ದಾವಣಗೆರೆ ಮೇ.13
ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಮಾರ್ಗಸೂಚಿ
ಮತ್ತು ಸಲಹೆಗಳನ್ನು ಆಧರಿಸಿ ಜುಲೈನಲ್ಲಿ ಅಂತಿಮ ವರ್ಷದ
ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲು
ದಾವಣಗೆರೆ ವಿಶ್ವವಿದ್ಯಾನಿಲಯ ಸಿದ್ಧತೆ ಮಾಡಿಕೊಂಡಿದೆ ಎಂದು ಕುಲಪತಿ
ಪ್ರೊ. ಶರಣಪ್ಪ ವಿ. ಹಲಸೆ ಭರವಸೆ ನೀಡಿದರು.
ಮೇ 12 ರಂದು ದಾವಣಗೆರೆ ವಿಶ್ವವಿದ್ಯಾನಿಲಯದ ವಿವಿಧ
ವಿಭಾಗಗಳ ಅಧ್ಯಕ್ಷರು, ಸಂಯೋಜನಾಧಿಕಾರಿಗಳು, ಸಿಂಡಿಕೇಟ್
ಸದಸ್ಯರು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರ ಜೊತೆ ವಿಡಿಯೊ
ಕಾನ್ಫರೆನ್ಸ್ ನಡೆಸಿ, ಎಲ್ಲರ ಸಲಹೆ ಸಂಗ್ರಹಿಸಿದ ನಂತರ
ಮಾತನಾಡಿದರು.
ಜೂನ್ ತಿಂಗಳಲ್ಲಿ ಮೂರು ವಾರ ರಜಾರಹಿತ ನಿರಂತರ ತರಗತಿ
ನಡೆಸಿ ಬಾಕಿ ಇರುವ ಪಠ್ಯಕ್ರಮ ಪೂರ್ಣಗೊಳಿಸಿ, ಪಾಠದ
ಪುನರಾವಲೋಕನ ಮಾಡಲಾಗುವುದು. ಇದೇ ಅವಧಿಯಲ್ಲಿ
ಪ್ರಾಯೋಗಿಕ ತರಬೇತಿ, ಕಿರು ಸಂಶೋಧನಾ ವರದಿ,
ಪ್ರೊಜೆಕ್ಟ್, ಆಂತರಿಕ ಪರೀಕ್ಷೆ, ಪ್ರಾಯೋಗಿಕ ಅಧ್ಯಯನ
ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಒಂದು ವಾರ ಪರೀಕ್ಷಾ ಸಿದ್ಧತೆಗೆ
ಅವಕಾಶ ನೀಡಿ, ಜುಲೈನಲ್ಲಿ ಪರೀಕ್ಷೆ ಹಮ್ಮಿಕೊಳ್ಳಲಾಗುವುದು
ಎಂದರು.
ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ
ವರ್ಷದ ವಿದ್ಯಾರ್ಥಿಗಳಿಗೆ ಮೊದಲು ಪರೀಕ್ಷೆ ನಡೆಸಿ, ಶೀಘ್ರ
ಫಲಿತಾಂಶ ಪ್ರಕಟಿಸಲಾಗುವುದು. ಇದೇ ಸಂದರ್ಭದಲ್ಲಿ ಹಿಂಬಾಕಿ
(ಬ್ಯಾಕ್‍ಲಾಗ್) ವಿಷಯಗಳ ಪರೀಕ್ಷೆಯನ್ನೂ
ನಡೆಸಲಾಗುವುದು.ಜುಲೈ ಅಂತ್ಯದೊಳಗೆ ಪÀರೀಕ್ಷಾ
ಫಲಿತಾಂಶ ಪ್ರÀಕಟಿಸಿ, ವಿದ್ಯಾರ್ಥಿಗಳ ಭವಿಷ್ಯದದಾರಿಗೆ ಅನುಕೂಲ
ಮಾಡಿಕೊಡಲಾಗುವುದುಎಂದು ವಿವರಿಸಿದರು.
ಎಂಬಿಎ, ಬಿಇಡಿ, ಬಿಪಿಇಡಿ, ಎಂಇಡಿ ಮತ್ತುಎಂಪಿಇಡಿಪದವಿಗಳ ವಿದ್ಯಾರ್ಥಿಗಳಿಗೆ
ಹೆಚ್ಚುವರಿಯಾಗಿ 4ರಿಂದ 6 ವಾರಗಳ ಕಾಲ ಪಾಠ ಪ್ರವಚನ,
ಪ್ರಾಯೋಗಿಕತರಗತಿ, ಆಂತರಿಕೆಪರೀಕ್ಷೆ, ಬೋಧನಾ ಶಿಕ್ಷಣಕ್ಕೆ
ಒತ್ತು ನೀಡಲಾಗುವುದು. ವಿದ್ಯಾರ್ಥಿಗಳಎಲ್ಲಗೊಂದಲ, ಆತಂಕ
ನಿವಾರಿಸಿ, ಆತ್ಮವಿಶ್ವಾಸ ಮೂಡಿಸುವ ಮತ್ತುಅವರಲ್ಲಿ ಪರೀಕ್ಷೆಗೆ ಸಿದ್ಧತೆ
ಮಾಡಿಕೊಳ್ಳಲು ಸಕಾರಾತ್ಮಕ ವಾತಾವರಣ ನಿರ್ಮಿಸಲಾಗುವುದು. ಈ
ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯದಎಲ್ಲ ಪ್ರಾಧ್ಯಾಪಕರು ವಿದ್ಯಾರ್ಥಿ
ಮಾರ್ಗದರ್ಶಕರಾಗಿಕಾರ್ಯ ನಿರ್ವಹಿಸುವರುಎಂದು ಭರವಸೆ
ನೀಡಿದರು.
ಸ್ನಾತಕ ಪದವಿಯ 3 ಮತ್ತು 5ನೇ ಸೆಮಿಸ್ಟರ್ ಹಾಗೂ
ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್‍ಗೆಆಗಸ್ಟ್ 1ರಿಂದ
ಹಾಗೂ ಒಂದನೇ ಸೆಮಿಸ್ಟರ್‍ಗೆ ಹೊಸದಾಗಿ ಪ್ರವೇಶ ಪಡೆಯುವ
ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 1ರಿಂದ ತರಗತಿಗಳು ಆರಂಭವಾಗಲಿವೆ.
ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಮುಂದಿನ ಆದೇಶದ
ವರೆಗೆಯಾವುದೇ ಬದಲಾವಣೆಇಲ್ಲಎಂದು ಸ್ಪಷ್ಟಪಡಿಸಿದರು.
ಲಾಕ್‍ಡೌನ್‍ಗಿಂತ ಮುಂಚೆ ಪದವಿ ಕಾಲೇಜಿನಲ್ಲಿ ಶೇ 75 ರಿಂದ 80
ರಷ್ಟು ಪಠ್ಯಕ್ರಮ ಮುಗಿದಿತ್ತು. ಲಾಕ್‍ಡೌನ್ ಅವಧಿಯಲ್ಲಿ
ಬಹುತೇಕ ಪಠ್ಯದ ಪಾಠ ಪೂರ್ಣಗೊಂಡಿದೆ.ಸ್ನಾತಕೋತ್ತರ
ಪದವಿಯಲ್ಲಿ ಶೇ.55 ರಿಂದ 65 ರಷ್ಟು ಪಠ್ಯಕ್ರಮ ಲಾಕ್‍ಡೌನ್‍ಗಿಂತ
ಮುನ್ನ ಮುಗಿದಿತ್ತು. ಈಗ ಶೇ 85ರಿಂದ 90 ಪಠ್ಯಕ್ರಮ
ಮುಗಿದಿದ್ದು, ಉಳಿದದ್ದನ್ನು ಮೇ ಅಂತ್ಯದೊಳಗೆ
ಪೂರ್ಣಗೊಳಿಸಲಾಗುವುದು. ಅದಾಗ್ಯೂ ತಾಂತ್ರಿಕ ಕಾರಣದಿಂದ
ಪಾಠಕ್ಕೆ ಹಾಜರಾಗಲು ಸಾಧ್ಯವಾಗದಗ್ರಾಮೀಣ ಭಾಗದ
ವಿದ್ಯಾರ್ಥಿಗಳಿಗೆ ಅನ್ಯಾಯಆಗದಂತೆ ಪುನರಾವರ್ತನೆ
ಮಾಡಲಾಗುವುದುಎಂದು ವಿವರಿಸಿದರು.
ಕೊರೊನಾ ವೈರಾಣುರೋಗದ ಹಿನ್ನೆಲೆಯಲ್ಲಿದಾವಣಗೆರೆ
ವಿಶ್ವವಿದ್ಯಾನಿಲಯ ವ್ಯಾಪ್ತಿಯಚಿತ್ರದುರ್ಗ
ಮತ್ತುದಾವಣಗೆರೆಜಿಲ್ಲೆಯ ಸ್ಥಿತಿಗತಿಗಳನ್ನು ಗಮನಿಸಿ,
ಸರ್ಕಾರದಆದೇಶಕ್ಕೆ ಬದ್ಧವಾಗಿಕಾರ್ಯ ನಿರ್ವಹಿಸುವುದು
ಅನಿವಾರ್ಯ. ವಿದ್ಯಾರ್ಥಿಗಳ ಶೈಕ್ಷಣಿಕ
ಭವಿಷ್ಯದಜೊತೆಗೆಅವರಆರೋಗ್ಯರಕ್ಷಣೆಗೂಆದ್ಯತೆ
ನೀಡುವುದು ಮುಖ್ಯವಾಗಿದೆಎಂದರು.
ದೈನಂದಿನ ತರಗತಿ ಹಾಗೂ ಪರೀಕ್ಷೆ ಸಂದರ್ಭದಲ್ಲಿ
ವಿದ್ಯಾರ್ಥಿಗಳ ನಡುವೆಸಾಮಾಜಿಕಅಂತರಕಾಪಾಡಲುಆದ್ಯತೆ
ನೀಡಲಾಗುವುದು. ಸ್ಯಾನಿಟೈಸರ್‍ಬಳಕೆ,
ಮಾಸ್ಕ್‍ಧಾರಣೆಕಡ್ಡಾಯ ಮಾಡಲಾಗಿದೆ.ಪ್ರತಿ ವಿದ್ಯಾರ್ಥಿ ಮತ್ತು
ಬೋಧಕ ಸಿಬ್ಬಂದಿಯ ಆರೋಗ್ಯತಪಾಸಣೆ ಮಾಡಿದ
ನಂತರವೇವಿಶ್ವವಿದ್ಯಾನಿಲಯದಆವರಣದ ಒಳಗೆ ಪ್ರವೇಶಕ್ಕೆ
ಅವಕಾಶ ನೀಡಲಾಗುವುದು.ಆರೋಗ್ಯಕೇಂದ್ರದಲ್ಲಿ
ವೈದ್ಯಕೀಯತಪಾಸಣಾಕಿಟ್‍ಇಟ್ಟಿದ್ದು, ಸಕಾಲಿಕ ಚಿಕಿತ್ಸೆ
ನೀಡಲಾಗುವುದು.ಕೊರೊನಾ ವೈರಾಣುಸಮಸ್ಯೆನಿಯಂತ್ರಣಕ್ಕೆ
ಬರುವವರೆಗೆ ಪೂರ್ಣಪ್ರಮಾಣದಲ್ಲಿಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳ
ವಾಸಕ್ಕೆ ಅವಕಾಶ ನೀಡುವುದಿಲ್ಲ. ಕಾಲೇಜು ವಿದ್ಯಾರ್ಥಿಗಳ ವಸತಿ
ವ್ಯವಸ್ಥೆಯ ನಿರ್ವಹಣೆಯನ್ನುಆಯಾಕಾಲೇಜಿನ
ಪ್ರಾಚಾರ್ಯರೇ ನಿಭಾಯಿಸಲಿದ್ದಾರೆಎಂದೂಸ್ಪಷ್ಟಪಡಿಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನ, ಮಾರ್ಗದರ್ಶನ,
ಮಾನಸಿಕ ಆರೋಗ್ಯರಕ್ಷಣೆ, ಕೌಶಲಾಭಿವೃದ್ಧಿಗಾಗಿ ಮತ್ತು
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ
ವಿಶ್ವವಿದ್ಯಾನಿಲಯದ ವತಿಯಿಂದ ದಿನವಿಡೀ ಹೆಲ್ಪ್‍ಲೈನ್ ಆರಂಭಿಸಲಾಗಿದೆ.
ಹೆಲ್ಪ್‍ಲೈನ್ ತಂಡದಲ್ಲಿ ವಿವಿಧ ನಿಕಾಯಗಳ ಡೀನ್‍ರು
ಅಧ್ಯಕ್ಷರಾಗಿದ್ದು, ಸಿಂಡಿಕೇಟ್ ಸದಸ್ಯರು, ಆಯಾ ವಿಭಾಗಗಳ
ಅಧ್ಯಕ್ಷರು, ಪ್ರಾಧ್ಯಾಪಕರು ಸದಸ್ಯರಾಗಿರುತ್ತಾರೆ.
ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆಗೆ
ಸ್ಪಂದಿಸಿ ನೆರವು ನೀಡುವರುಎಂದು ವಿವರಿಸಿದರು.
ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ,
ಮಾರ್ಗದರ್ಶನದ ಉದ್ದೇಶದಿಂದ ಇದುವರೆಗೆ ಮೂರು ಬಾರಿ
ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್, ವಿದ್ಯಾರ್ಥಿಗಳ ಸಂಘಟನೆಗಳ ಜೊತೆ
ಆನ್‍ಲೈನ್‍ನಲಿ ್ಲಸಭೆ ನಡೆಸಲಾಗಿದೆ. ನಾಲ್ಕು ಬಾರಿ ವಿದ್ಯಾರ್ಥಿಗಳೊಂದಿಗೆ
ಫೋನ್‍ಇನ್ ಕಾರ್ಯಕ್ರಮ, ಡೀನ್‍ರು, ವಿಭಾಗಗಳ
ಅಧ್ಯಕ್ಷರು, ಸಂಯೋಜನಾಧಿಕಾರಿಗಳು, ಪದವಿ ಕಾಲೇಜುಗಳ
ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಂಶೋಧನಾ
ವಿದ್ಯಾರ್ಥಿಗಳೊಂದಿಗೂ ಆನ್‍ಲೈನ್‍ನಲ್ಲಿ ಚರ್ಚೆ ನಡೆಸಿ, ಸಕಾಲಿಕ
ಮಾರ್ಗದರ್ಶನ ನೀಡಿದೆ.ವಿಶ್ವವಿದ್ಯಾನಿಲಯದಎಲ್ಲ ಪ್ರಾಧ್ಯಾಪಕರು
ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು, ಝೂಮ್, ಇಂಪಾರ್ಟಸ್
ಸೇರಿದಂತೆ ವಿವಿಧ ವೇದಿಕೆಗಳ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಪಾಠ
ಮಾಡುತ್ತಿದ್ದಾರೆ.ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲ ಡಿಜಿಟಲ್
ತಂತ್ರಜ್ಞಾನವನ್ನು ಬೋಧನೆಗೆ ಬಳಸಿಕೊಳ್ಳುತ್ತಿದ್ದಾರೆ
ಎಂದು ತಿಳಿಸಿದರು.
ವಿಡಿಯೊ ಕಾನ್ಫರೆನ್ಸ್‍ನಲ್ಲಿ ಕುಲಸಚಿವ ಪ್ರೊ. ಬಸವರಾಜ ಬಣಕಾರ,
ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ
ಪ್ರೊ.ಗೋಪಾಲ ಎಂ.ಅಡವಿರಾವ್, ಡೀನ್‍ರಾದ ಪ್ರೊ. ವಿ.ಕುಮಾರ್, ಪ್ರೊ.
ಕೆ.ಬಿ. ರಂಗಪ್ಪ, ಡಾ. ಕೆ.ವೆಂಕಟೇಶ್, ಸಿಂಡಿಕೇಟ್
ಸದಸ್ಯರಾದಡಾ.ಎಚ್.ಬಿ. ಗಣಪತಿ, ಡಾ.ಎಸ್. ಶ್ರೀಧರ, ವಿಜಯಲಕ್ಷ್ಮಿ
ಹಿರೇಮಠ, ಡಾ.ಜಿ.ಪಿ.ರಾಮನಾಥ್, ಎಸ್. ಮಂಜಣ್ಣ, ಎಸ್.ಆರ್.ಕಲ್ಲೇಶಿ,
ಜಿ.ಎಂ.ಪವನ್, ಎಂ.ಆಶಿಷ್‍ರೆಡ್ಡಿ, ಇನಾಯತ್ ಉಲ್ಲಾ, ಅಕಾಡೆಮಿಕ್ ಕೌನ್ಸಿಲ್
ಸದಸ್ಯರು, ವಿವಿಧ ವಿಭಾಗಗಳ ಅಧ್ಯಕ್ಷರು,
ಸಂಯೋಜನಾಧಿಕಾರಿಗಳು ಭಾಗವಹಿಸಿದ್ದರು.