ದಾವಣಗೆರೆ ಮೇ.15
ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಮಳೆಯಾಗುವ ಸಾಧ್ಯತೆ
ಇದ್ದು, ಸಂಬಂಧಿಸಿದ ತಹಶೀಲ್ದಾರರು ತಮ್ಮ ತಾಲ್ಲೂಕುಗಳಲ್ಲಿ
ಜನ-ಜಾನುವಾರು ಸೇರಿದಂತೆ ಯಾವುದೇ ರೀತಿಯ ಹಾನಿ ಆಗದಂತೆ
ಮುಂಜಾಗ್ರತಾ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಪತ್ತು ನಿರ್ವಹಣೆ
ಮುಂಜಾಗ್ರತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ
ಪ್ರತಿದಿನ 12 ಗಂಟೆ ಒಳಗಾಗಿ ದೂರವಾಣಿ ಕರೆ ಮಾಡಿ ಎಲ್ಲ
ತಹಶೀಲ್ದಾರರು ತಾಲ್ಲೂಕಿನಲ್ಲಿ ಆಗಿರುವ ಮಳೆಯ ಪ್ರಮಾಣ,
ಹಾನಿ ವಿವರಗಳು ಮತ್ತು ನದಿ ನೀರಿನ ಮಟ್ಟದ ವರದಿಯನ್ನು
ಉಪವಿಭಾಗಾಧಿಕಾರಿಗಳ ಮುಖಾಂತರ ಸಲ್ಲಿಸಬೇಕು. ಜೀವ ಹಾನಿ
ಮತ್ತು ಸಾರ್ವಜನಿಕರಿಕರಿಗೆ ತೊಂದರೆಯಾಗದಂತೆ ಜಾನುವಾರು
ಹಾನಿಗೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಎನ್‍ಡಿಆರ್‍ಎಫ್
ಮಾರ್ಗಸೂಚಿ ಅನ್ವಯ ಪರಿಹಾರ ಒದಗಿಸಬೇಕು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ವಿಪತ್ತು ನಿರ್ವಹಣೆಗಾಗಿ ತಲಾ
ರೂ. 30 ಲಕ್ಷ ಗಳನ್ನು ನೀಡಿದ್ದೇವೆ. ಇದನ್ನು ಸರಿಯಾಗಿ
ಸದ್ಬಳಕೆ ಮಾಡಿಕೊಳ್ಳಬೇಕು. ಬೆಳೆಹಾನಿ ಕುರಿತು ಕೃಷಿ,
ಮತ್ತು ತೋಟಗಾರಿಕೆ ಅಧಿಕಾರಿಗಳು ಜಂಟಿಯಾಗಿ ಕಾಲಕಾಲಕ್ಕೆ
ಸಮೀಕ್ಷೆ ನಡೆಸಿ ಬೆಳೆ ಹಾನಿ ಕುರಿತಾಗಿ ವರದಿ ಸಲ್ಲಿಸಬೇಕು ಎಂದರು.
ಗ್ರಾಮಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಹಾಗೂ
ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ
ಸ್ಥಾನದಲ್ಲಿ ಇದ್ದು ಪರಿಸ್ಥಿತಿಯನ್ನು ಸರ್ಮಪಕವಾಗಿ
ನಿಭಾಯಿಸಬೇಕು. ಪ್ರವಾಹ ಉಂಟಾಗಬಹುದಾದ ಸ್ಥಳಗಳನ್ನು
ಗುರುತಿಸಿ, ಜನರನ್ನು ಸ್ಥಳಾಂತರ ಮಾಡುವುದು, ಗಂಜಿ
ಕೇಂದ್ರ ತೆರೆಯುವ ಬಗ್ಗೆ ಯೋಜನೆ ಸಿದ್ದಪಡಿಸಿಕೊಳ್ಳಬೇಕು
ಎಂದು ಸೂಚಿಸಿದರು.
ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ
ಅವಘÀಡಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ
ಹಾಗೂ ಯೋಜನೆಯನ್ನು ಮುಂಚಿತವಾಗಿ ರೂಪಿಸಿಕೊಳ್ಳಬೇಕು.
