ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭವೃದ್ಧಿ
ನಿಗಮದಡಿ ಬರುವ ವಿಶ್ವಕರ್ಮ, ಉಪ್ಪಾರ, ಅಂಬಿಗ, ಆರ್ಯವೈಶ್ಯ,
ಮಡಿವಾಳ, ಅಂಬಿಗ, ಸವಿತಾ ಸಮುದಾಯಗಳ ಹಿಂದುಳಿದ ವರ್ಗಗಳ
ಫಲಾಪೇಕ್ಷಿಗಳಿಗೆ ನಿಗಮದಿಂದ ವಿವಿಧ ಯೋಜನೆಗಳಡಿ
ನಿಯಮಾನುಸಾರ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅಭ್ಯರ್ಥಿಗಳು
ನಿಗಮದಿಂದ ಪಡೆಯಬೇಕಿರುವ ಮಾಹಿತಿಗೆ ಅಧಿಕಾರಿ, ಸಿಬ್ಬಂದಿ
ಹೊರತುಪಡಿಸಿ ಅನ್ಯರನ್ನು ಸಂಪರ್ಕಿಸಬಾರದು ಎಂದು ನಿಗಮದ
ಜಿಲ್ಲಾ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ
ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಮೂಲಕ
ಸ್ವಯಂ ಉದ್ಯೋಗ ಸಾಲ ಯೋಜನೆ, ಅರಿವು ಶೈಕ್ಷಣೀಕ ಸಾಲ
ಯೋಜನೆ ಹಾಗೂ ಗಂಗಾ ಕಲ್ಯಾಣ ಯೋಜನೆಗಳನ್ನು
ಅನುಷ್ಟಾನಗೊಳಿಸಲಾಗುತ್ತಿದ್ದು, ಈಗಾಗಲೆ ವಿವಿಧ ಯೋಜನೆಗಳಡಿ
ಫಲಾಪೇಕ್ಷಿಗಳು ಅರ್ಜಿ ಸಲ್ಲಿಸಿದ್ದು, ಈ ರೀತಿ ಸಲ್ಲಿಕೆಯಾದ
ಅರ್ಜಿಗಳನ್ನು ಗಣಕೀಕರಣ ಮಾಡಿ ಆಯಾ ವಿಧಾನಸಭಾ ಕ್ಷೇತ್ರ
ಶಾಸಕರುಗಳು, ಜಿಲ್ಲಾ ಪಂಚಾಯತ್‍ನ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ
ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಾನುಸಾರ
ನಡೆಯುವ ಆಯ್ಕೆ ಸಮಿತಿ ಸಭೆಯ ಮೂಲಕ
ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಪ್ರಸ್ತುತ ಜಿಲ್ಲಾ ನಿಗಮದಲ್ಲಿ ಎನ್.ಆರ್. ಶೇಖರ್-ಜಿಲ್ಲಾ
ವ್ಯವಸ್ಥಾಪಕರು, ಸಿದ್ದಲಿಂಗ-ಪ್ರಥಮ ದರ್ಜೆ ಸಹಾಯಕ,
ರೂಪ.ಎಸ್.ಟಿ.-ಪ್ರ.ದ.ಸ., ಭಾಗ್ಯಶ್ರೀ-ಲೆಕ್ಕ ಪತ್ರ ಸಹಾಯಕರು
(ಹೊರಗುತ್ತಿಗೆ), ಹಾಗೂ ಪ್ರವೀಣ್ ಕುಮಾರ್ ಪಿ.ಸಿ -ಗಣಕಯಂತ್ರ
ಸಹಾಯಕರು(ಹೊರಗುತ್ತಿಗೆ) ಕಾರ್ಯನಿರ್ವಹಿಸುತ್ತಿದ್ದು ಹೆಚ್ಚಿನ
ಮಾಹಿತಿಗಾಗಿ ಇವರುಗಳನ್ನು ಸಂಪರ್ಕಿಸಬಹುದು.
ಹಿಂದೆ ನಿಗಮದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸವಿತಾ,
ಲಕ್ಷ್ಮಿ, ದೇವೇಗೌಡ ಮತ್ತು ಚಾಂದಿನಿ ಹೆಸರಿನ ಸಿಬ್ಬಂದಿಗಳನ್ನು ಕಚೇರಿ
ಕೆಲಸದಿಂದ ತೆಗೆದುಹಾಕಲಾಗಿದ್ದು, ನಿಗಮಕ್ಕೆ ಸಂಬಂಧಿಸಿದ
ಯಾವುದೇ ಮಾಹಿತಿಗಳಿಗಾಗಿ ಸಾರ್ವಜನಿಕರು ಇವರನ್ನು
ಸಂಪರ್ಕಿಸಬಾರದು. ಇವರೊಂದಿಗೆ ಸಾರ್ವಜನಿಕರು ಮಾಡಿರುವ
ಯಾವುದೇ ವ್ಯವಹಾರಗಳಿಗೆ ಜಿಲ್ಲಾ ವ್ಯವಸ್ಥಾಪಕರಾಗಲಿ ಅಥವಾ
ಕಚೇರಿ ಸಿಬ್ಬಂದಿಗಳಾಗಲಿ ಜವಾಬ್ದಾರರಲ್ಲ ಎಂದು ನಿಗಮದ ಜಿಲ್ಲಾ
ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.