ಹೊಸದಿಲ್ಲಿಯ ಎನ್.ಸಿ.ಇ.ಆರ್.ಟಿ ಮಾರ್ಗಸೂಚಿಯಂತೆ ರಾಷ್ಟ್ರೀಯ
ಪ್ರತಿಭಾನ್ವೇಷಣೆ ಪರೀಕ್ಷೆ ಎನ್‍ಟಿಎಸ್‍ಇ ಪರೀಕ್ಷೆಯನ್ನು ಎರಡು
ಹಂತದಲ್ಲಿ ನಡೆಸಲಾಗುತ್ತಿದ್ದು, ಮೊದಲನೇ ಹಂತದ
ಪರೀಕ್ಷೆಯನ್ನು ರಾಜ್ಯ ಮಟ್ಟದಲ್ಲಿ  2022ರ ಜನವರಿ-16ರಂದು
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕೆಎಸ್‍ಕ್ಯೂಎಎಸಿ
ವತಿಯಿಂದ ನಡೆಸಲು ಆನ್‍ಲೈನ್ ಮೂಲಕ ಅರ್ಜಿಗಳನ್ನು
ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ನ. 30 ಕೊನೆಯ ದಿನವಾಗಿದೆ.           
      ಎನ್‍ಟಿಎಸ್‍ಇ ಮೊದಲನೇ ಹಂತದ ಪರೀಕ್ಷೆಯನ್ನು ಸರ್ಕಾರಿ,
ಸ್ಥಳೀಯ ಸಂಸ್ಥೆಗಳ ಶಾಲೆಗಳು, ಅನುದಾನಿತ, ಅನುದಾನ ರಹಿತ
ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ದೂರಶಿಕ್ಷಣದಲ್ಲಿ
10ನೇ ತರಗತಿಗೆ ನೊಂದಾಯಿಸಿಕೊಂಡಿರುವ ಮತ್ತು ಅರ್ಜಿ ಸಲ್ಲಿಸಿರುವ
ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದೆ. ಈ ಪರೀಕ್ಷೆಯ ಆನ್ ಲೈನ್ ಅರ್ಜಿಯು
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ
ಮಂಡಳಿಯ hಣಣಠಿs://ssಟಛಿ.ಞಚಿಡಿಟಿಚಿಣಚಿಞಚಿ.gov.iಟಿ  ವೆಬ್ ಸೈಟ್‍ನಲ್ಲಿ
ಲಭ್ಯವಿರುತ್ತದೆ.
     ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳ
ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಮಂಡಳಿಯ ವೆಬ್ ಸೈಟ್‍ನಲ್ಲಿ
ಲಭ್ಯವಿರುವ ಎನ್‍ಟಿಎಸ್‍ಇ ಲಾಗಿನ್ ನಲ್ಲಿ ಸಲ್ಲಿಸಬಹುದು.. ವಿದ್ಯಾರ್ಥಿಗಳು ಅರ್ಜಿ
ಸಲ್ಲಿಸಲು ನ.30 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ
ಕೆಎಸ್‍ಕ್ಯೂಎಎಸಿ ಕಚೆÉೀರಿಯ ದೂ.ಸಂ: 080-23341615 ನ್ನು
ಸಂಪರ್ಕಿಸಬಹುದು.
     ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ
ಶಾಲಾ ಮುಖ್ಯ ಶಿಕ್ಷಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು
ನೊಂದಾಯಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು
ಡಯಟ್‍ನ ಪ್ರಾಚಾರ್ಯರು ಹಾಗೂ ಪದನಿಮಿತ್ತ
ಉಪನಿರ್ದೇಶಕರು(ಅಭಿವೃದ್ಧಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *