ದಾವಣಗೆರೆ ಜಿಲ್ಲೆ july15 ಹೊನ್ನಾಳಿ ತಾಲೂಕು ಯುಟಿಪಿ ಆಫೀಸ್ ಹಿಂಬಾಗ ಹೆಚ್ ಕಡದಕಟ್ಟೆ ಶ್ರೀ ಸಾಯಿ ಗುರುಕುಲ ರೆಸಿಡೆನ್ಸಿಯಲ್ ಸ್ಕೂಲ್ ಸಿಬಿಎಸ್ಇ ಗ್ರೇಡ್ 10ನೇ ತರಗತಿ 2019-20ನೇ ಸಾಲಿನಲ್ಲಿ ಶಾಲೆಯ ಮಕ್ಕಳು ಪರೀಕ್ಷೆಯನ್ನು ಬರೆದಿದ್ದು ಪರೀಕ್ಷೆ ಬರೆದ ವಿದ್ಯಾರ್ಥಿಗಳು 50 ,ಉತ್ತೀರ್ಣರಾದ ವಿದ್ಯಾರ್ಥಿಗಳು 50 ಅಂದರೆ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಈ ಶಾಲೆಯ ಶೇಕಡ ಫಲಿತಾಂಶ ಲೆಕ್ಕ ಹಾಕಿ ನೋಡಿದರೆ ಶೇಕಡ
100 %ರಷ್ಟು ಫಲಿತಾಂಶ ಬಂದಿದೆ ಎಂದು ಶ್ರೀ ಸಾಯಿ ಗುರುಕುಲ ರೆಸಿಡೆನ್ಷಿಯಲ್ ಸ್ಕೂಲ್ ಅಧ್ಯಕ್ಷರಾದ ಶ್ರೀ ಡಿ.ಜಿ ಶಾಂತನಗೌಡ್ರು ರವರು ತಿಳಿಸಿದರು. ನಂತರ ಅವರು ಮಾತನಾಡಿ ನಮ್ಮ ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುವುದು ಹೆಮ್ಮೆ ಮತ್ತು ಸಂತೋಷದ ವಿಷಯ ಎಂದು ಹೇಳಿದರು ಹಾಗೂ ಈ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರುತ್ತಾ ನೂರಕ್ಕೆ ನೂರರಷ್ಟು ಫಲಿತಾಂಶ ಬರಲಿಕ್ಕೆ ಕಾರಣೀಭೂತರಾದ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಹಾಗೂ ಆಡಳಿತ ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳು ತಿಳಿಸಿದರು.

ಈ ಶಾಲೆಯ ಫಲಿತಾಂಶದ ವಿವರ
2019 ಮತ್ತು 20 ನೇ ಸಾಲಿನ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ ಈ ಕೆಳಕಂಡಂತಿವೆ.

  1. ನವ್ಯ ಹೆಚ್.ಜೆ ಹೊನ್ನಾಳಿ 500/ 469 ಅಂಕ 93 .8 ಪರ್ಸೆಂಟ್
  2. ಅಂಕಿತ ಎಮ್.ಆರ್ ಹೊನ್ನಾಳಿ 500/459 ಅಂಕ 91 .8 ಪರ್ಸೆಂಟ್
  3. ಅಭಿಲಾಶ್ ಎಚ್.ಟಿ ಹೊನ್ನಾಳಿ 500/453 ಅಂಕ 90.6 ಪರ್ಸೆಂಟ್
  4. ಚೇತನ್ ಜಿ.ಎನ್ ಹೊನ್ನಾಳಿ 500/452 ಅಂಕ 89.4 ಪರ್ಸೆಂಟ್
  5. ಸಿಂಚನ ಆರ್.ಪಿ ಹೊನ್ನಾಳಿ 500/433 ಅಂಕ 86.6 ಪರ್ಸೆಂಟ್
  6. ಅಚಲ್ ಠಾಕ್ಲೆಳೆ ಬೆಳಗಾವಿ 500/427 ಅಂಕ 85.4 ಪರ್ಸೆಂಟ್
  7. ಡಿಸ್ಟಿಂಕ್ಷನ್ ಅಂದರೆ 85 ಪರ್ಸೆಂಟ್ ತೆಗೆದುಕೊಂಡಿರುವ ವಿದ್ಯಾರ್ಥಿಗಳು 6 ಜನ
  8. ಫಸ್ಟ್ ಕ್ಲಾಸ್ ತೆಗೆದುಕೊಂಡಿರುವ ವಿದ್ಯಾರ್ಥಿಗಳು 36 ಜನ
  9. ಸೆಕೆಂಡ್ ಕ್ಲಾಸ್ ತೆಗೆದುಕೊಂಡಿರುವ ವಿದ್ಯಾರ್ಥಿಗಳು 7 ಜನ ಸಾಮಾನ್ಯ ಉತ್ತಿರ್ಣ ಒಂದು ಒಟ್ಟು 50 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Leave a Reply

Your email address will not be published. Required fields are marked *

You missed