ದಾವಣಗೆರೆ ಮೇ.22
ಕೋವಿಡ್ 19 ಹಿನ್ನೆಲೆ ರಾಜ್ಯದ ಉಪನೋಂದಣಿ ಕಚೇರಿಗಳಲ್ಲಿ
2004 ರಿಂದ ತಹಲ್‍ವರೆಗೆ ಋಣಭಾರ ಪ್ರಮಾಣ ಪತ್ರ (ಇಟಿಛಿumbeಡಿಚಿಟಿಛಿe
ಛಿeಡಿಣiಜಿiಛಿಚಿಣe) ಹಾಗೂ ದಸ್ತಾವೇಜಿನ ದೃಢೀಕೃತ ನಕಲು ಪ್ರತಿ
(ಅeಡಿಣiಜಿieಜ ಛಿoಠಿಥಿ oಜಿ ಜoಛಿumeಟಿಣ) ಗಳನ್ನು ಆನ್‍ಲೈನ್ ವೆಬ್‍ಸೈಟ್
hಣಣಠಿ://ಞಚಿveಡಿioಟಿಟiಟಿe .ಞಚಿಡಿಟಿಚಿಣಚಿಞಚಿ.gov.iಟಿ ಮುಖಾಂತರವೇ ಕಡ್ಡಾಯವಾಗಿ
ಪಡೆಯಲು ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ
ಆಯುಕ್ತರು, ಬೆಂಗಳೂರು ಇವರು ಸೂಚಿಸಿರುತ್ತಾರೆ.
ಇದರನ್ವಯ ಆನ್‍ಲೈನ್‍ನಲ್ಲಿ ಋಣಭಾರ ಪ್ರಮಾಣ ಪತ್ರ
ಮತ್ತು ದಸ್ತಾವೇಜಿನ ದೃಢೀಕೃತ ನಕಲು ಪ್ರತಿ ಪಡೆಯಲು
ಸಮಸ್ಯೆಗಳು ಉಂಟಾದಲ್ಲಿ ಪರಿಹರಿಸಲು ನೋಂದಣಿ ಮಹಾ
ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು,
ಬೆಂಗಳೂರು ಕೇಂದ್ರ ಕಚೇರಿಯ ಗಣಕೀಕರಣ ಶಾಖೆಯಲ್ಲಿ
ತಾತ್ಕಾಲಿಕವಾಗಿ ಸಹಾಯವಾಣಿ ಕೇಂದ್ರ(ಹೆಲ್ಪ್‍ಡೆಸ್ಕ್)
ತೆರೆಯಲಾಗಿದ್ದು, ಸಾರ್ವಜನಿಕರು ದಾವಣಗೆರೆ ಜಿಲ್ಲೆಯ ಉಪ
ನೋಂದಣಿ ಕಚೇರಿಗಳಲ್ಲಿ ಆನ್‍ಲೈನ್‍ನಲ್ಲಿ ಋಣಭಾರ ಪತ್ರ ಮತ್ತು
ದಸ್ತಾವೇಜು ದೃಢೀಕೃತ ನಕಲು ಪ್ರತಿ ಪಡೆಯಲು ಏನಾದರೂ
ಸಮಸ್ಯೆಗಳು ಉಂಟಾದಲ್ಲಿ ಈ ಸಹಾಯವಾಣಿ ಕೇಂದ್ರದ
ದೂರವಾಣಿ ಸಂಖ್ಯೆ 7019917044 ನ್ನು ಸಂಪರ್ಕಿಸಿ ಪರಿಹಾರ
ಪಡೆದುಕೊಳ್ಳಬಹುದೆಂದು ಜಿಲ್ಲಾ ನೋಂದಣಾಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.