಇತರೆ ಪ್ರಕರಣಗಳಿವೆ.

ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟು 2769 ಪ್ರಕರಣಗಳಿದ್ದು, 58 ಸಂಗ್ರಹವಾಗದ, 1041 ಶಾಶ್ವತ ವಲಸೆ, 1264 ಮರಣ, 394 ದ್ವಿಪ್ರತಿ ಹಾಗೂ 12 ಇತರೆ ಪ್ರಕರಣಗಳಿವೆ.

ಚನ್ನಗಿರಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ 2151 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 27 ಸಂಗ್ರಹವಾಗದ, 1038 ಶಾಶ್ವತ ವಲಸೆ, 694 ಮರಣ, 375 ದ್ವಿಪ್ರತಿ ಹಾಗೂ 17 ಇತರೆ ಪ್ರಕರಣಗಳು ಸೇರಿವೆ.

ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 2151 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 19 ಸಂಗ್ರಹವಾಗದ, 992 ಶಾಶ್ವತ ವಲಸೆ, 921 ಮರಣ, 216 ದ್ವಿಪ್ರತಿ ಹಾಗೂ 03 ಇತರೆ ಪ್ರಕರಣಗಳು ಒಳಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ ಎಂ ಗಂಗಾಧರಸ್ವಾಮಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *