ದಾವಣಗೆರೆ ಜೂ.24 
ದಾವಣಗೆರೆ ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರು
ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ
ಫಸಲ್ ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿ ಜೂ.06 ರಿಂದ
ಸರ್ಕಾರದ ಆದೇಶದಲ್ಲಿ ಅಧಿಸೂಚನೆ ಮಾಡಲಾಗಿರುತ್ತದೆ.
2020-21ನೇ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ
ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ
ಗ್ರಾಮ ಪಂಚಾಯತ್ ಮಟ್ಟಕ್ಕೆ ಮುಸುಕಿನ ಜೋಳ (ಮಳೆ
ಆಶ್ರಿತ) ಬೆಳೆÉಯನ್ನು ದಾವಣಗೆರೆ, ಹೊನ್ನಾಳಿ, ನ್ಯಾಮತಿ,
ಜಗಳೂರು, ಚನ್ನಗಿರಿ ತಾಲ್ಲೂಕುಗಳಿಗೆ ಹಾಗೂ ಮುಸುಕಿನ
ಜೋಳ (ಮಳೆ ಆಶ್ರಿತ), ಭತ್ತ (ನೀರಾವರಿ) ಬೆಳೆಗಳನ್ನು ಹರಿಹರ
ತಾಲ್ಲೂಕಿಗೆ ಅಧಿಸೂಚನೆ ಮಾಡಲಾಗಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್
ಬಿಮಾ(ವಿಮಾ) ಯೋಜನೆಯಡಿ ಹೋಬಳಿ ಮಟ್ಟಕ್ಕೆ ಜೋಳ (ಮಳೆ
ಆಶ್ರಿತ), ಜೋಳ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ),
ಸೂರ್ಯಕಾಂತಿ (ನೀರಾವರಿ), ಮುಸುಕಿನ ಜೋಳ (ನೀರಾವರಿ), ರಾಗಿ
(ಮಳೆ ಆಶ್ರಿತ), ರಾಗಿ (ನೀರಾವರಿ). ಹುರುಳಿ (ಮಳೆ ಆಶ್ರಿತ), ಭತ್ತ
(ವiಳೆ ಆಶ್ರಿತ), ಭತ್ತ (ನೀರಾವರಿ), ನವಣೆ (ಮಳೆ ಆಶ್ರಿತ), ತೊಗರಿ
(ಮಳೆ ಆಶ್ರಿತ), ಶೇಂಗಾ (ಮಳೆ ಆಶ್ರಿತ), ಶೇಂಗಾ (ನೀರಾವರಿ), ಸಜ್ಜೆ
(ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ),
ಹತ್ತಿ (ಮಳೆ ಆಶ್ರಿತ), ಹತ್ತಿ (ನೀ), ಈರುಳ್ಳಿ (ಮಳೆ ಆಶ್ರಿತ), ಈರುಳ್ಳಿ
(ನೀರಾವರಿ) ಹಾಗೂ ಟೊಮಟೋ ಬೆಳೆಗಳಿಗೆ ವಿಮೆ
ನೋಂದಾಯಿಸಲು ಅವಕಾಶವಿರುತ್ತದೆ. ಪ್ರತೀ ಹೋಬಳಿಗೆ
ಪ್ರತ್ಯೇಕವಾಗಿ ಮೇಲ್ಕಂಡ ಬೆಳೆಗಳಲ್ಲಿ ಅಧಿಸೂಚನೆ
ಮಾಡಿರುತ್ತದೆ.
ಬೆಳೆಸಾಲ ಪಡೆದ ರೈತರನ್ನು ಬೆಳೆಸಾಲ ಮಂಜೂರು
ಮಾಡುವಾಗ, ಕಡ್ಡಾಯವಾಗಿ ಬೆಳೆವಿಮೆಗೆ
ಒಳಪಡಿಸಲಾಗುವುದು, ಹಾಗೂ ಬೆಳೆ ಸಾಲದ ಮೊತ್ತಕ್ಕೆ ರೈತರ

ವಿಮಾ ಕಂತನ್ನು ಹೆಚ್ಚುವರಿಯಾಗಿ ಮಂಜೂರು
ಮಾಡಲಾಗುವುದು. ಬೆಳೆ ಸಾಲ ಪಡೆಯದ ಇಚ್ಚೆಯುಳ್ಳ
ರೈತರು ಬೆಳೆ ವಿಮೆ ಘೋಷಣೆ ಪತ್ರಗಳನ್ನು ಅವರವರ
ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್, ಸಹಕಾರ ಸಂಘಗಳಲ್ಲಿ ಅಥವಾ
ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮಾ ಕಂತನ್ನು ಪಾವತಿಸಿ
ನೋಂದಾಯಿಸಲು ವಿನಂತಿಸಿದೆ. ಬೆಳೆ ಸಾಲ ಪಡೆಯದ ರೈತರು
ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ /
ಖಾತೆ /ಪಾಸ್ ಪುಸ್ತಕ/ ಕಂದಾಯ ರಶೀದಿ ಹಾಗೂ ಆಧಾರ ಸಂಖ್ಯೆ
ಮಾಹಿತಿಯನ್ನು ನೀಡತಕ್ಕದ್ದು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್
ಬಿಮಾ(ವಿಮಾ) ಯೋಜನೆಯಡಿ 2020-21 ರ ಮುಂಗಾರಿನಲ್ಲಿ ಇದ್ದಂತೆ
ಅಧಿಸೂಚಿತ ಪ್ರದೇಶದಲ್ಲಿ ಶೇ.75ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ
ಬಿತ್ತನೆ ವಿಫಲಗೊಂಡಲ್ಲಿ ಶೇ.25ರಷ್ಟು ಪರಿಹಾರ ಹಾಗೂ ಸ್ಥಳ
ನಿರ್ಧಿಷ್ಟ ಪ್ರಕೃತಿ ವಿಕೋಪದಿಂದಾಗಿ ಬಿತ್ತನೆಯಿಂದ ಕಟಾವಿನ
ಅವಧಿಯಲ್ಲಿ ಶೇ.50ಕ್ಕಿಂತ ಹೆಚ್ಚು ನಷ್ಟವಾಗಿದ್ದರೆ ಶೇ.25ರಷ್ಟು
ಪರಿಹಾರವನ್ನು ಮುಂಚಿತವಾಗಿ ನೀಡಲು ಹಾಗೂ ಬೆಳೆ ಕಟಾವಿನ
ನಂತರ ಜಮೀನಿನಲ್ಲಿ ಬೆಳೆಯನ್ನು ಒಣಗಲು ಬಿಟ್ಟಂತಹ
ಸಂದರ್ಭಗಳÀಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾದರೆ
ಪರಿಹಾರ ನೀಡುವ ಎಲ್ಲಾ ವೈಶಿಷ್ಟ್ಯಗಳನ್ನು ಮುಂದುವರಿಸಲಾಗಿದೆ.
