ದಾವಣಗೆರೆ ಮೇ.27
ಸ್ಕಿಜೋಫ್ರೇನಿಯಾ(ಚಿತ್ತವಿಕಲತೆ)ದಿಂದ ಬಳಲುತ್ತಿರುವ
ಮಾನಸಿಕ ಅಸ್ವಸ್ಥರು ಸಮಾಜದಿಂದ ದೂರ ಉಳಿದಿರುವುದು
ವಿಷಾಧನೀಯ. ಸ್ಕಿಜೋಫ್ರೇನಿಯಾ ಖಾಯಿಲೆ ಯಾವುದೇ ಮಾಟ
ಮಂತ್ರದಿಂದ ಬರುವಂತಹದ್ದಲ್ಲ. ಬದಲಾಗಿ ಇದು
ಮೆದುಳಿನಲ್ಲಿರುವ ರಾಸಾಯನಿಕ ಅಂಶಗಳು
ಏರುಪೇರಾಗುವುದರಿಂದ ಅಥವಾ ಅನುವಂಶೀಯತೆಯಿಂದ
ಬರುವುದಾಗಿದೆ ಇದನ್ನು ಅರಿತು ಜನಸಾಮಾನ್ಯರು
ಮೂಢನಂಬಿಕೆಗೆ ಒಳಗಾಗಬಾರದು ಎಂದು
ಮನೋವೈದ್ಯರಾದ ಡಾ|| ಗಂಗಂ ಸಿದ್ದಾರೆಡ್ಡಿ ತಿಳಿಸಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ
ಮಾನಸಿಕ ಆರೋಗ್ಯ ಕಾರ್ಯಕ್ರಮ, ಮನೋವಿಕಾಸ
ಪುನರ್‍ವಸತಿ, ಆಪ್ತ ಸಮಾಲೋಚನಾ ಶಿಕ್ಷಣ ಸಂಸ್ಥೆ ಮತ್ತು ಎ.ಪಿ.ಡಿ
ಸಂಸ್ಥೆ ದಾವಣಗೆರೆ ಇವರ ಸಹಯೋಗದೊಂದಿಗೆ ಮಾಯಕೊಂಡ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ “ವಿಶ್ವ
ಸ್ಕಿಜೋಫ್ರೇನಿಯಾ ಅರಿವು ದಿನ”ವನ್ನು ಅಲ್ಲಿನ ಗ್ರಾಮಸ್ಥರಿಗೆ ಅರಿವು
ಕಾರ್ಯಕ್ರಮವನ್ನು ಮಾಸ್ಕ್ ಧರಿಸುವುದರ ಮೂಲಕ ಹಾಗೂ
ಸಾಮಾಜಿಕ ಅಂತರ ಕಾಯ್ದುಕೊಂಡು ನೆರವೇರಿಸಲಾಯಿತು.
ಈ ವರ್ಷದ ಚಿತ್ತವಿಕಲ ದಿನಾಚರಣೆ ಘೋಷಣೆ: “ನೀವು ಏನು
ಸಹಾಯ ಮಾಡಬಹುದು” ಎಂಬ ಘೋಷವಾಕ್ಯವಿದೆ. ಇಲ್ಲಿ ಬೇಗ
ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಅವರಿಗೆ ಮನೋವೈದ್ಯರಿಂದ
ಉತ್ತಮವಾದ ಚಿಕಿತ್ಸೆ ನೀಡಿ ಮನೋ ಸಾಮಾಜಿಕ ಆರೈಕೆ ಮತ್ತು
ಪುನರ್‍ವಸತಿಯನ್ನು ಕಲ್ಪಿಸುವುದಾಗಿದೆ ಮತ್ತು ಸರ್ಕಾರದಿಂದ
ಬರುವಂತಹ ಸೌಲಭ್ಯಗಳನ್ನು ದೊರಕಿಸುವುದು ನಮ್ಮೆಲ್ಲರ
ಆದ್ಯ ಕರ್ತವ್ಯವಾಗಿದೆ. ಈ ರೀತಿಯಾಗಿ ಮಾಡುವ ಮೂಲಕ ಮಾನಸಿಕ
ಅಸ್ವಸ್ಥರನ್ನ ಮುಖ್ಯವಾಹಿನಿಗೆ ತರಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮನಶಾಸ್ತ್ರಜ್ಞರಾದ ಎಸ್ ವಿಜಯಕುಮಾರ್,
ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ಸಂತೋಷ್‍ಕುಮಾರ್ ಎಂ,
ಶುಶ್ರೂಷಕ ಅಧಿಕಾರಿ ಗಿರೀಶ್‍ನಾಯ್ಕ ಎಸ್. ವೈ., ಕ್ಷೇತ್ರ ಆರೋಗ್ಯ
ಶಿಕ್ಷಣಾಧಿಕಾರಿಗಳಾದ ಗಾಯಿತ್ರಿ, ಎ.ಪಿ.ಡಿ ಸಂಸ್ಥೆಯ ಮುಖ್ಯಸ್ಥರಾದ
ಹನುಮಂತರಾಯಪ್ಪ ಹಾಗೂ ಮಾಯಕೊಂಡ ಪ್ರಾಥಮಿಕ
ಆರೋಗ್ಯ ಕೇಂದ್ರದ ಆಶಾಕಾರ್ಯಕರ್ತೆಯರು &ಚಿmಠಿ; ಸಿಬ್ಬಂದಿ
ವರ್ಗದವರು ಇದ್ದರು.