ದಾವಣಗೆರೆ, ಮೇ.19
ಪ್ರಸ್ತುತ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು,
ಬಿತ್ತನೆ ಪೂರ್ವ ಉಳುಮೆ ಕಾರ್ಯ ಮುಗಿದಲ್ಲಿ, ಮಣ್ಣಿನ
ತೇವಾಂಶದ ಹದ ನೋಡಿ ನೆಲಗಡಲೆ ಬಿತ್ತನೆ ಮಾಡಬಹುದಾಗಿದೆ.
ನೆಲಗಡಲೆ ಒಂದು ಪ್ರಮುಖ ದ್ವಿದಳ ಎಣ್ಣೆಕಾಳು
ಬೆಳೆಯಾಗಿದ್ದು, ಎಲ್ಲಾ ರೀತಿಯ ಹವಾಗುಣಕ್ಕೂ ಹೊಂದಿಕೊಳ್ಳುವ
ಗುಣ ಹೊಂದಿದ್ದು, ಎಲ್ಲಾ ರೀತಿಯ ಮಣ್ಣಿನಲ್ಲೂ
ಬೆಳೆಯಬಹುದಾಗಿದೆ. ಸುಧಾರಿತ ಬೇಸಾಯ ಕ್ರಮಗಳು ಹಾಗೂ
ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವಂತಹ ತಳಿಗಳ
ಆಯ್ಕೆಯನ್ನು ರೈತರು ಅಳವಡಿಸಿಕೊಂಡಲ್ಲಿ ಉತ್ತಮ
ಇಳುವರಿಯ ಜೊತೆಗೆ ಒಳ್ಳೆಯ ಲಾಭ ಪಡೆಯಬಹುದಾಗಿದೆ.
2020 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ
ಜಿಲ್ಲೆಯಲ್ಲಿ ಸುಮಾರು 13,285 ಹೆಕ್ಟೇರ್ ಪ್ರದೇಶದಲ್ಲಿ
ನೆಲಗಡಲೆ ಬೆಳೆಯುವ ಗುರಿ ಹೊಂದಲಾಗಿದ್ದು, ಜಗಳೂರು,
ಹೊನ್ನಾಳಿ, ನ್ಯಾಮತಿ, ದಾವಣಗೆರೆ ಭಾಗದಲ್ಲಿ ಬೆಳೆಯಲಾಗುವುದು.
ಬಿತ್ತನೆ ಕಾಲ: ಮುಂಗಾರು ಮಳೆಯಾಶ್ರಿತ
ನೆಲಗಡಲೆಯನ್ನು ಮೇ ತಿಂಗಳ ಎರಡನೇ ವಾರದಿಂದ ಜುಲೈ
ತಿಂಗಳ ಎರಡನೇ ವಾರದೊಳಗೆ ಬಿತ್ತನೆ ಮಾಡಬಹುದು.
ಸುಧಾರಿತ ತಳಿಗಳ ಆಯ್ಕೆ: ತಳಿಗಳು:- ಟಿ.ಎಂ.ವಿ-2, ಜಿ.ಪಿ.ಬಿ.ಡಿ-4 &ಚಿmಠಿ; 5, ಜಿ-
252, ಕೆ-6.
ಪ್ರಮಾಣಿತ ಬಿತ್ತನೆ ಬೀಜವನ್ನು ಪ್ರತಿ ಮೂರು
ಹಂಗಾಮಿನಲ್ಲೊಮ್ಮೆ ಬಳಸಬೇಕು. ಪ್ರಮಾಣಿತ ಬಿತ್ತನೆ ಬಳಸಿದ
ಮಾದರಿ ಬೆಳೆ ತಾಕಿನಿಂದ ಬಿತ್ತನೆ ಬೀಜ ಆಯ್ಕೆ ಮಾಡಬಹುದಾಗಿದೆ.
ಬೀಜೋಪಚಾರ:- ಬೀಜ ಬಿತ್ತನೆ ಮಾಡುವ ಮೊದಲು ಪ್ರತಿ ಕಿ.ಗ್ರಾಂ
ನೆಲಗಡಲೆ ಬೀಜಕ್ಕೆ 2.5 ಗ್ರಾಂ ಥೈರಾಮ್ ಪುಡಿಯನ್ನು ಬೆರಸಿ,
ನೆರಳಿನಲ್ಲಿ ಒಣಗಿಸಬೇಕು, ನಂತರ ಒಂದು ಎಕರೆ ಬಿತ್ತನೆ ಬೀಜಕ್ಕೆ
150 ಗ್ರಾಂ ರೈಜೋಬಿಯಂ &ಚಿmಠಿ; 400 ಗ್ರಾಂ. ಪಿ.ಎಸ್.ಬಿ. ಜೈವಿಕ
ಗೊಬ್ಬರಗಳನ್ನು ಅಂಟು ದ್ರಾವಣ ಬಳಸಿ ಉಪಚರಿಸಿ ಬಿತ್ತನೆಗೆ
ಬಳಸಬೇಕು.
