ದಾವಣಗೆರೆ ಮೇ.08
   ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ಕೋವಿಡ್-19 ವೈರಸ್
ಹರಡುವಿಕೆಯಿಂದಾಗಿ ಏಪ್ರಿಲ್ ಮಾಹೆಯಲ್ಲಿ ವಿದ್ಯುತ್ ಬಿಲ್‍ನ ಮಾಪಕ
ರೀಡಿಂಗ್ ಸಾಧ್ಯವಾಗಿರುವುದಿಲ್ಲ. ಸರ್ಕಾರದ ಆದೇಶದ ಅನ್ವಯ
ಕಳೆದ ಹಿಂದಿನ ಮೂರು ತಿಂಗಳಿನ ಬಿಲ್‍ನ್ನು ಆಧರಿಸಿ ಸರಾಸರಿ ಬಿಲ್
ಮಾಡಲಾಗಿರುತ್ತದೆ.
   ಮೇ ತಿಂಗಳ ಮಾಹೆಯ ಮಾಪಕದಲ್ಲಿನ ರೀಡಿಂಗ್ ಆಧರಿಸಿ  ಏಪ್ರಿಲ್
ಹಾಗೂ ಮೇ ಎರಡು ತಿಂಗಳ ಬಿಲ್ಲನ್ನು ಒಟ್ಟಿಗೆ
ಮಾಡಲಾಗಿರುತ್ತದೆ. ಹಾಗೂ ಈ ಹಿಂದೆ ಏಪ್ರಿಲ್ ತಿಂಗಳ ಮಾಹೆಯಲ್ಲಿ
ಮಾಡಲಾಗಿರುವ ಸರಾಸರಿ ಬಿಲ್ಲನ್ನು ತೆಗೆದು ಹಾಕಲಾಗಿರುತ್ತದೆ.
ಸದರಿ ತಿಂಗಳಲ್ಲಿ ಮೊತ್ತವನ್ನು ಪಾವತಿಸಿದ್ದಲ್ಲಿ, ಪಾವತಿಸಲಾದ
ಮೊತ್ತವನ್ನು ಮೇ ತಿಂಗಳ ಬಿಲ್ಲಿನಲ್ಲಿ ಕಡಿತಗೊಳಿಸಿ ಉಳಿದ
ಮೊತ್ತವನ್ನು ನೀಡಲಾಗಿರುತ್ತದೆ. ಗ್ರಾಹಕರಿಗೆ ಅಧಿಕ ಹೊರೆ
ಆಗದಂತೆ ಎರಡೂ ತಿಂಗಳಿಗೆ ಸಮನಾಗಿ ಯೂನಿಟ್ ಬಳಕೆ ವಿಂಗಡಿಸಿ
ಸ್ಲ್ಯಾಬ್‍ನ್ನು ಸಮಾನವಾಗಿ ಹಂಚಲಾಗಿದೆ.
   ಗ್ರಾಹಕರಿಗೆ ಯಾವುದೇ ಕಾರಣಕ್ಕೂ ಅಧಿಕ ಸ್ಲ್ಯಾಬ್ ವಿಧಿಸಿ ಅಧಿಕ
ಬಿಲ್ ಮಾಡಿರುವುದಿಲ್ಲ. ಆದ್ದರಿಂದ  ಸದರಿ ವಿಷಯವನ್ನು
ಗ್ರಾಹಕರು ಮನಗಂಡು ಬೆ.ವಿ.ಕಂನೊಂದಿಗೆ ಸಹಕರಿಸಲು
ಕೋರಲಾಗಿದೆ ಎಂದು ಬೆ.ವಿ.ಕಂ ದಾವಣಗೆರೆ ವಿಭಾಗದ
ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಕೆ.ಪಟೇಲ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ. 
ಕಿಸಾನ್ ಕ್ರೆಡಿಟ್ ಅಥವಾ ಚುನಾವಣಾ ಗುರುತಿನ ಚೀಟಿ

Leave a Reply

Your email address will not be published. Required fields are marked *