Category: Honnali

ಎಂ.ಪಿ.ರೇಣುಕಾಚಾರ್ಯ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕರಾದ ಎಂ.ಪಿ ರೇಣುಕಾಚಾರ್ಯ ರವರು ಸೆ.24 ರಂದು ಬೆಳಿಗ್ಗೆ 11 ಗಂಟೆಗೆ ಒಳಾಂಗಣ ಕ್ರೀಡಾಂಗಣ, ಹೊನ್ನಾಳಿಯಲ್ಲಿ ಜಿಲ್ಲಾ ಮಟ್ಟದ ಶಟಲ್ ಬ್ಯಾಟ್‍ಮಿಟನ್ ಪಂದ್ಯಾವಳಿಯನ್ನು ಉದ್ಘಾಟಿಸುವರು. ಮ.12 ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂWದಲ್ಲಿ…

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ದೇವನಾಯಕನಹಳ್ಳಿ ಇದರ 2021-22ನೇ ಸಾಲಿನ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾಸಭೆ.

ಹೊನ್ನಾಳಿ ಸೆ.23 ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ದೇವನಾಯಕನಹಳ್ಳಿ ಇದರ 2021-22ನೇ ಸಾಲಿನ ಸರ್ವ ಸದಸ್ಯರ ಪ್ರಥಮ ವಾರ್ಷಿಕ ಮಹಾಸಭೆಯನ್ನು ಸರ್ಕಾರಿ ನೌಕರ ಸಭಬಾಂಗಣದಲ್ಲಿ ನಡೆಸಲಾಯಿತು.ಈ ಕಾರ್ಯಕ್ರಮದ ಉದ್ಗಾಟನೆಯನ್ನು ಈ ಸಂಘದ ಅಧ್ಯಕ್ಷರಾದ ಬಿ,ಹೆಚ್ ಕುಮಾರ್ ದೀಪ…

ಕಮ್ಮಾರಗಟ್ಟೆ ಗ್ರಾಮ ಪಂಚಾಯಿತಿಗೆ ಎರಡನೇ ಬಾರಿ ಅಧ್ಯಕ್ಷರಾಗಿ ಶ್ರೀ ಗಂಗಾಧರಪ್ಪ ಎಚ್ ಪಿ ಅವಿರೋಧ ಆಯ್ಕೆ.

ಹೊನ್ನಾಳಿ ಸಪ್ಟಂಬರ್ 22 ತಾಲೂಕು ಕಮ್ಮಾರಗಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು.ಈ ಹಿಂದೆ ಇದ್ದ ಶ್ರೀಮತಿ ಚಂದ್ರಕಲಾ ಶಿವಕುಮಾರ್ ಕೆಎಸ್ ಇವರ ಅಧ್ಯಕ್ಷರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಇವರ ತೆರವಾದ ಸ್ಥಾನಕ್ಕೆ ಇಂದು ಶ್ರೀ ಗಂಗಾಧರ ಎಚ್…

ಸಹಕಾರ ಸಂಘಗಳು ರೈತರ ಜೀವನಾಡಿ.

ಹುಣಸಘಟ್ಟ ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಕಾಲಕಾಲಕ್ಕೆ ಅಗತ್ಯ ಸಾಲ ನೀಡುವ ಮೂಲಕ ರೈತರ ಜೀವನಾಡಿಯಾಗಿದೆ ಎಂದು ಹನಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್ ಎಂ ರಾಘವೇಂದ್ರ ಹೇಳಿದರುಸಾಸ್ವೆಹಳ್ಳಿ ಹೋಬಳಿ…

ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಪ್ರೇರಣಾ ಶಕ್ತಿ.

ಹುಣಸಘಟ್ಟ: ಇಂದು ಶಿಕ್ಷಣವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣ ಎಲ್ಲಿ ಅಭಿವೃದ್ಧಿಯಾಗುತ್ತದೆ ಯು ಅಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ನಾವು ಕಾಣಬಹುದಾಗಿದೆ ಎಂದು ಹೊಟ್ಯಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಹೇಳಿದರು.ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹೊಟ್ಯಾಪುರ ಸರ್ಕಾರಿ ಕಿರಿಯ…

ಎಲ್ಲಾ ಮಠ-ಮಾನ್ಯಗಳಿಗೂ ಮಾದರಿ ಲಿಂಗೈಕ್ಯ ಶಿವಕುಮಾರ ಶ್ರೀಗಳು : ಸಾಹಿತಿ ತೆಲಿಗಿ ವೀರಭದ್ರಪ್ಪ.

ಹುಣಸಘಟ್ಟ: ಸದಾ ಜೀವನದ ಮೌಲ್ಯಗಳನ್ನು ಪ್ರಶಂಸಿಸಿ ಸಮಾಜ ಕಟ್ಟುವಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಸೇವೆ ಅನನ್ಯ. ಇವರ ಜೀವನವೇ ಒಂದು ಇತಿಹಾಸ. ಶ್ರೀಗಳು ಕೆಸರಿನ ಕಮಲ ವಲ್ಲ ಅಗ್ನಿ ಕಮಲ ಅವರು ಮಾತನಾಡಿದರೆ ವಿಧಾನಸೌಧವೇ ನಡುಗುತ್ತಿತ್ತು ಎಂದು ಸಾಹಿತಿ ತೆಲಗಿ ವೀರಭದ್ರಪ್ಪನವರು…

ವಚನ ಸಾಹಿತ್ಯವನ್ನು ವಿಶ್ವದ ಎಲ್ಲೆಡೆ ಪಸರಿಸಲು ತರಳಬಾಳು ಬೃಹನ್ಮಠ ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.

ಹೊನ್ನಾಳಿ:ವಚನ ಸಾಹಿತ್ಯವನ್ನು ವಿಶ್ವದ ಎಲ್ಲೆಡೆ ಪಸರಿಸಲು ತರಳಬಾಳು ಬೃಹನ್ಮಠ ತಂತ್ರಜ್ಞಾನವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ…

ಮಳೆಗೆ ಮನೆ ಬಿದ್ದವರನ್ನು ಕಚೇರಿಗೆ ಅಲೆದಾಡಿಸಬೇಡಿ: ಮಾಜಿ ಶಾಸಕ ಡಿ.ಜಿ ಶಾಂತನಗೌಡ್ರು.

ಕಳೆದ ನಾಲ್ಕು ತಿಂಗಳಿಂದಲೂ ಮಳೆಯೂ ಬಿಡದೆ ಸುರಿಯುತ್ತಿದ್ದು ರೈತರು ಬಿತ್ತಿದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸಾಕಷ್ಟು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ ನಾಡಕಛೇರಿ ಅಧಿಕಾರಿಗಳು ಮಳೆಗೆ ಬಿದ್ದ ಮನೆಗಳ ವರದಿ ನೀಡುವಲ್ಲಿ ತಾರತಮ್ಯ ಮಾಡದೆ ಪರಿಶೀಲಿಸಿ ವರದಿ ನೀಡಿ…

ಚಿಂತನಾ ಶಕ್ತಿ ಬೆಳವಣಿಗೆಗೆ ಶ್ರದ್ಧೆ, ಏಕಾಗ್ರತೆ , ಪರಿಶ್ರಮಗಳು  ಅತ್ಯಗತ್ಯ- ಜಿ ಆರ್ ಷಣ್ಮುಖಪ್ಪ

ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಶ್ರದ್ಧೆ,ಏಕಾಗ್ರತೆ, ಸತತ ಪರಿಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು. ಆಗ ಅವರ ಚಿಂತನಾ ಶಕ್ತಿ ಬೆಳವಣಿಗೆಯಾಗುತ್ತದೆ ಅದು ಅವರ ಭವಿಷ್ಯವನ್ನು ಕಟ್ಟಿಕೊಡುತ್ತದೆ ಎಂದು ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಜಿ ಆರ್ ಷಣ್ಮುಖಪ್ಪ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅತ್ತಿಗೆರೆಯ…

ಧರ್ಮ ಮಾರ್ಗದಲ್ಲಿ ನಡೆದು ಸಂಸ್ಕಾರವಂತರಾಗಿ ಬಾಳ್ವೆ ನಡೆಸಬೇಕು ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

ಹೊನ್ನಾಳಿ:ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆದು ಸಂಸ್ಕಾರವಂತರಾಗಿ ಬಾಳ್ವೆ ನಡೆಸಬೇಕು ಎಂದು ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮೀ ಪೂಜೆ ಮತ್ತು…