ದಾವಣಗೆರೆ ಜೂ.24
ಸ್ಮಾಟ್‍ಸಿಟಿ ಯೋಜನೆ ವತಿಯಿಂದ ನಗರದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್
ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ತರಗತಿಗಳನ್ನು ನಿರ್ಮಿಸುವ
ಕಾಮಗಾರಿ ಕೈಗೊಳ್ಳಲಾಗಿದೆ. ಜೊತೆಗೆ ದಿ ಅರ್ಬನ್ ಲರ್ನಿಂಗ್ ಇಂಟರ್ನ್‍ಷಿಪ್
ಪ್ರೋಗ್ರಾಂ (ಟ್ಯುಲಿಪ್) ಯೋಜನೆಯಡಿಯಲ್ಲಿ ಎಂಜಿನಿಯರ್‍ಗಳಿಗೆ
ವೃತ್ತಿಪರ ಕಲಿಕೆಯ ಅನುಭವ ಹೆಚ್ಚಿಸಲು ಇಂಟರ್ನ್‍ಷಿಪ್‍ಗೆ ಅವಕಾಶ
ಒದಗಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ
ನಿರ್ದೇಶಕರಾದ ರವೀಂದ್ರ ಮಲ್ಲಾಪುರ ಹೇಳಿದರು.
ಬುಧವಾರ ಜಿಲ್ಲಾ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿ
ಹಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಡಿಜಿಟಲ್ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ತರಗತಿಗಳನ್ನು
ನಿರ್ಮಿಸುವ ಕಾಮಗಾರಿ ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದೆ.
ಮೊದಲನೇ ಹಂತದಲ್ಲಿ 19 ಶಾಲೆಗಳಲ್ಲಿ 62 ಸ್ಮಾರ್ಟ್ ತರಗತಿಗಳು
ಮತ್ತು 19 ಸ್ಮಾರ್ಟ್ ಲ್ಯಾಬ್ ನಿರ್ಮಿಸುವ ಕಾಮಗಾರಿ ನಡೆಯುತ್ತಿದ್ದು,
ಈ ಕಾಮಗಾರಿ ರೂ. 3 ಕೋಟಿ ಮೊತ್ತದ್ದಾಗಿದೆ. ಹಾಗೂ ಎರಡನೇ
ಹಂತದಲ್ಲಿ 10 ಶಾಲೆಗಳಲ್ಲಿ 40 ಸ್ಮಾರ್ಟ್ ತರಗತಿಗಳು ಮತ್ತು 11
ಸ್ಮಾರ್ಟ್ ಲ್ಯಾಬ್‍ಗಳನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ
ನೀಡಲಾಗುತ್ತಿದ್ದು, ಈ ಕಾಮಗಾರಿಯು ರೂ. 2 ಕೋಟಿ
ವೆಚ್ಚದ್ದಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಎರಡನೇ ಹಂತದ ಕಾಮಗಾರಿಯಲ್ಲಿ ಪ್ರೌಢಶಾಲಾ
ವಿದ್ಯಾರ್ಥಿಗಳಿಗೆ ಅನುಕೂ¯ವಾಗುವಂತೆ ‘ವಿದ್ವತ್ ಎಜುಕೇಷನಲ್
ಮೊಬೈಲ್ ಆ್ಯಪ್‍ನ್ನು’ ಅನಾವರಣಗೊಳಿಸಲಾಗುತ್ತಿದೆ.
ಜಿಲ್ಲೆಯಾದ್ಯಂತ ಓದುತ್ತಿರುವ 8, 9 ಮತ್ತು 10ನೇ
ತರಗತಿಯ ಸರ್ಕಾರಿ ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳು
ಅಭ್ಯಸಿಸಲು ವಿದ್ವತ್ ಆ್ಯಪ್‍ನ್ನು 2 ತಿಂಗಳು ಕಾಲ ಉಚಿತವಾಗಿ
ನೀಡಲಾಗುತ್ತಿದೆ. ತದನಂತರ ಕೇವಲ ಸರ್ಕಾರಿ ಶಾಲೆಯ
ವಿದ್ಯಾರ್ಥಿಗಳಿಗೆ 10 ತಿಂಗಳುಗಳ ಕಾಲ ಉಚಿತವಾಗಿ ನೀಡಲಾಗುತ್ತದೆ
ಎಂದರು.
ಸ್ಮಾರ್ಟ್ ತರಗತಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ
ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಡಿಜಿಟಲ್ ತಂತ್ರಜ್ಞಾನದ
ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಸ್ಮಾರ್ಟ್
ತರಗತಿಯಾಗಿದೆ. ಸ್ಮಾರ್ಟ್ ತರಗತಿ ತಂತ್ರಜ್ಞಾನವು
ಶೈಕ್ಷಣಿಕ ವಲಯದಲ್ಲಿನ ಆಧುನಿಕ ವಿಧಾನವಾಗಿದ್ದು,
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿಯ ಹಾದಿಯಲ್ಲಿ
ಸಾಗಿÁ್ಪಲೋಚನಾ ಮತ್ತು ಕಲ್ಪನಾಶಕ್ತಿಯನ್ನು ಹೆಚ್ಚಿಸುವಲ್ಲಿ
ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ವಿದ್ವತ್ ಎಜುಕೇಷನಲ್ ಮೊಬೈಲ್ ಆ್ಯಪ್..
ಈ ಆ್ಯಪ್ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಡಿಜಿಟಲ್ ಶಿಕ್ಷಣವನ್ನು
ಒದಗಿಸುವುದೇ ತನ್ನ ಮುಖ್ಯ ಧ್ಯೇಯವನ್ನಾಗಿಸಿಕೊಂಡಿದೆ. ಈ ಕಲಿಕಾ
ಸೌಲಭ್ಯವು ಶಾಲೆಗಳಿಗೆ ಮಾತ್ರ ಸೀಮಿವಾಗಿರದೇ ಆ್ಯಪ್‍ನಲ್ಲೂ ಕೂಡ
ಲಭ್ಯವಿದೆ. ವಿದ್ಯಾರ್ಥಿಗಳ ಕಲಿಕೆಗೆ ಒಂದು ಉತ್ತಮ ಸಾಧನವಾಗಿದ್ದು,
ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ
ಕಲಿಯಬೇಕಾದ ಪಠ್ಯ ವಿಷಯಗಳನ್ನು ವಿದ್ವತ್ ಆ್ಯಪ್ ಮೂಲಕ
ಮನೆಯಲ್ಲಿಯೇ ಸುರಕ್ಷಿತವಾಗಿ ಅಭ್ಯಾಸ ಮಾಡಬಹುದಾಗಿದೆ.
-ವ್ಯವಸ್ಥಾಪಕ ನಿರ್ದೇಶಕರಾದ ರವೀಂದ್ರ ಮಲ್ಲಾಪುರ
ಪದವಿ ಹಂತದ ಶಿಕ್ಷಣವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ
ಇಂಟರ್ನ್‍ಷಿಪ್‍ಗೆ ಅವಕಾಶ ನೀಡುವ ಮೂಲಕ ಸ್ಮಾರ್ಟ್‍ಸಿಟಿಯಂತಹ
ಯೋಜನೆಗಳಲ್ಲಿ ನಿರ್ಣಾಯಕ ಸವಾಲಗಳನ್ನು ಪರಿಹರಿಸಲು ಹೊಸ
ಆಲೋಚನೆ ಮತ್ತು ನವೀನ ಚಿಂತನೆ ಬಳಸಿಕೊಳ್ಳಲು
ಪ್ರಯತ್ನಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 6 ಇಂಟರ್ನ್‍ಗಳಿಗೆ ಅವಕಾಶ ನೀಡಲಾಗುತ್ತಿದೆ. ಬಿ.ಇ ಸಿವಿಲ್
ಪದವಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಅರ್ಜಿ
ಸಲ್ಲಿಸಬಹುದಾಗಿದೆ. ಭಾರತೀಯ ನಾಗಕರಿಗೆ ಮಾತ್ರ ಅವಕಾಶ
ಕಲ್ಪಿಸಲಾಗಿದೆ. ಅಂತಿಮ ವರ್ಷದ ಫಲಿತಾಂಶವನ್ನು ಷೋಷಿಸಿದ
ದಿನಾಂಕದಿಂದ ಇಂಟರ್ನ್‍ಷಿಪ್ ಪಡೆಯಲು ಬಯಸಿದ ದಿನಾಂಕದವರೆಗೆ 18
ತಿಂಗಳುಗಳಿಗಿಂತ ಹೆಚ್ಚಿರುವಂತಿಲ್ಲ. ಇಂಟರ್ನ್‍ಷಿಪ್ ಅವಧಿಯು
ಕನಿಷ್ಠ 8 ವಾರದಿಂದ ಗರಿಷ್ಠ 1 ವರ್ಷದವರೆಗೆ ಇರುತ್ತದೆ ಎಂದು
ತಿಳಿಸಿದರು.
