ದಾವಣಗೆರೆ ಮೇ.02
ದಾವಣಗೆರೆ ಟೌನ್ ವ್ಯಾಪ್ತಿಯ ಬಾಷಾ ನಗರ ಹಾಗೂ ಜಾಲಿ
ನಗರದಲ್ಲಿ ಕೋವಿಡ್-19 ಪ್ರಕರಣಗಳು ಕಂಡು ಬಂದಿರುವ
ಹಿನ್ನೆಲೆಯಲ್ಲಿ ನಗರದ ಅದೇ ವ್ಯಾಪ್ತಿಯಲ್ಲಿ ಬರುವ ಬಿತ್ತನೆ ಬೀಜ,
ಕೀಟನಾಶಕ ಹಾಗೂ ರಸಗೊಬ್ಬರ ಮಾರಾಟ ಮಳಿಗೆಗಳನ್ನು
ಮುಚ್ಚಲಾಗಿದ್ದು, ರೈತರಿಗೆ ಅನಾನುಕೂಲ ತಪ್ಪಿಸಲು ಅವರಿಗೆ
ಅವಶ್ಯಕವಾದ ಕೃಷಿ ಪರಿಕರಗಳನ್ನು ಪಡೆಯಲು ಜಂಟಿ ಕೃಷಿ
ನಿರ್ದೇಶಕರ ಕಛೇರಿಯಲ್ಲಿ ಪ್ರಾರಂಭಿಸಲಾದ ಅಗ್ರಿ ವಾರ್ ರೂಮ್
ದೂರವಾಣಿ ಸಂಖ್ಯೆ : 08192-297055 ಕರೆ ಮಾಡಿದರೆ
ಅವಶ್ಯಕವಿರುವ ಕೃಷಿ ಪರಿಕರಗಳ ಪೂರೈಕೆಗೆ ವ್ಯವಸ್ಥೆ
ಮಾಡಲಾಗುವುದು. ಇದರ ಜೊತೆಯಲ್ಲಿ ರೈತರ ಇತರೆ
ಸಮಸ್ಯೆಗಳನ್ನು ಈ ದೂರವಾಣಿಗೆ ಕರೆ ಮಾಡಿ ಗಮನಕ್ಕೆ
ತಂದಲ್ಲಿ ಅವುಗಳನ್ನು ಸಹ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ
ವಹಿಸಲಾಗುವುದು ಎಂದು ಕೃಷಿ ಜಂಟಿ ನಿರ್ದೇಶಕ ಶರಣಪ್ಪ
ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *