ದಾವಣಗೆರೆ ಜಿಲ್ಲೆ ಜೂ 16 ಹೊನ್ನಾಳಿ ಪಟ್ಟಣದಲ್ಲಿ ಇಂದು ಸನ್ಮನ್ಯಾ ಶ್ರೀ ಡಾ// ಶಾಮನೂರು ಶೀವಶಂಕರಪ್ಪನವರು 90ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷ ಮಧುಗೌಡ ಮತ್ತು ಯುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿ ಹೊನ್ನಾಳಿ ಪಟ್ಟಣದ ಮಧ್ಯ ಭಾಗದಲ್ಲಿರುವ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಬ್ರೆಡ್, ಹಣ್ಣು, ಬಿಸ್ಕೆಟ್ ಮತ್ತು ಕುಡಿಯುವ ನೀರಿನ ಬಾಟಲ್‍ನ್ನು ವಿತರಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು, ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರು, ತಾಲೂಕು ಕಾಂಗ್ರೆಸ್ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ್ರು, ಎ.ಪಿ.ಎಂ.ಸಿ ಸದಸ್ಯರು ಬೀರಪ್ಪ ಎ.ಜಿ, ಪ್ರಕಾಶ್, ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷ ಮಧುಗೌಡ , ರೋಷನ್, ಪ್ರವೀಣ್, ರಮೇಶ್ ಗೌಡ ಟಿ.ಜಿ , ಬಾಹುಬಲಿ, ಶಿವರಾಜ್, ಸ್ವರೂಪ್, ಇನ್ನೂ ಮುಂತಾದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಸಹ ಭಾಗಿಯಾಗಿದ್ದರು.