ಗೊಣ್ಣೆ ಹುಳು / ಗೆದ್ದಲು ಹುಳುಗಳ ಬಾಧೆ ಇದ್ದಲ್ಲಿ
ಕಿ.ಗ್ರಾಂ ಬಿತ್ತನೆ ಬೀಜಕ್ಕೆ 15 ಮಿ.ಲೀ. ಕ್ಲೊರೋಫೈರಿಫಾಸ್‍ನ್ನು
ಬೀಜಕ್ಕೆ ಹಾನಿಯಾಗದಂತೆ ಲೇಪಿಸಿ ಬಿತ್ತನೆ ಮಾಡುವುದು.
ಬೀಜೋಪಚಾರದ ಸಮಯದಲ್ಲಿ ಮೊದಲು ಕೀಟನಾಶಕದಿಂದ
ಉಪಚರಿಸಿ ನಂತರ ಜೈವಿಕ ಗೊಬ್ಬರದಿಂದ ಉಪಚರಿಸಬೇಕು.
ಬೀಜ ಪ್ರಮಾಣ / ಅಂತರ:- ಪ್ರತಿ ಎಕರೆಗೆ 45 ಕಿ.ಗ್ರಾಂ ಬಿತ್ತನೆ
ಬೀಜವನ್ನು 30 ಸೆಂ.ಮೀ x 15 ಸೆಂ.ಮೀ ಅಂತರದ ಸಾಲಿನಲ್ಲಿ ಬಿತ್ತ
ಬಹುದಾಗಿದೆ.
ಅಂತರ ಬೆಳೆ:- ಶೇಂಗಾ ಬೆಳೆಯಲ್ಲಿ 4 ರಿಂದ 6 ಸಾಲಿಗೆ ಒಂದು
ಸಾಲು ತೊಗರಿ ಬೆಳೆಯಬಹುದು.
ಇಡಿ ಶೇಂಗಾ ಬೆಳೆ ಬಿತ್ತನೆ ಮಾಡುವಾಗ ಕೊತ್ತುಂಬರಿ,
ಹೆಸರು, ಅಲಸಂದೆ, ಉದ್ದು, ನವಣೆ, ಸಾಸುವೆ ಬೆಳೆಗಳನ್ನು
ಶೇಂಗಾ ಸಾಲಿನಲ್ಲಿಯೇ ಮಿಶ್ರ ಬೆಳೆಯಾಗಿ ಬೆಳೆಯುವುದರಿಂದ
ಉತ್ಪಾದಕತೆ ಮತ್ತು ಆದಾಯ ಹೆಚ್ಚಿಸಬಹುದಾಗಿದೆ.
ಪೋಷಕಾಂಶ ನಿರ್ವಹಣೆ:
ಭೂಮಿಯನ್ನು ಚೆನ್ನಾಗಿ ಹದ ಮಾಡಿದ ನಂತರ ಶಿಫಾರಸ್ಸು
ಮಾಡಿದ 4 ಟನ್ ಸಾವಯವ ಗೊಬ್ಬರವನ್ನು ಬಿತ್ತನೆಗೆ 2-3 ವಾರ
ಮೊದಲು ಬಿತ್ತನೆ ಸಮಯದಲ್ಲಿ ಬಳಸಬೇಕು ಹಾಗೂ
ರಸಾಯನಿಕ ಗೊಬ್ಬರಗಳಾದ 10 ಕಿ.ಗ್ರಾಂ ಸಾರಜನಕ : 20
ಕಿ.ಗ್ರಾಂ ರಂಜಕ : 10 ಕಿ.ಗ್ರಾಂ ಪೊಟ್ಯಾಷ್‍ನ್ನು ಬಿತ್ತನೆ
ಸಮಯದಲ್ಲಿ ಹಾಕುವುದು.
ಎಕರೆಗೆ 4 ಕಿ.ಗ್ರಾಂ ಸತುವಿನ ಸಲ್ಫೇಟ್ ಹಾಗೂ 4 ಕಿ.ಗ್ರಾಂ
ಬೋರಾಕ್ಸ್‍ನ್ನು ಸಾವಯವ ಗೊಬ್ಬರಗದೊಂದಿಗೆ ಮಿಶ್ರಣ ಮಾಡಿ
ಬಿತ್ತುವ ಸಂದರ್ಭದಲ್ಲಿ ಎರಚಬೇಕು.
