ದಾವಣಗೆರೆ, ಆಗಸ್ಟ್ 13: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಅಂಗವಾಗಿ ಮನೆ ಮನೆಗೆ ಭೇಟಿ ನೀಡಿ ಎನುಮೆರೇಷನ್ ಫಾರ್ಮ್ಗಳ ವಿತರಣೆ, ಸಂಗ್ರಹಣೆ ಹಾಗೂ ಗಣಕೀಕರಣ ಕಾರ್ಯ ಭರದಿಂದ ಸಾಗಿದೆ.

ಜಿಲ್ಲೆಯಲ್ಲಿರುವ ಒಟ್ಟು 14,99,282 ಮತದಾರರಿಗೆ ನಮೂನೆಗಳನ್ನು ಹಂಚಿಕೆ ಮಾಡಲಾಗಿದ್ದು, 12,97,821 ನಮೂನೆಗಳು ಗಣಕೀಕರಣವಾಗಿದೆ. ಆಗಸ್ಟ್ 13, 2026 ರವರೆಗಿನ ಪ್ರಗತಿ:
103- ಜಗಳೂರು ಕ್ಷೇತ್ರ: ವಿತರಿಸಲಾದ 2,00,836 ನಮೂನೆಗಳಲ್ಲಿ 1,80,989 ಗಣಕೀಕರಣಗೊಂಡಿದ್ದು, 19,847 ಪ್ರಕರಣಗಳು ಗುರುತಿಸಲಾಗದ ಸ್ಥಳಾಂತರ/ವಲಸೆ/ಮರಣ/ದ್ವಿಪ್ರತಿ/ಇತರೆ , 1,062 ಸಂಗ್ರಹವಾಗದ/ಗೈರು, 11,620 ಶಾಶ್ವತ ವಲಸೆ, 3,716 ಮರಣ, 3,393 ದ್ವಿಪ್ರತಿ, 56 ಇತರೆ ಕಂಡುಬಂದಿವೆ.
105- ಹರಿಹರ ಕ್ಷೇತ್ರ: ವಿತರಿಸಲಾದ 2,11,023 ನಮೂನೆಗಳಲ್ಲಿ 1,90,031 ಗಣಕೀಕರಣಗೊಂಡಿದ್ದು, 20,992 ಪ್ರಕರಣಗಳು ಗುರುತಿಸಲಾಗದ ಸ್ಥಳಾಂತರ/ವಲಸೆ/ಮರಣ/ದ್ವಿಪ್ರತಿ/ಇತರೆ , 3,505 ಸಂಗ್ರಹವಾಗದ/ಗೈರು, 7,310 ಶಾಶ್ವತ ವಲಸೆ, 4,781 ಮರಣ, 5,319 ದ್ವಿಪ್ರತಿ, 77 ಇತರೆ ದಾಖಲಾಗಿವೆ.
106- ದಾವಣಗೆರೆ ಉತ್ತರ ಕ್ಷೇತ್ರ: ವಿತರಿಸಲಾದ 2,58,718 ನಮೂನೆಗಳಲ್ಲಿ 1,98,736 ಗಣಕೀಕರಣಗೊಂಡಿದ್ದು, 59,987 ಪ್ರಕರಣಗಳು ಗುರುತಿಸಲಾಗದ ಸ್ಥಳಾಂತರ/ವಲಸೆ/ಮರಣ/ದ್ವಿಪ್ರತಿ/ಇತರೆ 15,564 ಸಂಗ್ರಹವಾಗದ/ಗೈರು, 31,399 ಶಾಶ್ವತ ವಲಸೆ, 7,548 ಮರಣ, 4,823 ದ್ವಿಪ್ರತಿ, 653 ಇತರೆ ಪತ್ತೆಯಾಗಿವೆ.
