ದಾವಣಗೆರೆ ಮೇ.02
ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ತಗುಲಿದ್ದ ಜಾಲಿನಗರದ ವೃದ್ಧ
(ರೋಗಿ ಸಂಖ್ಯೆ-556) ಮೇ 1ರಂದು ಸಾವೀಗಿಡಾಗಿದ್ದು,
ನಿಯಮಾವಳಿಯಂತೆ ಇವರ ಅಂತ್ಯಸಂಸ್ಕಾರವನ್ನು ರಾತ್ರಿಯೇ
ನಡೆಸಲಾಯಿತು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ
ಮಾತನಾಡಿದ ಅವರು, ಪೋಲೀಸ್, ಮಹಾನಗರಪಾಲಿಕೆ, ಆರೋಗ್ಯ
ಹಾಗೂ ಅಗ್ನಿಶಾಮಕದಳ ತಂಡದೊಂದಿಗೆ ಮೃತರ ಶವ
ಸಂಸ್ಕಾರವನ್ನು ಕೋವಿಡ್-19 ನಿಯಮಾವಳಿಯಂತೆ ನಡೆಸಲಾಗಿದೆ
ಎಂದರು.
ಕಳೆದ ಮೂರು ದಿನಗಳಿಂದ ಅಸ್ವಸ್ಥತೆಯಿಂದ ಬಳಲುತಿದ್ದ
ಅವರು ಏ.28ಕ್ಕೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಏ. 29
ರಂದು ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಅವರನ್ನು ತೀವ್ರ ಉಸಿರಾಟದ ತೊಂದರೆ(SಂಂಖI) ಪ್ರಕರಣ ಎಂದು
ದಾಖಲಿಪಡಿಸಿಕೊಂಡು ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ
ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಹಿಂದೆ ಅವರು ಅಧಿಕ
ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆ ಹಾಗೂ ಉಸಿರಾಟದ
ತೊಂದರೆಯಿಂದ ಬಳಲುತ್ತಿದ್ದು, ಮಣಿಪಾಲ್‍ನÀ ಕಸ್ತೂರಿ ಬಾ
ಆಸ್ಪತ್ರೆಯಲ್ಲಿ ಕಳೆದ 5 ವರ್ಷದಿಂದ ಚಿಕಿತ್ಸೆ
ಪಡೆದುಕೊಳ್ಳುತ್ತಿದ್ದರು ಎಂದು ತಿಳಿಸಿದರು.
ಮೇ 1 ರಂದು ಒಟ್ಟು 92 ಪ್ರಾಥಮಿಕ ಹಾಗೂ ದ್ವಿತೀಯ
ಸಂಪರ್ಕದಲ್ಲಿದ್ದವರ ಸ್ಯಾಂಪಲ್‍ನ್ನು ಪರೀಕ್ಷೆಗೆ
ಕಳುಹಿಸಲಾಗಿದೆ. ಇಂದು ಒಟ್ಟು 72 ಸ್ಯಾಂಪಲ್ ಕಳುಹಿಸಿ
ಕೊಡಲಾಗಿದ್ದು, ಫಲಿತಾಂಶದ ವರದಿಗೆ ಎದುರು
ನೋಡುತ್ತಿದ್ದೇವೆ. ಜೊತೆಗೆ ಎಪಿಸೆಂಟರ್‍ನ ಸುತ್ತ ಮುತ್ತಲಿನ
ಕಾರ್ಮಿಕರಲ್ಲಿ ಕೋವಿಡ್ ಲಕ್ಷಣ ಇಲ್ಲದಿದ್ದರೂ ಸಹ ಅವರ
ಸ್ಯಾಂಪಲ್‍ಗಳನ್ನು ಕಳುಹಿಸಿಕೊಡುವ ಸ್ಪೆಷಲ್ ಡ್ರೈವ್
ಮಾಡುತ್ತಿದ್ದೇವೆ. ಆ ಪ್ರದೇಶವೂ ಸ್ಲಂ ಆಗಿದೆ. ಬಹಳಷ್ಟು

ಇಕ್ಕಟ್ಟಿನ ಜಾಗದಲ್ಲಿ ಮನೆಗಳಿದ್ದು, ಇಂತಲ್ಲಿ ಜನರು ವಾಸ
ಮಾಡುತ್ತಿರುವ ಹಿನ್ನೆಲೆಯಲ್ಲಿ ನಾವು ಯಾವುದೇ ಅಪಾಯ
ತೆಗೆದುಕೊಳ್ಳುವುದು ಬೇಡ ಎಂದು ಎಲ್ಲರ ಸ್ಯಾಂಪಲ್
ಸಂಗ್ರಹಿಸಿ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಡ್ರಗ್ಸ್ ಸ್ಟೋರ್‍ಗಳಲ್ಲಿ ಜ್ವರ, ಕೆಮ್ಮು, ನೆಗಡಿಗೆ
ಸಂಬಂಧಪಟ್ಟಂತೆ ಮಾತ್ರೆ ತೆಗೆದುಕೊಂಡವರ ವಿವರ
ಒದಗಿಸಲು ಸೂಚನೆ ನೀಡಲಾಗಿದ್ದು, ಮೆಡಿಕಲ್ ಶಾಪ್‍ಗಳಲ್ಲಿ
ಮೇಲ್ಕಂಡ ಔಷಧಿಗಳನ್ನು ತೆಗೆದುಕೊಂಡ ಬಗ್ಗೆ ಪರಿಶೀಲನೆ
ನಡೆಸಲು ನೋಡಲ್ ಅಧಿಕಾರಿ ನೇಮಿಸಲಾಗಿದೆ. ನೋಡಲ್
ಅಧಿಕಾರಿಗಳು ಪರಿಶೀಲನೆಗಾಗಿ 35 ತಂಡ ರಚಿಸಿದ್ದು, ಇವರಿಂದ ಸರ್ವೇ
ಕಾರ್ಯ ಜಾರಿಯಲ್ಲಿದೆ. ಒಂದೊಂದು ತಂಡಕ್ಕೆ 15 ಮೆಡಿಕಲ್
ಶಾಪ್‍ಗಳ ಸರ್ವೇ ಕಾರ್ಯ ವಹಿಸಲಾಗಿದೆ. ಬಂದಂತಹ
ವರದಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ
ಕಳುಹಿಸಿಕೊಡಲಾಗುವುದು. ಅದರಲ್ಲಿ ಸಂದೇಹ
ಬರುವಂತಹವು ಕಂಡುಬಂದರೆ ಪರೀಕ್ಷೆಗೆ ಒಳಪಡಿಸುವ
ಕುರಿತು ಪ್ರಕ್ರಿಯೆ ಶುರುವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ,
ಮೃತ ವ್ಯಕ್ತಿ ರೋಗಿ ಸಂಖ್ಯೆ-556 ವ್ಯಕ್ತಿಯ ಸೋಂಕು
ತಗುಲಿರುವ ಮೂಲ ಪತ್ತೆಯಾಗಿಲ್ಲ. ಅವರ ಸೊಸೆಯೊಬ್ಬರು
ಮಾರ್ಚ್ 15 ರಂದು ಗುಜರಾತ್‍ಗೆ ಹೋಗಿ ರೈಲ್ವೇ ಮಾರ್ಗದ
ಮೂಲಕ ಹರಿಹರಕ್ಕೆ ಬಂದಿದ್ದಾರೆ. ಸೊಸೆಯೊಂದಿಗೆ ಮತ್ತೆ ಇಬ್ಬರು
ಸಂಬಂಧಿಕರು ಬಂದಿದ್ದು, ಈ ಇಬ್ಬರ ಪರೀಕ್ಷೆ ವರದಿ ಬರಬೇಕಿದೆ.
ಅವರ ಪರೀಕ್ಷೆಯ ವರದಿ ಬಂದರೆ ನಮಗೆ ಸೋಂಕಿನ ಮೂಲ
ಪತ್ತೆ ಹಚ್ಚಲು ಮಾಹಿತಿ ದೊರಕಬಹುದು ಎಂದರು.
ರೋಗಿ ಸಂಖ್ಯೆ- 553 ಅವರ ಮಗನಿಗೆ ಯಾವುದೇ
ಲಕ್ಷಣಗಳಿರಲಿಲ್ಲ. ಆರೋಗ್ಯವಾಗಿದ್ದರು. ಅವರನ್ನು ಪರೀಕ್ಷೆಗೆ
ಒಳಪಡಿಸಿದಾಗಲೇ ಲಕ್ಷಣ ದೃಢಪಟ್ಟಿರುವುದು ಕಂಡುಬಂದಿದೆ.