ಪ್ರತಿಯೊಂದು ಗ್ರಾಮ ಪಂಚಾಯತಿವಾರು ಮತ್ತು
ಹೋಬಳಿವಾರು ಬೇರೆ ಬೇರೆ ಬೆಳೆಗಳಿಗೆ ಅಧಿಸೂಚನೆ ನೀಡಿದ್ದು,
ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ಗ್ರಾಮೀಣ/ಸಹಕಾರಿ ಬ್ಯಾಂಕ್
(ಸಾಲ ಸಂಸ್ಥೆ)ಗಳನ್ನು, ರೈತ ಸಂಪರ್ಕ ಕೇಂದ್ರಗಳ ಕೃಷಿ
ಅಧಿಕಾರಿಗಳನ್ನು ಇಲ್ಲವೇ ತಾಲ್ಲೂಕು ಸಹಾಯಕ ಕೃಷಿ
ನಿರ್ದೇಶಕರುಗಳನ್ನು ಸಂಪರ್ಕಿಸಬಹುದು.
ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು
ಮುಂಗಾರು ಹಂಗಾಮಿಗೆ ನೋಂದಣಿ ಮಾಡಲು ಕಡೆಯ
ದಿನಾಂಕದ ವಿವರ : ಹೆಸರು (ಮಳೆ ಆಶ್ರಿತ), ಹತ್ತಿ (ಮಳೆ
ಆಶ್ರಿತ),ಈರುಳ್ಳಿ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ),ಟೊಮಟೋ,
ಎಳ್ಳು (ಮಳೆ ಆಶ್ರಿತ) ಜುಲೈ 15 ನೋಂದಣಿ ಮಾಡಲು ಕಡೆಯ
ದಿನವಾಗಿದೆ.
ಭತ್ತ(ಮಳೆ ಆಶ್ರಿತ), ಜೋಳ(ಮಳೆ ಆಶ್ರಿತ)(ನೀ), ರಾಗಿ(ಮಳೆ
ಆಶ್ರಿತ)(ನೀ), ನವಣೆ (ಮಳೆ ಆಶ್ರಿತ), ತೊಗರಿ(ಮಳೆ ಆಶ್ರಿತ),
ಶೇಂಗಾ (ಮಳೆ ಆಶ್ರಿತ) (ನೀ), ಸಜ್ಜೆ (ಮಳೆ ಆಶ್ರಿತ), ಹುರುಳಿ
(ಮಳೆ ಆಶ್ರಿತ), ಮುಸುಕಿನ ಜೋಳ (ನೀ) ಜುಲೈ 31 ನೋಂದಣಿ

ಮಾಡಲು ಕಡೆಯ ದಿನವಾಗಿದ್ದು, ಸೂರ್ಯಕಾಂತಿ (ಮಳೆ ಆಶ್ರಿತ)
(ನೀ) ಆಗಸ್ಟ್ 14 ನೋಂದಣಿಗೆ ಕಡೆಯ ದಿನವಾಗಿದೆ.
ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರಿಗೆ ಗ್ರಾಮ
ಪಂಚಾಯಿತಿ ಮಟ್ಟದ ಬೆಳೆ ವಿಮೆಗೆ ನೊಂದಾಯಿಸಲು ಕಡೆಯ
ದಿನಾಂಕದ ವಿವರ : ಭತ್ತ (ನೀ) ಮತ್ತು ಮುಸುಕಿನ ಜೋಳ
(ಮಳೆಆಶ್ರಿತ) (ನೀ) ಕ್ಕೆ ಪ್ರಿವೆಂಟೆಡ್ ಸೋವಿಂಗ್ ಕಟ್‍ಆಫ್ ದಿನಾಂಕ ಆ.14
ಆಗಿದ್ದು ಜು.31 ನೋಂದಾಯಿಸಿಕೊಳ್ಳಲು ಕಡೆಯ ದಿನ.
ಕೂಡಲೇ ರೈತಬಾಂಧವರು ನಿಗಧಿತ ದಿನಾಂಕದೊಳಗೆ
ಬೆಳೆ ವಿಮೆಗೆ ನೋಂದಾವಣಿ ಮಾಡಸಬೇಕೆಂದು ಜಂಟಿ ಕೃಷಿ
ನಿರ್ದೇಶಕ ಶರಣಪ್ಪ ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *