ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು
ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧನಾ ಫರ್ಮ್‍ನ
ನೇಮಕಾತಿ ಕುರಿತಂತೆ ಮಾಹಿತಿ ಸಲ್ಲಿಸುವಂತೆ ಸಹಕಾರ ಸಂಘಗಳ
ಲೆಕ್ಕಪರಿಶೋಧನಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
     ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ನಿಯಮ
29-ಬಿ(8) ರನ್ವಯ ಯಾವುದೇ ಸಹಕಾರ ಸಂಘದ ಮುಖ್ಯ
ಕಾರ್ಯನಿರ್ವಾಹಕರು ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ
ನಿಯಮಗಳು 2004 ನಿಯಮ 8-ಬಿ(8) ರನ್ವಯ ಯಾವುದೇ
ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರು ವಾರ್ಷಿಕ ಮಹಾ

ಸಭೆಯಲ್ಲಿ ಲೆಕ್ಕಪರಿಶೋಧಕರ ಅಥವಾ ಲೆಕ್ಕಪರಿಶೋಧನಾ
ಫರ್ಮ್ ಅನ್ನು ನೇಮಕ ಮಾಡಿಕೊಂಡ ಬಗ್ಗೆ ವಾರ್ಷಿಕ ಮಹಾಸಭೆ
ನಡೆದ ದಿನಾಂಕದಿಂದ 07 ದಿನದೊಳಗಾಗಿ ಲೆಕ್ಕಪರಿಶೋಧಕರಿಗೆ
ಅಥವಾ ಲೆಕ್ಕಪರಿಶೋಧನಾ ಫರ್ಮಿಗೆ ಮತ್ತು ಸಹಕಾರಿ
ಲೆಕ್ಕಪರಿಶೋಧನಾ ನಿರ್ದೇಶಕರಿಗೆ ತಿಳಿಸಬೇಕಾಗಿರುತ್ತದೆ.
     ಜಿಲ್ಲೆಯ ಬಹುಪಾಲು ಸಹಕಾರ ಸಂಘಗಳು ಈವರೆಗೂ
ಮಾಹಿತಿಯನ್ನು ಸಲ್ಲಿಸದಿರುವುದರಿಂದ ಈ ಪ್ರಕಟಣೆಯ ದಿನಾಂಕದಿಂದ
03 ದಿನಗಳೊಳಗಾಗಿ ವಾರ್ಷಿಕ ಮಹಾ ಸಭೆಯಲ್ಲಿ
ಲೆಕ್ಕಪರಿಶೋಧಕರನ್ನು/ ಲೆಕ್ಕಪರಿಶೋಧನಾ ಫರ್ಮ್‍ನ್ನು
ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ವಾರ್ಷಿಕ
ಮಹಾಸಭೆಯ ನಡವಳಿಯೊಂದಿಗೆ ಸಹಕಾರ ಸಂಘಗಳ
ಲೆಕ್ಕಪರಿಶೋಧನಾ ಇಲಾಖೆ ಉಪ ನಿರ್ದೇಶಕರ ಕಚೇರಿ ಇವರಿಗೆ
ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಮಾಹಿತಿ ನೀಡದ ಸಹಕಾರಿ
ಸಂಘಗಳಿಗೆ ಇಲಾಖೆಯಿಂದ ಲೆಕ್ಕಪರಿಶೋಧಕರನ್ನು
ನೇಮಿಸಲಾಗುವುದು ಹಾಗೂ ಲೆಕ್ಕಪರಿಶೋಧನೆಯಲ್ಲಿ
ವಿಳಂಬವಾದಲ್ಲಿ ಸಂಬಂಧಿಸಿದ ಸಂಘಗಳ ಅಥವಾ ಸಹಕಾರಿಗಳ ಮುಖ್ಯ
ಕಾರ್ಯನಿರ್ವಹಣಾಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು
ಸೂಚನೆ ನೀಡಲಾಗಿದೆ.
     ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ
ಇಲಾಖೆ ಉಪ ನಿರ್ದೇಶಕರ ಕಚೇರಿ #257/1-5, ಮೊದಲನೇ ಮಹಡಿ, ಜನತಾ
ಬಜಾರ್ ಕಟ್ಟಡ, ಮೊದಲನೇ ಮುಖ್ಯರಸ್ತೆ, ಪಿ.ಜೆ. ಬಡಾವಣೆ, ದಾವಣಗೆರೆ,
577 002 ಅಥವಾ ದೂರವಾಣಿ ಸಂಖ್ಯೆ 08192-231351 ಅಥವಾ ಇ-ಮೇಲ್ ವಿಳಾಸ
 ಜಜಛಿಚಿ-ಜಚಿvಚಿಟಿಚಿgeಡಿe-ಞಚಿ@ಟಿiಛಿ.iಟಿ ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ
ತಿಳಿಸಿದೆ.

Leave a Reply

Your email address will not be published. Required fields are marked *