ಹಾಗೂ ತುರ್ತು ಪರಿಸ್ಥತಿಯಲ್ಲಿ ದಿನದ 24*7
ಕಾರ್ಯನಿರ್ವಹಿಸುವಂತೆ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ
ತೆರೆಯಬೇಕೆಂದರು.
ಸರಾಗವಾಗಿ ನೀರು ಹರಿಯಲು ಕಾಲುವೆ, ಚರಂಡಿ,
ಕಲ್ವರ್ಟ್‍ಗಳಲ್ಲಿರುವ ಅಡೆತಡೆಗಳನ್ನು
ತೆರವುಗೊಳಿಸಬೇಕು ಹಾಗೂ ಮೇಲಿನ ಸ್ಲಾಬ್‍ಗಳನ್ನು ಪರಿಶೀಲಿಸಿ
ದುರಸ್ಥಿಗೊಳಿಸಬೇಕು. ವಿದ್ಯುತ್ ಕಂಬಗಳು/ಲೈನ್‍ಗಳು
ಇನ್ಸುಲೇಟರ್/ ಸ್ವಿಚ್ ಅರ್ಥಿಂಗ್ ವ್ಯವಸ್ಥೆಯನ್ನು ಪರಿಶೀಲಿಸುವುದು
ಹಾಗೂ ಯಾವುದೆ ವಿದ್ಯುತ್ ಅವಘÀಡಗಳು ಸಂಭವಿಸದಂತೆ
ಎಚ್ಚರಿಕೆ ವಹಿಸಬೇಕು ಎಂದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ
ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು
ಹಾಗೂ ಔಷಧಗಳು ದಾಸ್ತಾನು ಇರುವಂತೆ ಕ್ರಮ
ವಹಿಸಬೇಕು. ರಕ್ಷಣಾ ಕಾರ್ಯಕ್ಕೆ ಅಗತ್ಯವಿರುವ ಬೋಟ್
ಹಾಗೂ ಮುಳಗುತಜ್ಞರು, ಇತರೆ ಸಾಮಗ್ರಿಗಳನ್ನು ಮತ್ತು
ರಕ್ಷಣಾ ಸಿಬ್ಬಂದಿಗಳನ್ನು ನಿಯೋಜನೆಗೆ ಸಿದ್ದಪಡಿಸಿಕೊಳ್ಳಬೇಕು.
ಮುಖ್ಯವಾಗಿ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕಿನಲ್ಲಿ ಹೊಳೆ
ಇರುವುದರಿಂದ ಬೋಟ್ ಮತ್ತು ರಕ್ಷಣಾ ಸಿಬ್ಬಂದಿಗಳನ್ನು
ಸಿದ್ದಪಡಿಸಿರಬೇಕು ಹಾಗೂ ದೊಡ್ಡ ಹಳ್ಳ, ಮತ್ತು
ಹೊಂಡಗಳಲ್ಲಿ ಭತ್ತ ಹಾನಿ ಮತ್ತು ಬೆಳೆ ಹಾನಿ ಆಗದಂತೆ
ಕ್ರಮವಹಿಸಿ ಎಂದು ತಹಶಿಲ್ದಾರಗಳಾದ ರಾಮಚಂದ್ರಪ್ಪ ಹಾಗೂ
ತುಷಾರ್.ಬಿ ಹೊಸೂರ್ ಇವರಿಗೆ ಸೂಚಿಸಿದರು.
ಕೃಷಿ ಇಲಾಖೆಯು ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ
ದಾಸ್ತಾನಿಟ್ಟುಕೊಳ್ಳಬೇಕು. ರಸಗೊಬ್ಬರ ದಾಸ್ತಾನು ಕಡಿಮೆ
ಇದ್ದರೆ ತಿಳಿಸಿ. ಸರ್ಕಾರದೊಂದಿಗೆ ಮಾತನಾಡಲಾಗುವುದು.
