ದಾವಣಗೆರೆ ಆಗಸ್ಟ್ 06 (ಕರ್ನಾಟಕ ವಾರ್ತೆ): ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆಯ ವೇಳಾಪಟ್ಟಿಯನ್ನು ಹೊರಡಿಸಿದ್ದು, ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನುಮೆರೇಷನ್ ನಮೂನೆಗಳ ಸಂಗ್ರಹ ಮತ್ತು ಗಣಕೀಕರಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಜೂನ್ 16 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಜೂನ್ 30 ರಿಂದ ಆಗಸ್ಟ್ 08 ರವರೆಗಿನ ಅವಧಿಯಲ್ಲಿ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಆಗಸ್ಟ್ 06 ರವರೆಗೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಎನುಮೆರೇಷನ್ ನಮೂನೆಗಳ ಹಂಚಿಕೆ ಮತ್ತು ಗಣಕೀಕರಣದ ಪ್ರಗತಿ ವಿವರಗಳು.
103–ಜಗಳೂರು ಕ್ಷೇತ್ರದಲ್ಲಿ ಒಟ್ಟು 2,00,836 ನಮೂನೆಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ 1,81,172 ನಮೂನೆಗಳನ್ನು ಗಣಕೀಕರಿಸಲಾಗಿದೆ. ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಸೇರಿದಂತೆ ಒಟ್ಟು 19,664 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 1,065 ಸಂಗ್ರಹವಾಗದ/ಗೈರು, 11,507 ಶಾಶ್ವತ ವಲಸೆ, 3,697 ಮರಣ, 3,334 ದ್ವಿಪ್ರತಿ ಹಾಗೂ 61 ಇತರೆ ಪ್ರಕರಣಗಳು ಸೇರಿವೆ.
105–ಹರಿಹರ ಒಟ್ಟು 2,11,023 ನಮೂನೆಗಳ ಪೈಕಿ 1,90,182 ನಮೂನೆಗಳನ್ನು ಗಣಕೀಕರಿಸಲಾಗಿದೆ. ಗುರುತಿಸಲಾದ 20,841 ಒಟ್ಟು ಪ್ರಕರಣಗಳಲ್ಲಿ 3,497 ಗೈರು/ಸಂಗ್ರಹವಾಗದ, 7,284 ಶಾಶ್ವತ ವಲಸೆ, 4,758 ಮರಣ, 5,225 ದ್ವಿಪ್ರತಿ ಮತ್ತು 77 ಇತರೆ ಪ್ರಕರಣಗಳಿವೆ.
106-ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ವಿತರಿಸಲಾದ 2,58,718 ನಮೂನೆಗಳಲ್ಲಿ 1,98,026 ನಮೂನೆಗಳ ಗಣಕೀಕರಿಸಲಾಗಿದೆ. ಗುರುತಿಸಲಾದ 60,692 ಪ್ರಕರಣಗಳಲ್ಲಿ 16,041 ಗೈರು, 31,640 ಶಾಶ್ವತ ವಲಸೆ, 7,534 ಮರಣ 4,801 ದ್ವಿಪ್ರತಿ ಹಾಗೂ 676 ಇತರೆ ಪ್ರಕರಣಗಳು ನಮೂದಾಗಿವೆ.
107-ದಾವಣಗೆರೆ ದಕ್ಷಿಣ ಒಟ್ಟು 2,27,996 ನಮೂನೆಗಳಲ್ಲಿ 1,74,189 ನಮೂನೆಗಳನ್ನು ಗಣಕೀಕರಿಸಲಾಗಿದೆ. ಗುರುತಿಸಲಾದ 53,807 ಪ್ರಕರಣಗಳ ಪೈಕಿ 10,050 ಗೈರು, 29,383 ಶಾಶ್ವತ ವಲಸೆ, 6,628 ಮರಣ, 7,277 ದ್ವಿಪ್ರತಿ ಹಾಗೂ 469 ಇತರೆ ಪ್ರಕರಣಗಳನ್ನು ಗುರುತಿಸಲಾಗಿದೆ.
108–ಮಾಯಕೊಂಡ: ಹಂಚಿಕೆಯಾದ 1,97,048 ನಮೂನೆಗಳ ಪೈಕಿ 1,84,602 ನಮೂನೆಗಳು ಗಣಕೀಕರಿಸಲಾಗಿದೆ. ಒಟ್ಟು 12,446 ಪ್ರಕರಣಗಳಲ್ಲಿ 263 ಗೈರು, 5,991 ಶಾಶ್ವತ ವಲಸೆ, 4,171 ಮರಣ, 1,980 ದ್ವಿಪ್ರತಿ ಮತ್ತು 41 ಇತರೆ ಪ್ರಕರಣಗಳು ಒಳಗೊಂಡಿವೆ.
109–ಚನ್ನಗಿರಿ: ವಿತರಿಸಿದ 2,03,628 ನಮೂನೆಗಳಲ್ಲಿ 1,85,787 ನಮೂನೆಗಳ ಗಣಕೀಕರಿಸಲಾಗಿದೆ. ಗುರುತಿಸಲಾದ 1,78,41 ಪ್ರಕರಣಗಳಲ್ಲಿ 618 ಗೈರು, 10,122 ಶಾಶ್ವತ ವಲಸೆ, 3,646 ಮರಣ, 3,415 ದ್ವಿಪ್ರತಿ ಹಾಗೂ 40 ಇತರೆ ಪ್ರಕರಣಗಳು ಸೇರಿವೆ.
110–ಹೊನ್ನಾಳಿ: ಕ್ಷೇತ್ರದಲ್ಲಿ 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 1,83,461 ನಮೂನೆಗಳನ್ನು ಗಣಕೀಕರಿಸಲಾಗಿದೆ. ಒಟ್ಟು 16,572 ಪ್ರಕರಣಗಳ ಪೈಕಿ 1,011 ಗೈರು, 9,515 ಶಾಶ್ವತ ವಲಸೆ, 4,122 ಮರಣ, 1,864 ದ್ವಿಪ್ರತಿ ಹಾಗೂ 60 ಇತರೆ ಪ್ರಕರಣಗಳು ಪತ್ತೆಯಾಗಿವೆ.
ಸಮಗ್ರವಾಗಿ ಜಿಲ್ಲೆಯಾದ್ಯಂತ ವಿತರಿಸಲಾದ ಒಟ್ಟು 14,99,282 ಎನುಮೆರೇಷನ್ ನಮೂನೆಗಳ ಪೈಕಿ ಈವರೆಗೆ 1297419 ನಮೂನೆಗಳನ್ನು ಗಣಕೀಕರಿಸಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಒಟ್ಟು 2,01,863 ಸ್ಥಳಾಂತರ/ಮರಣ/ದ್ವಿಪತಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 32,545 ಗೈರು/ಸಂಗ್ರಹವಾಗದ, 1,05,442 ಶಾಶ್ವತ ವಲಸೆ, 34,556 ಮರಣ, 27,896 ದ್ವಿಪ್ರತಿ ಹಾಗೂ 1,424 ಇತರೆ ಪ್ರಕರಣಗಳು ಸೇರಿವೆ ಎಂದು ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಅವರು ತಿಳಿಸಿದ್ದಾರೆ.