ಸಾಮಾನ್ಯವಾಗಿ ರೈತರು ಸಾರಜನಕ, ರಂಜಕ, ಪೊಟ್ಯಾಷ್
ಗೊಬ್ಬರವನ್ನು ಬಳಸುತ್ತಾರೆ. ಆದರೆ ಎಣ್ಣೆಕಾಳು ಬೆಳೆಯಾದ
ನೆಲಗಡಲೆಗೆ ಕ್ಯಾಲ್ಸಿಯಂ ಮತ್ತು ಗಂಧಕದ ಅವಶ್ಯಕತೆ
ಅಗತ್ಯವಾಗಿರುವುದರಿಂದ ರೈತ ಬಾಂಧವರು ಇತರೆ
ಗೊಬ್ಬರಗಳ ಜೊತೆಗೆ ಜಿಪ್ಸಂನ್ನು ಬೆಳೆಗೆ ಪೂರೈಸುವುದು
ಅತ್ಯವಶ್ಯಕವಾಗಿದೆ. ಇದರಿಂದಾಗಿ ಕಾಯಿ ಗಟ್ಟಿಯಾಗುವಿಕೆ, ಎಣ್ಣೆ
ಅಂಶ ಜಾಸ್ತಿಯಾಗುವುದರಿಂದ ಜೊಳ್ಳು ಬೀಜಗಳು ಕಡಿಮೆಯಾಗಿ
ಶೇ. 18 ರಿಂದ 20 ರಷ್ಟು ಇಳುವರಿ ಹೆಚ್ಚಾಗುವುದು.
ಬಿತ್ತನೆ ಸಮಯದಲ್ಲಿ ಎಕರೆಗೆ 2 ಕ್ವಿಂಟಾಲ್ ಜಿಪ್ಸಂ ಅನ್ನು
ಸಾಲಿನ ಮಧ್ಯೆ ಹಾಕುವುದು. ಅಥವಾ 40 ರಿಂದ 45 ದಿನದ ಬೆಳೆಗೆ /
ಹೂ ಬಿಡುವ ಹಂತದ ಸಮಯದಲ್ಲಿ 2 ಸಾಲುಗಳ ಮಧ್ಯೆ ಹಾಕಿ
ಎಡೆ ಹೊಡೆಯುವುದು.
ಮೂಟೆ ಲೆಕ್ಕದಲ್ಲಿ ರಸಗೊಬ್ಬರ ಬಳಸದೇ ಮಣ್ಣು ಪರೀಕ್ಷೆ
ಆಧಾರದ ಮೇಲೆ ರಸಗೊಬ್ಬರ ಬಳಸಬೇಕು.
ರಸಗೊಬ್ಬರಗಳನ್ನು ಅಧಿಕೃತ ಮಾರಾಟಗಾರರಿಂದ ನಿಗಧಿತ
ಬಿಲ್ಲು ಪಡೆದು ಖರೀದಿಸಬೇಕು.
ಕಳೆ ನಿರ್ವಹಣೆ:- ಬಿತ್ತಿದ ದಿವಸ / ಮಾರನೆ ದಿವ ಎಕರೆಗೆ 1 ಲೀಟರ್
ಅಲಾಕ್ಲೋರ್ 50 ಇ.ಸಿ. ಅಥವಾ 800 ಮು.ಲೀ.ಮೆಟಾಲ್‍ಕ್ಲೋರ್ 50 ಇ.ಸಿ.
ಕಳೆನಾಶಕವನ್ನು 300 ಲೀ. ನೀರಿನಲ್ಲಿ ಬೆರಸಿ ಸಿಂಪರಣೆ
ಮಾಡಬೇಕು. ಸಿಂಪರಣೆ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು
ತೇವಾಂಶವಿರಬೇಕು.
ಅಂತರ ಬೇಸಾಯ: ಬಿತ್ತಿದ 15 ದಿವಸಗಳ ನಂತರ, 10 ದಿವಸಗಳ
ಅಂತರದಲ್ಲಿ 3 ಬಾರಿ ಕುಂಟೆ ಹಾಯಿಸಬೇಕು. ಯಾವುದೇ
ಕಾರಣಕ್ಕೂ ಬಿತ್ತಿದ 45 ದಿವಸಗಳ ನಂತರ ಕುಂಟೆ
ಹಾಯಿಸಬಾರದು ಎಂದು ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.