ದಾವಣಗೆರೆ, ಜುಲೈ 30 : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (SIR) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು (BLO) ಜೂನ್ 30 ರಿಂದಲೇ ಎನುಮೆರೇಷನ್ ಫಾರಂ ಗಳೊಂದಿಗೆ (Enumeration Forms) ಮತದಾರರ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಈ ಮಾಹಿತಿ ಸಂಗ್ರಹ ಹಾಗೂ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯು ಜೂನ್ 30 ರಿಂದ ಆಗಸ್ಟ್‌ 08 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಜೂನ್ 16 ರವರೆಗೆ ಒಟ್ಟು 14,99,282 ಮತದಾರರಿದ್ದು, ಬಿಎಲ್ಒಗಳಿಗೆ ಅಗತ್ಯವಿರುವ ಎಲ್ಲಾ ಫಾರಂಗಳನ್ನು ಮುದ್ರಿಸಿ ವಿತರಿಸಲಾಗಿದೆ.

ವಿಧಾನಸಭಾವಾರು ಎನುಮೆರೇಷನ್ ನಮೂನೆ ವಿತರಣೆ ಮತ್ತು ಗಣಕೀಕರಣ ಪ್ರಗತಿ:

ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಇಂದಿನವರೆಗೆ ಬಿಎಲ್ಒಗಳು ಒಟ್ಟು 14,99,282 ಎನುಮೆರೇಷನ್ ನಮೂನೆಗಳನ್ನು ವಿತರಿಸಿದ್ದು, ಈ ಪೈಕಿ 12,88,678  ನಮೂನೆಗಳನ್ನು ಗಣಕೀಕರಿಸಲಾಗಿದೆ.

ಕ್ಷೇತ್ರವಾರು ವಿವರ:

 103-ಜಗಳೂರು: ಒಟ್ಟು 2,00,836 ಮತದಾರರಿದ್ದು, ಬಿಎಲ್ಒಗಳಿಂದ ಎಲ್ಲಾ 2,00,836 ನಮೂನೆಗಳನ್ನು ವಿತರಿಸಲಾಗಿದ್ದು  1,80,783   ನಮೂನೆಗಳನ್ನು ಗಣಕೀಕರಿಸಲಾಗಿದೆ.

105-ಹರಿಹರ: ಒಟ್ಟು 2,11,023 ಮತದಾರರಿದ್ದು, ಎಲ್ಲಾ 2,11,023 ನಮೂನೆಗಳನ್ನು ವಿತರಿಸಲಾಗಿದ್ದು,

1,90,295 ನಮೂನೆಗಳನ್ನು ಗಣಕೀಕರಿಸಲಾಗಿದೆ.

106-ದಾವಣಗೆರೆ ಉತ್ತರ : ಒಟ್ಟು 2,58,718 ಮತದಾರರಿದ್ದು, ಎಲ್ಲಾ 2,58,718 ನಮೂನೆಗಳನ್ನು ವಿತರಿಸಲಾಗಿದ್ದು,  1,92,546  ನಮೂನೆಗಳನ್ನು ಗಣಕೀಕರಿಸಲಾಗಿದೆ.

107-ದಾವಣಗೆರೆ ದಕ್ಷಿಣ : ಒಟ್ಟು 2,27,996 ಮತದಾರರಿದ್ದು, ಎಲ್ಲಾ 2,27,996 ನಮೂನೆಗಳನ್ನು ವಿತರಿಸಲಾಗಿದ್ದು,  1,71,708 ನಮೂನೆಗಳನ್ನು ಗಣಕೀಕರಿಸಲಾಗಿದೆ.

 108-ಮಾಯಕೊಂಡ : ಒಟ್ಟು 1,97,048 ಮತದಾರರಿದ್ದು, ಎಲ್ಲಾ 1,97,048 ನಮೂನೆಗಳನ್ನು ವಿತರಿಸಲಾಗಿದ್ದು, 1,84,637 ನಮೂನೆಗಳನ್ನು ಗಣಕೀಕರಿಸಲಾಗಿದೆ.

109-ಚನ್ನಗಿರಿ : ಒಟ್ಟು 2,03,628 ಮತದಾರರಿದ್ದು, ಎಲ್ಲಾ 2,03,628 ನಮೂನೆಗಳನ್ನು ವಿತರಿಸಲಾಗಿದ್ದು,  1,85,304 ನಮೂನೆಗಳನ್ನು ಗಣಕೀಕರಿಸಲಾಗಿದೆ.

