ಕೃಷಿ ವಲಯದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯ ಚಟುವಟಿಕೆಗಳನ್ನು ಗುರುತಿಸುವಿಕೆ, ಶೂನ್ಯ ಬಂಡವಾಳ, ಸಾವಯವ ಕೃಷಿಗೆ ಒತ್ತು ನೀಡಿರುವುದು ಸ್ವಾಗತಾರ್ಹ.
ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡಿರುವುದು ಬೆಲೆ ಸ್ಥಿರತೆಗೆ ಅನುಕೂಲವಾಗುವುದು.
ಕೃಷಿ ಚಟುವಟಿಕೆಗಳಾದ ಸಿಂಪರಣೆ ಮತ್ತು ಜಮೀನಿನ ಸರ್ವೆ ಗೆ ದ್ರೋಣ್ ಬಳಕೆ ಉತ್ತಮ ಆವಿಷ್ಕಾರ.
ರೈತ ಉತ್ಪಾದಕ ಕಂಪನಿ ಗಳಿಗೆ, ಕೃಷಿ ಸಂಸ್ಕರಣೆಗೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಗೆ ನಬಾರ್ಡ್ ಯೋಜನೆ ಅಡಿ ಅನುದಾನ ನೀಡಿರುವುದು ಇವುಗಳ ಬೆಳವಣಿಗೆಗೆ ಸಹಾಯವಾಗಲಿದೆ.

ರೈತರ ಆದಾಯ ದ್ವಿಗುಣ ಗೊಳಿಸುವ ನಿಟ್ಟಿನಲ್ಲಿ ಹೊಸ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ, ಸೂಕ್ತ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆ, ಕೃಷಿ ಉತ್ಪನ್ನಗಳ ರಫ್ತಿಗೆ, ಸೆಕೆಂಡರಿ ಅಗ್ರಿಕಲ್ಚರ್ ಉತ್ತೇಜನಕ್ಕೆ ಇನ್ನೂ ಉತ್ತಮವಾದ ಯೋಜನೆಗಳನ್ನು ರೂಪಿಸಬಹುದಾಗಿತ್ತು ಎನ್ನುತ್ತಾರೆ.ಬಸವನಗೌಡ ಎಂ.ಜಿ.ತೋಟಗಾರಿಕೆ ವಿಜ್ಞಾನಿಗಳು ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ.

Leave a Reply

Your email address will not be published. Required fields are marked *