ದಾವಣಗೆರೆ ಜೂ.12
ರಾಜ್ಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣ
ಸಂಬಂಧ ವಿಧಿಸಿರುವ ಲಾಕ್‍ಡೌನ್ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಆಸ್ತಿ
ತೆರಿಗೆಯನ್ನು ಜು.31 ರವರೆಗೆ ಶೇ.5 ರಿಯಾಯಿತಿ ದರದಲ್ಲಿ
ಪಾವತಿಸಲು ಅವಕಾಶ ನೀಡಲಾಗಿರುತ್ತದೆ.
ಹಾಗೂ ಆಸ್ತಿ ತೆರಿಗೆ ಪಾವತಿಸಲು ವಿಳಂಬ ದಂಡ ರಹಿತವಾಗಿ ಆ.01 ರಿಂದ
ಅ.31 ರವರೆಗೆ ಪಾವತಿಸಲು ಅವಕಾಶವಿರುವುದರಿಂದ ಸಾರ್ವಜನಿಕರು
ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು
ಮಹಾನಗರಪಾಲಿಕೆಯ ಆಯುಕ್ತರಾದ ವಿಶ್ವನಾಥ ಮುದಜ್ಜಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.