ಹೊನ್ನಾಳಿ,3: ಹೊನ್ನಾಳಿ ಪಟ್ಟಣ ಪಂಚಾಯ್ತಿ ಇದೀಗ ಪುರಸಭೆಗೆಯನ್ನಾಗಿಸಿ ಮೆಲ್ದರ್ಜೆಗೆ ಏರಿಸಿ ದೇವನಾಯಕನಹಳ್ಳಿ,ಹಿರೇಮಠ ಮಲ್ಲದೇವರಕಟ್ಟೆ,ಸೇರಿದ್ದು ಅಲ್ಲಿನ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಶಾಸಕರು ಮತ್ತು ಪುರಸಭೆ ಅಧಿಕಾರಿಗಳು ವಿಫಲರಾಗಿರುವುದಾಗಿ ವಿಶ್ವ ಕರ್ನಾಟಕ ರಕ್ಷಣಾ ವೇಧಿಕೆ ತಾಲೂಕು ಅಧ್ಯಕ್ಷ ಮರಿಗೊಂಡನಹಳ್ಳಿ ಪ್ರದೀಪ ಹೇಳಿದರು.
ಗುರುವಾರ ವಿಶ್ವ ಕರ್ನಾಟಕ ರಕ್ಷಣಾ ತಾಲೂಕು ಪಾದಾಧಿಕಾರಿಗಳ ವತಿಯಿಂದ ಪ್ರತಿಭಟನೆ ನಡೆಸಿ ಪುರಸಭೆ ಮತ್ತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿದ ನಂತರ ಮಾತನಾಡಿದ ಮರಿಗೊಂಡನಹಳ್ಳಿ ಪ್ರದೀಪ ಹೆಚ್.ಕಡದಕಟ್ಟೆ ಗ್ರಾಮ ಪಂಚಾಯ್ತಿಗೆ ಸೇರಿದ ಗ್ರಾಮಗಳನ್ನು ಪುರಸಭೆಗೆ ಸೆರ್ಪಡೆಗೊಳಿಸಿ 14 ತಿಂಗಳು ಕಳೆದರೂ ಅಲ್ಲಿನ ಅಭಿವೃದ್ದಿ ಕಡೆ ಈವರೆಗೂ ಗಮನ ಹರಿಸದೆ ಸಂಭಂದಪಟ್ಟ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ.
ಮೂಲಭೂತ ಅಭಿವೃದ್ದಿ ಕಾರ್ಯಕ್ಕೆ ಸಾರ್ವಜನಿಕರು ಅಲೆಯುತ್ತಿರುವುದು ನಿರಂತರ ಸಂಗತಿಯಾಗಿದೆ. ಗ್ರಾಮ ಪಂಚಾಯ್ತಿಯು ಈ ಕ್ಷೇತ್ರಗಳು ನಮ್ಮಿಂದ ಕೈಬಿಟ್ಟಿವೆ ಎಂಬ ಉದಾಸೀನ ತೋರುತ್ತಿದ್ದು ಇತ್ತ ಪುರಸಭೆಯ ಈ ಗ್ರಾಮಗಳ ಸೆರ್ಪಡೆ ಪ್ರಕ್ರೀಯೇ ಇನ್ನೂ ನಡೆಯಬೇಕಿದೆ ಎಂಬ ಅಧಿಕಾರಿಗಳ ಬೆಜವಾಬ್ದಾರಿ ಹೇಳಿಕೆಗಳು ಬರುತ್ತಿರುವ ಅಮಾಯಕ ಜನತೆ ಎರಡು ಕಡೆ ಅಲೆದು ಐರಾಣಾಗಿದ್ದಾರೆ ಎಂದರು.
ಕ್ಷೇತ್ರಗಳ ಅಭಿವೃದ್ದಿ ಬಗ್ಗೆ ಇದೇರಿತಿ ಉದಾಸೀನವಾದರೆ ವೇದಿಕೆಯು ಪಂಚಾಯ್ತಿ ವಿರುದ್ದ ಹೋರಾಟ ಹಮ್ಮಿಕೊಳ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಶ್ವ ಕರ್ನಾಟಕ ರಕ್ಷಣಾ ವೇಧಿಕೆ ಪದಾಧಿಕಾರಿಗಳು ಅಪ್ಪು,ಯಶವಂತ,ನರಸಿಂಹ,ಅಭಿಷೇಕ,ಸುಹಾಸ್,ರಾವುಲ್,ನಿಕೀಲ್,ಮನೋಜ್,ಕತ್ತಿಗೆ ನಾಗರಾಜ ಇತರರು ಇದ್ದರು.

Leave a Reply

Your email address will not be published. Required fields are marked *