110-ಹೊನ್ನಾಳಿ : ಒಟ್ಟು 2,00,033 ಮತದಾರರಿದ್ದು, ಎಲ್ಲಾ 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 1,83,405 ನಮೂನೆಗಳನ್ನು ಗಣಕೀಕರಿಸಲಾಗಿದೆ.

ಸ್ಥಳಾಂತರ, ಮರಣ ಹಾಗೂ ದ್ವಿಪತಿ ಮತದಾರರ ಗುರುತಿಸುವಿಕೆ ಪ್ರಗತಿ:

ಮನೆ ಮನೆ ಭೇಟಿ ಸಂದರ್ಭದಲ್ಲಿ  ಜುಲೈ 30 ರ ವರೆಗೆ ಜಿಲ್ಲೆಯಾದ್ಯಂತ ಒಟ್ಟು  1,58,072 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ (ಡೂಪ್ಲಿಕೇಟ್) ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ  16,482 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 81,691  ಶಾಶ್ವತ ವಲಸೆ,   33,406  ಮರಣ ಪ್ರಕರಣ,   25,921 ದ್ವಿಪ್ರತಿ ನಮೂನೆಗಳು ಹಾಗೂ   572  ಇತರೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

ಕ್ಷೇತ್ರವಾರು ವಿವರ :

ಜಗಳೂರು ಕ್ಷೇತ್ರದಲ್ಲಿ ಒಟ್ಟು  17,291 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 691 ಸಂಗ್ರಹವಾಗದ, 9705   ಶಾಶ್ವತ ವಲಸೆ, 3628   ಮರಣ,  3218  ದ್ವಿಪ್ರತಿ ಹಾಗೂ   49 ಇತರೆ ಪ್ರಕರಣಗಳಿವೆ.

ಹರಿಹರ ಕ್ಷೇತ್ರದಲ್ಲಿ ಒಟ್ಟು 19,624 ಪ್ರಕರಣಗಳು ಪತ್ತೆಯಾಗಿದ್ದು, 3224   ಸಂಗ್ರಹವಾಗದ, 6547  ಶಾಶ್ವತ ವಲಸೆ, 4711  ಮರಣ,  5065  ದ್ವಿಪ್ರತಿ ಮತ್ತು   77  ಇತರೆ ಪ್ರಕರಣಗಳಿವೆ.

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಒಟ್ಟು  32,852  ಪ್ರಕರಣಗಳಿದ್ದು,    4054  ಸಂಗ್ರಹವಾಗದ, 17,643  ಶಾಶ್ವತ ವಲಸೆ, 6930  ಮರಣ, 4111  ದ್ವಿಪ್ರತಿ ಹಾಗೂ 114  ಇತರೆ ಪ್ರಕರಣಗಳಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 42,495  ಪ್ರಕರಣಗಳಿದ್ದು,    6673  ಸಂಗ್ರಹವಾಗದ,   22,919 ಶಾಶ್ವತ ವಲಸೆ,  6265  ಮರಣ,   6448   ದ್ವಿಪ್ರತಿ ಹಾಗೂ   190    ಇತರೆ ಪ್ರಕರಣಗಳಿವೆ.

ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟು 12,411  ಪ್ರಕರಣಗಳಿದ್ದು,    263 ಸಂಗ್ರಹವಾಗದ,  5975 ಶಾಶ್ವತ ವಲಸೆ,  4173 ಮರಣ, 1959 ದ್ವಿಪ್ರತಿ ಹಾಗೂ  41 ಇತರೆ ಪ್ರಕರಣಗಳಿವೆ.

ಚನ್ನಗಿರಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ  16,859 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ  544    ಸಂಗ್ರಹವಾಗದ, 9398  ಶಾಶ್ವತ ವಲಸೆ, 3593  ಮರಣ,  3286  ದ್ವಿಪ್ರತಿ ಹಾಗೂ 38 ಇತರೆ ಪ್ರಕರಣಗಳು ಸೇರಿವೆ.

ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು  16,540 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 1033 ಸಂಗ್ರಹವಾಗದ,   9504  ಶಾಶ್ವತ ವಲಸೆ,  4106  ಮರಣ, 1834  ದ್ವಿಪ್ರತಿ ಹಾಗೂ 63  ಇತರೆ ಪ್ರಕರಣಗಳು ಒಳಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ  ಗಂಗಾಧರಸ್ವಾಮಿ ಜಿ ಎಂ ಅವರು ತಿಳಿಸಿದ್ದಾರೆ.

**

Leave a Reply

Your email address will not be published. Required fields are marked *