ಕಳಪೆ ಬಿತ್ತನೆ ಬೀಜದ ಬಗ್ಗೆ ದೂರುಗಳಿದ್ದವು, ಇಂತಹ
ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಿ ಎಂದ ಅವರು
ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಮಾರುವವರ ವಿರುದ್ದ ಸೂಕ್ತ
ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ
ನೀಡಿದರು.
ಹಾಗೂ ಕೆಪಿಟಿಸಿಎಲ್ ನವರು ವಿದ್ಯುತ್ ಕಂಬಗಳ ಸ್ಥಿತಿಗತಿ
ನೋಡಬೇಕು. ಎಲ್ಲಿಯಾದರೂ ಶಿಥಿಲಾವಸ್ಥೆಯ ವಿದ್ಯುತ್
ಕಂಬಗಳಿದ್ದರೆ ತಕ್ಷಣ ಅವುಗಳನ್ನು ಬದಲಾಯಿಸಬೇಕು
ಎಂದರು.
ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾಹಿತಿ ನೀಡಿ, ಅಕಾಲಿಕ
ಮಳೆಯ ಹಾನಿ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಭತ್ತದ
ಬೆಳೆ ಹೆಚ್ಚು ಹಾನಿಯಾಗಿದ್ದು, ದಾವಣಗೆರೆ ತಾಲ್ಲೂಕು 355 ಹೆಕ್ಟೇರ್,
ಹರಿಹರ 86 ಹೆಕ್ಟೇರ್, ಹೊನ್ನಾಳಿ 24 ಹೆಕ್ಟೇರ್, ನ್ಯಾಮತಿ ತಾಲ್ಲೂಕಿನಲ್ಲಿ
266 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಉಪ ನಿರ್ದೆಶಕರಾದ ಲಕ್ಷ್ಮೀಕಾಂತ್
ಬೊಮ್ಮನ್ನಾರ್ ಮಾತನಾಡಿ, ಜಿಲ್ಲೆಯಲ್ಲಿ 38 ಹೆಕ್ಟೆರ್ ಅಡಿಕೆ ನಾಶವಾಗಿದೆ.
ರೈತರ ಬಾಳೆ ನಾಶವಾದರೆ ರೂ. 12,500 ಪರಿಹಾರ
ನೀಡಲಾಗುವುದು ಹಾಗೂ ಅಡಿಕೆ ಬೆಳೆಗಾರರಿಗೆ ರೂ.18,000 ಪರಿಹಾರ
ನೀಡಲಾಗುವುದು ಮತ್ತು ಹೂ ಬೆಳೆಗಾರರಿಗೆ ಹೆಕ್ಟರ್‍ಗೆ
ರೂ. 25,000 ಪರಿಹಾರ ನೀಡಲಾಗುವುದು ಎಂದರು .
ಅನ್ಯ ರಾಜ್ಯಗಳಿಂದ ನಮ್ಮ ಜಿಲ್ಲೆಗೆ, ತಾಲ್ಲೂಕುಗಳಿಗೆ,
ಗ್ರಾಮಗಳಿಗೆ ಬರುತ್ತಿದ್ದಾರೆ ಅವರನ್ನು ಕ್ವಾರಂಟೈನ್
ಮಾಡಲು ಸರಿಯಾದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ ಎಂದು
ತಹಶಿಲ್ದಾರಗಳಿಗೆ ಸೂಚಿಸಿದರು. ಆ ತಾಲ್ಲೂಕಿನ ಶಾಸಕರು,
ಮತ್ತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ ಈ ವ್ಯವಸ್ಥೆ
ಮಾಡಿಕೊಳ್ಳಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ, ಅಪರ
ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಎಎಸ್‍ಪಿ ರಾಜೀವ್, ಉಪವಿಭಾಗಾಧಿಕಾರಿ
ಮಮತಾ ಹೊಸಗೌಡರ್, ಮಹಾನಗರಪಾಲಿಕೆ ಆಯುಕ್ತರಾದ
ವಿಶ್ವನಾಥ್ ಮುದಜ್ಜಿ, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು
ಉಪಸ್ಥಿತರಿದ್ದರು.