107- ದಾವಣಗೆರೆ ದಕ್ಷಿಣ ಕ್ಷೇತ್ರ: ವಿತರಿಸಲಾದ 2,27,996 ನಮೂನೆಗಳಲ್ಲಿ 1,74,358 ಗಣಕೀಕರಣಗೊಂಡಿದ್ದು, 53,638 ಪ್ರಕರಣಗಳು ಗುರುತಿಸಲಾಗದ ಸ್ಥಳಾಂತರ/ವಲಸೆ/ಮರಣ/ದ್ವಿಪ್ರತಿ/ಇತರೆ 9,989 ಸಂಗ್ರಹವಾಗದ/ಗೈರು, 29,215 ಶಾಶ್ವತ ವಲಸೆ, 6,627 ಮರಣ, 7,346 ದ್ವಿಪ್ರತಿ, 461 ಇತರೆ ಕಂಡುಬಂದಿವೆ.
108- ಮಾಯಕೊಂಡ ಕ್ಷೇತ್ರ: ವಿತರಿಸಲಾದ 1,97,048 ನಮೂನೆಗಳಲ್ಲಿ 1,84,527 ಗಣಕೀಕರಣಗೊಂಡಿದ್ದು, 12,521 ಪ್ರಕರಣಗಳು ಗುರುತಿಸಲಾಗದ ಸ್ಥಳಾಂತರ/ವಲಸೆ/ಮರಣ/ದ್ವಿಪ್ರತಿ/ಇತರೆ 260 ಸಂಗ್ರಹವಾಗದ/ಗೈರು, 6,022 ಶಾಶ್ವತ ವಲಸೆ, 4,182 ಮರಣ, 2,019 ದ್ವಿಪ್ರತಿ, 38 ಇತರೆ ದಾಖಲಾಗಿವೆ.
109- ಚನ್ನಗಿರಿ ಕ್ಷೇತ್ರ: ವಿತರಿಸಲಾದ 2,03,628 ನಮೂನೆಗಳಲ್ಲಿ 1,85,629 ಗಣಕೀಕರಣಗೊಂಡಿದ್ದು, 17,999 ಪ್ರಕರಣಗಳು ಗುರುತಿಸಲಾಗದ ಸ್ಥಳಾಂತರ/ವಲಸೆ/ಮರಣ/ದ್ವಿಪ್ರತಿ/ಇತರೆ 622 ಸಂಗ್ರಹವಾಗದ/ಗೈರು, 10,202 ಶಾಶ್ವತ ವಲಸೆ, 3,650 ಮರಣ, 3,485 ದ್ವಿಪ್ರತಿ, 40 ಇತರೆ ಕಂಡುಬಂದಿವೆ.
110- ಹೊನ್ನಾಳಿ ಕ್ಷೇತ್ರ: ವಿತರಿಸಲಾದ 2,00,033 ನಮೂನೆಗಳಲ್ಲಿ 1,83,551 ಗಣಕೀಕರಣಗೊಂಡಿದ್ದು, 16,482 ಪ್ರಕರಣಗಳು ಗುರುತಿಸಲಾಗದ ಸ್ಥಳಾಂತರ/ವಲಸೆ/ಮರಣ/ದ್ವಿಪ್ರತಿ/ಇತರೆ ,946 ಸಂಗ್ರಹವಾಗದ/ಗೈರು, 9,474 ಶಾಶ್ವತ ವಲಸೆ, 4,135 ಮರಣ, 1,868 ದ್ವಿಪ್ರತಿ, 59 ಇತರೆ ದಾಖಲಾಗಿವೆ.
ಒಟ್ಟಾರೆ ಜಿಲ್ಲಾ ಪ್ರಗತಿ: ಜಿಲ್ಲೆಯ ಒಟ್ಟು 14,99,282 ನಮೂನೆಗಳ ಪೈಕಿ 12,97,821 ನಮೂನೆಗಳು ಸಶಸ್ತ್ರವಾಗಿ ಗಣಕೀಕರಣಗೊಂಡಿದ್ದು, ಉಳಿದಂತೆ ಪತ್ತೆಯಾದ ಒಟ್ಟು 2,01,466 ವಿಶೇಷ ಪ್ರಕರಣಗಳಲ್ಲಿ 31,948 ಸಂಗ್ರಹವಾಗದ/ಗೈರು, 1,05,242 ಶಾಶ್ವತ ವಲಸೆ, 34,639 ಮರಣ ಹೊಂದಿದವರು, 28,253 ದ್ವಿಪ್ರತಿ ಹಾಗೂ 1,384 ಇತರೆ ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ರವರು ತಿಳಿಸಿದ್ದಾರೆ.