ಹಾಗಾಗಿ ಆರೋಗ್ಯವಂತರಿಗೂ, ವಯಸ್ಸಾಗದೇ ಇರುವವರು
ಮತ್ತು ಯುವಕರಲ್ಲೂ ಸೋಂಕು ಕಂಡುಬರುವ ಸಾಧ್ಯತೆ
ಇದೆ. ಈ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಎಲ್ಲರನ್ನೂ ಪರೀಕ್ಷೆಗೆ
ಒಳಪಡಿಸಬೇಕು. ಹೀಗೆ ಮಾಡಿದಾಗ ಕೋವಿಡ್ ಲಕ್ಷಣ
ಇಲ್ಲದವರಲ್ಲಿಯೂ ಸಹ ಲಕ್ಷಣ ಕಂಡುಬರುವ ಸಾಧ್ಯತೆಯಿದೆ
ಎಂದರು.
ನಮ್ಮ ಕೆಲಸಕ್ಕೆ ಅಡೆತಡೆ ಮಾಡಿದರೆ ಅವರ ವಿರುದ್ಧ
ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
ಸಾರ್ವಜನಿಕರು ಶೀತ, ಕೆಮ್ಮು ಜ್ವರ ಇದ್ದಂತಹವರು ಹಾಗೂ
ಮೆಡಿಕಲ್‍ಗಳಲ್ಲಿ ಹೋಗಿ ಮಾತ್ರೆ ತೆಗೆದುಕೊಳ್ಳುವರು ಬಹಳ
ಎಚ್ಚರಿಕೆಯಿಂದ ಇರಬೇಕು. ಅವರುಗಳೇ ಸ್ವತಃ ಪರೀಕ್ಷಗೆ
ಒಳಪಡಿಸಿಕೊಳ್ಳಬೇಕು. ಕೋವಿಡ್ ಆಸ್ಪತ್ರೆಗೆ ಬಂದು ಸ್ಯಾಂಪಲ್
ನೀಡಬೇಕು. ಕೆಪಿಎಂಇ ಆ್ಯಕ್ಟ್ ಅಡಿಯಲ್ಲಿ ಜಿಲ್ಲೆಯ ಎಲ್ಲಾ
ಆಸ್ಪತ್ರೆಗಳಲ್ಲಿ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಜ್ವರದ
ರೋಗಿಗಳು ಬಂದರೆ ಇಂತಹವರ ಮಾಹಿತಿಯನ್ನು
ಜಿಲ್ಲಾಡಳಿತಕ್ಕೆ ನೀಡಬೇಕು. ಆಗ ಅವರೆಲ್ಲರನ್ನೂ ಪರೀಕ್ಷೆಗೆ
ಒಳಪಡಿಸುವ ಮೂಲಕ ಒಂದು ಹಂತಕ್ಕೆ ನಿಯಂತ್ರಣಕ್ಕೆ
ತರಬಹುದು ಎಂದರು.
ನಮ್ಮ ತಂಡವು 10 ಚೆಕ್‍ಪೋಸ್ಟ್‍ಗಳಲ್ಲಿ
ಕಾರ್ಯನಿರ್ವಹಿಸುತ್ತಿದೆ. ಲಾರಿ ಮತ್ತು ಯಾವುದೇ ವಾಹನಗಳಲ್ಲಿ
ಅನ್ಯ ಜಿಲ್ಲೆಯಿಂದ ಬಂದಂತಹ ವ್ಯಕ್ತಿಗಳನ್ನು ಮತ್ತು
ನಡೆದುಕೊಂಡು ಬಂದವರನ್ನು ತಡೆದು ಚಿಗಟೇರಿ ಆಸ್ಪತ್ರೆಗೆ
ಕಳುಹಿಸಲಾಗುತ್ತಿದೆ. ಸಾರ್ವಜನಿಕರು ಸಹ ಹೊರಗಡೆ ಬಂದವರ
ಕುರಿತು ಮಾಹಿತಿ ನೀಡಿದ್ದಾರೆ. ಅವರನ್ನು ಸಹ ತಪಾಸಣೆಗೆ
ಒಳಪಡಿಸಲಾಗಿದೆ. ಜೊತೆಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ
ಕೊರೊನಾ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅವರ
ವಿರುದ್ದ ಸೂಕ್ತ ಕ್ರಮ ಜರುಗಿಸಲು ಕ್ರಮ
ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಕೋವಿಡ್
ನೋಡಲ್ ಅಧಿಕಾರಿ ಪ್ರಮೋದ್ ನಾಯ್ಕ್ ಇದ್ದರು.