Category: ದಾವಣಗೆರೆ

ಸಿದ್ದಗಂಗಾ ಶಿಕ್ಷಣ ಸಂಸ್ಥೆಯಿಂದ ಆಹಾರ ಕಿಟ್ ವಿತರಣೆ

ದಾವಣಗೆರೆ ಏ.26 ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಇಂದು ನಗರದ ಸಿದ್ದಗಂಗಾ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಾಲೆಯ ಸಂಸ್ಥಾಪಕರಾದ ಶಿವಣ್ಣನವರ ಪುಣ್ಯತಿಥಿಯಲ್ಲಿ ಪಾಲ್ಗೊಂಡು, ಇದೇ ವೇಳೆ ಸಿದ್ದಗಂಗಾ ಸಂಸ್ಥೆಯಿಂದ ನೀಡಲಾದ ಆಹಾರಧಾನ್ಯಗಳ ಕಿಟ್‍ಗಳನ್ನು ಶಾಲಾ ಕಾಲೇಜಿನ ಸಿಬ್ಬಂದಿಗಳು ಹಾಗೂ ಪತ್ರಿಕಾ ವಿತರಕರಿಗೆ ವಿತರಿಸಿದರು.…

ಜಿಲ್ಲಾಧಿಕಾರಿಗಳಿಂದ ಗೋಶಾಲೆ ಭೇಟಿ-ಹಣ್ಣು, ಮೇವು ನೀಡಿಕೆ

ದಾವಣಗೆರೆ ಏ.26 ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಹಳೇ ಪಿ.ಬಿ.ರಸ್ತೆಯಲ್ಲಿರುವ ಶ್ರೀ ಭಗವಾನ್ ಮಹಾವೀರ ಗೋಶಾಲೆಗೆ ಭೇಟಿ ನೀಡಿ, ಈ ಗೋಶಾಲೆಯಲ್ಲಿದ್ದ ಸುಮಾರು 450 ಹಸುಗಳನ್ನು ವೀಕ್ಷಿಸಿ, ಹಣ್ಣು, ತರಕಾರಿ ಮತ್ತು ಮೇವನ್ನು ನೀಡಿದರು. ಹಾಗೂ ಬಸವರೇಶ್ವರ ಜಯಂತಿ ಪ್ರಯುಕ್ತ ಗೋಪೂಜೆ…

ಬಸವೇಶ್ವರರಂತೆ ಕಾಯಕದಲ್ಲಿ ದೇವರನ್ನು ಕಾಣಬೇಕು : ಜಿಲ್ಲಾಧಿಕಾರಿ

ದಾವಣಗೆರೆ ಏ.26 ದಿನದ 24 ತಾಸಿನೊಳಗೆ ಒಂದು ನಿಮಿಷವಾದರೂ ಬಸವಣ್ಣನವರಾಗುವ ಪ್ರಯತ್ನವನ್ನು ನಾವೆಲ್ಲ ಮಾಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನುಡಿದರು. ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಏರ್ಪಡಿಸಲಾಗಿದ್ದ ಬಸವೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಬಸವರೇಶ್ವರರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಂತರ ಮಾತನಾಡಿದರು.…

ಜಗಜ್ಯೋತಿ ಬಸವೇಶ್ವರ ನಾಡು ಕಂಡ ಶ್ರೇಷ್ಠ ರಾಜಕಾರಣಿ : ಮೇಯರ್ ಅಜಯ್‍ಕುಮಾರ್

ದಾವಣಗೆರೆ ಏ.26 ಸಮಾನತೆಯ ಹರಿಕಾರ, ಮಹಾ ಮಾನವÀತಾವಾದಿ, ತತ್ವಜ್ಞಾನಿ ಬಸವೇಶ್ವರÀರು 12 ನೇ ಶತಮಾನದ ಶ್ರೇಷ್ಟ ರಾಜಕಾರಣಿಯಾಗದ್ದರೆಂದು ಮಹಾನಗರಪಾಲಿಕೆ ಮೇಯರ್ ಬಿ.ಜಿ. ಅಜಯ್‍ಕುಮಾರ್ ಹೇಳಿದರು. ಭಾನುವಾರ ಮಹಾನಗರಪಾಲಿಕೆಯ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆದ ಶ್ರೀ ಬಸವೇಶ್ವರರ 887 ನೇ ಜಯಂತಿ ಕಾರ್ಯಕ್ರಮ…

ವಿಶ್ವಗುರು ಬಸವೇಶ್ವರ ಜಯಂತಿ ಪ್ರಯುಕ್ತ ನಾಡಿನ ಜನತೆಗೆ ನಗರಾಭಿವೃದ್ದಿ ಸಚಿವರ ಶುಭಾಶಯ

ದಾವಣಗೆರೆ, ಏ.25 ಈ ಕೈಯಲೆ ಸುಖವು, ಈ ಕೈಯಲೆ ದುಖಃವು. ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆ ನಾನಾರ ಸೇರುವೆನಯ್ಯಾ ಆರೂ ಇಲ್ಲದ ದೇಸಿಗೆ ನಾನು, ಕೂಡಲಸಂಗಮದೇವಾ. ಎಂದು ಜಗತ್ತಿಗೆ ಸಾರಿದ ಭಕ್ತಿ ಭಂಡಾರಿ ವಿಶ್ವಗುರು ಬಸವೇಶ್ವರರ 887ನೇ ಜನ್ಮ ದಿನದಂದು…

ಗ್ರೀನ್ ಜೋನ್‍ನತ್ತ ದಾವಣಗೆರೆ ಜಿಲ್ಲೆ

ದಾವಣಗೆರೆ, ಏ.25 ವರದಿಯಾಗಿದ್ದ 3 ಕೊರೊನಾ ಪ್ರಕರಣಗಳಿಂದ ಆರೆಂಜ್ ಜೋನ್‍ನಲ್ಲಿದ್ದ ದಾವಣಗೆರೆ ಜಿಲ್ಲೆ ಗ್ರೀನ್ ಜೋನ್‍ನತ್ತ ದಾಪುಗಾಲಿಡುತ್ತಿದೆ. ನಿಯಮದ ಪ್ರಕಾರ ಕೊನೆಯ ಪಾಸಿಟಿವ್ ಪ್ರಕರಣ ವರದಿಯಾದ ನಂತರ 28 ದಿನಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದಿದ್ದರೆ ಅದನ್ನು ಗ್ರೀನ್ ಜೋನ್ ಗೆ…

ಜಿಲ್ಲಾ ಪತ್ರಕರ್ತರಿಗೆ ಚ್ಯವನ್‍ಪ್ರಾಶ್ ವಿತರಣೆ ಕಾರ್ಯಕ್ರಮ ಆಯುಷ್ ಉತ್ಪನ್ನ ಬಳಕೆಗೆ ಡಿಸಿ ಸಲಹೆ

ದಾವಣಗೆರೆ ಏ.24 ವೈರಸ್ ನಿಯಂತ್ರಿಸಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಉತ್ಪನ್ನಗಳನ್ನು ಬಳಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಲಹೆ ನೀಡಿದರು. ಜಿಲ್ಲಾ ಯೋಗ ಒಕ್ಕೂಟದ ವತಿಯಿಂದ ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಂಗಣದಲ್ಲಿ ಆಯುಷ್ ಉತ್ಪನ್ನವಾದ ಚ್ಯವನ್‍ಪ್ರಾಶ್‍ನ್ನು…

ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಏ.24 ನಗರಾಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ ಬಸವರಾಜ ಇವರು ಏ.27 ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಏ.27 ರಂದು ಬೆಳಿಗ್ಗೆ 9.30 ಗಂಟೆಗೆ ಚಿತ್ರದುರ್ಗದಿಂದ ಹೊರಟು ಬೆಳಿಗ್ಗೆ 10.30 ಗಂಟೆಗೆ ಜಗಳೂರಿನ ಪ್ರವಾಸಿ ಮಂದಿರಕ್ಕೆ…

ರೈತರ ನೆರವಿಗೆ ಹೋಬಳಿ ಮಟ್ಟದ ಅಧಿಕಾರಿಗಳ ಸಂಖ್ಯೆ

ದಾವಣಗೆರೆ ಏ.24 ಕೋವಿಡ್ – 19 ನಿಯಂತ್ರಣಕ್ಕೆ ವಿಧಿಸಿರುವ ಲಾಕ್‍ಡೌನ್‍ನಿಂದಾಗಿ ರೈತರುಗಳು ತಾವು ಬೆಳೆದಂತಹ ಹಣ್ಣು, ತರಕಾರಿ ಹಾಗೂ ಇನ್ನಿತರೆ ತೋಟಗಾರಿಕೆ ಬೆಳೆಗಳನ್ನು ಮಾರಾಟ ಮಾಡಲು ನೆರವಾಗುವಂತೆ ಪ್ರತಿ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಕಾರ್ಯ…

ಜನ್ಮ ದಿನೋತ್ಸವದ ಅಂಗವಾಗಿ ನಿರಾಶ್ರಿತರಿಗೆ ಆಹಾರ ಸಾಮಗ್ರಿ ವಿತರಣೆ

ದಾವಣಗೆರೆ ಏ.24 ನಗರದಲ್ಲಿ ಇಂದು ಪಿ.ಬಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಮ್ಮ 44ನೇ ಜನ್ಮ ದಿನೋತ್ಸವದ ಅಂಗವಾಗಿ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಇವರು ನಿರಾಶ್ರಿತರು ಹಾಗೂ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಿಸಿದರು. ಈ ಸಂದರ್ಭದಲ್ಲಿ…