ಇಂಟರ್ನ್‍ಷಿಪ್‍ಗಾಗಿ ಅರ್ಜಿಗಳನ್ನು ಟ್ಯುಲಿಪ್ ಪೋರ್ಟಲ್ hಣಣಠಿs://iಟಿಣeಡಿಟಿshiಠಿ.ಚಿiಛಿಣe-
iಟಿಜiಚಿ.oಡಿg/ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಅರ್ಜಿದಾರನು
ತಮ್ಮ ಅರ್ಜಿಯೊಂದಿಗೆ ನಗರ ಸಮಸ್ಯೆಗಳ ಸಾರಾಂಶವನ್ನು 1000
ಪದಗಳಿಗೆ ಮೀರದಂತೆ ಜೊತೆಗೆ ಇಂಟರ್ನ್‍ಷಿಪ್ ಕೈಗೊಳ್ಳುವ
ಉದ್ದೇಶಗಳ ಬಗ್ಗೆÀ ಸಂಕ್ಷಿಪ್ತವಾಗಿ ಬರೆಯಬೇಕು. ಇದರೊಂದಿಗೆ
ಅಭ್ಯರ್ಥಿಯು ತಾವು ಅಧ್ಯಯನ ನಡೆಸಿದ ಸಂಬಂಧಪಟ್ಟ
ಶೈಕ್ಷಣಿಕ ಸಂಸ್ಥೆಯ ಸಕ್ಷಮ ಪ್ರಾಧಿಕಾರದಿಂದ
ಶಿಫಾರಸ್ಸನ್ನು ಒಳಗೊಂಡಿರಬೇಕು. ಆಯ್ಕೆಯಾಗುವ
ಅಭ್ಯರ್ಥಿಗೆ ತಿಂಗಳಿಗೆ ರೂ. 8 ಸಾವಿರ ಪ್ರೋತ್ಸಾಹಧನವನ್ನು
ಸ್ಮಾರ್ಟ್‍ಸಿಟಿ ವತಿಯಿಂದ ಭರಿಸಲಾಗುವುದು ಎಂದು ಹೇಳಿದರು.
ಡಯಟ್ ಪ್ರಾಂಶುಪಾಲರಾದ ಎಚ್.ಕೆ.ಲಿಂಗರಾಜು ಮಾತನಾಡಿ,
ಸ್ಮಾರ್ಟ್ ಸಿಟಿ ತಂಡ ಈ ಆ್ಯಪ್‍ನ ಕುರಿತು ನನ್ನ ಗಮನಕ್ಕೆ ತಂದಿದೆ. ಈ
ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ನೋಡಿದಾಗ ನಿಜವಾಗಲೂ ಬಹಳ
ಸಂತೋಷವಾಯಿತು. ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ
ಆ್ಯಪ್‍ನ ಬಳಕೆಯು ಕಲಿಕೆಯಲ್ಲಿ ನಿರಂತರತೆಯನ್ನು
ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕಂಠಪಾಠದಿಂದ
ಮುಕ್ತವಾಗಿ ಕಲಿಕಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು
ಇದೊಂದು ಪ್ರಯೋಗವಾಗಿದೆ. ವಿದ್ಯಾರ್ಥಿಗಳು ತಮ್ಮ
ಜ್ಞಾನವನ್ನು ತಾವೇ ಕಟ್ಟಿಕೊಳ್ಳಬೇಕು ಎಂದ ಅವರು,
ಪಠ್ಯಕ್ರಮ ಆಶಯಕ್ಕೆ ತಕ್ಕಂತೆ ಆ್ಯಪ್ ಇದಿಯೋ ಇಲ್ಲವೋ
ಎಂಬುದರ ಕುರಿತು ಅಧ್ಯಯನ ಮಾಡಲು ಸಮಯ ಬೇಕಿದೆ
ಎಂದರು.
ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿ, ಸ್ಮಾರ್ಟ್‍ಸಿಟಿಯವರು ಶಿಕ್ಷಣ
ಇಲಾಖೆಗೆ ಅತ್ಯುತ್ತಮವಾದ ಕೆಲಸವನ್ನು ಮಾಡಿಕೊಡುತ್ತಿದ್ದಾರೆ
ಎನ್ನುವುದು ತುಂಬಾ ಸಂತೋಷದ ವಿಚಾರÀವಾಗಿದೆ. ನಾವೆಲ್ಲರೂ
ಕೊರೊನಾ ಸಮಸ್ಯೆ ಎದುರಿಸುತ್ತಿದ್ದೇವೆ. ಜೂ. 1 ರಿಂದ ಶಾಲೆಗಳು
ಪ್ರಾರಂಭವಾಗಬೇಕಿತ್ತು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ
ಶಾಲೆಗಳ ಪ್ರಾರಂಭ ವಿಳಂಬವಾಗಿದೆ. ಸ್ಪರ್ಧಾತ್ಮಕ ಜಗತ್ತು
ಇದಾಗಿರುವುದರಿಂದ ಖಾಸಗಿ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ
ಆನ್‍ಲೈನ್ ಶಿಕ್ಷಣಕ್ಕೆ ಒತ್ತು ನೀಡುತ್ತಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಈ
ಸೌಲಭ್ಯಗಳು ಕಡಿಮೆ ಇವೆ. ಈ ಹಿನ್ನೆಲೆಯಲ್ಲಿ ವಿದ್ವತ್ ಎಜುಕೇಷನಲ್
ಮೊಬೈಲ್ ಆ್ಯಪ್ ಸಹಕಾರಿಯಾಗಿದೆ. ಪಠ್ಯಾಧಾರಿತವಾಗಿ ಕಲಿಕೆಯ
ಮೂಲಕ ವಿದ್ಯಾರ್ಥಿಗಳ ಸಾಮಥ್ರ್ಯ ಹೆಚ್ಚಿಸಲು ಅನುಕೂಲವಾಗಲಿದೆ
ಎಂದರು.
ವಿದ್ವತ್ ಎಜುಕೇಷನಲ್ ಮೊಬೈಲ್ ಆ್ಯಪ್‍ನ ಸಿಇಓ ರೋಹಿತ್ ಎಂ.ಪಾಟೀಲ್
ಮಾತನಾಡಿ, ವಿದ್ವತ್ ಎಜುಕೇಷನಲ್ ಮೊಬೈಲ್ ಆ್ಯಪ್‍ನ್ನು ಡಿಸೆಂಬರ್ 2019
ರಲ್ಲಿ ಲಾಂಚ್ ಮಾಡಲಾಗಿದೆ. ಕನ್ನಡ, ಇಂಗ್ಲೀಷ್ ಹಾಗೂ ಉರ್ದು
ಭಾಷೆಯಲ್ಲಿ ಲಭ್ಯವಿದೆ. ಇದು 6 ವಿಷಯಗಳು ಒಳಗೊಂಡಿದ್ದು,
ಇದರಲ್ಲಿ ಅನಿಮೇಷನ್ ಹಾಗೂ ಪ್ರಶ್ನೆ ಪತ್ರಿಕೆ ಇವೆ. ಈ ಆ್ಯಪ್
ಮುಖ್ಯವಾಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು
ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಡಿಎಸ್‍ಇಆರ್‍ಟಿ ಸಿಲಬಸ್ ಇದ್ದು,
ಈಗಾಗಲೇ ರಾಜ್ಯದಲ್ಲಿ 10 ಸಾವಿರ ಶಾಲೆಗಳಲ್ಲಿ ಆ್ಯಪ್
ಬಳಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿಯನ್ನು
ಉಂಟುಮಾಡುವುದರಲ್ಲಿ ಆ್ಯಪ್ ಸಹಾಯಕವಾಗಿದೆ. ಇದು
ವಿದ್ಯಾರ್ಥಿಗಳಲ್ಲಿ ಕಲಿಕಾ ಮನೋಭಾವ ಹೆಚ್ಚಿಸಿ ತಮ್ಮನ್ನು ತಾವು
ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುತ್ತದೆ
ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ನಿರ್ದೇಶಕರು
ಹಾಗೂ ಸಿಬ್ಬಂದಿಗಳು ಹಾಜರಿದ್ದರು.