ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ
ಸಚಿವಾಲಯದ ಅಡಿಯಲ್ಲಿ ಬರುವ ದಾವಣಗೆರೆಯ ನೆಹರು ಯುವ
ಕೇಂದ್ರ ವತಿಯಿಂದ ನೆರೆ-ಹೊರೆ ಯುವ-ಸಂಸತ್ತು
ಕಾರ್ಯಕ್ರಮದ ನಿಮಿತ್ತ “ಆತ್ಮ ನಿರ್ಭರ್ ಭಾರತ-ಸ್ವಾವಲಂಬಿ
ಭಾರತವನ್ನು ನಿರ್ಮಾಣ ಮಾಡುವ ಉದ್ದೇಶದ” ಕುರಿತು ಜಿಲ್ಲಾ
ಮಟ್ಟದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.
ಇದೇ ಫೆ.11 ರಂದು ಬೆಳಿಗ್ಗೆ 10 ಗಂಟೆಗೆ ದಾವಣಗೆರೆ ನೆಹರು
ಯುವ ಕೇಂದ್ರ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ 42 ಇಲ್ಲಿ ಭಾಷಣ
ಸ್ಪರ್ಧೆ ಏರ್ಪಡಿಸಲಾಗಿದ್ದು, ಭಾಗವಹಿಸಲು ವಿದ್ಯಾರ್ಥಿಗಳು 15 ರಿಂದ 29 ರ
ವಯಸ್ಸಿನ ಒಳಗಿನವರಾಗಿರಬೇಕು. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ
ಪ್ರಥಮ ಸ್ಥಾನ ಪಡೆದವರಿಗೆ ರೂ.8000, ದ್ವಿತೀಯ-ರೂ. 4000,
ಹಾಗೂ ತೃತೀಯ- ರೂ.2000 ಬಹುಮಾನ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಿ ಭಾಷಣವನ್ನು ಮಾಡಲಿಚ್ಚಿಸುವವರು
ಫೆ.11 ರಂದು ಬೆಳಿಗ್ಗೆ 10 ಘಂಟೆಗೆ ನೆಹರು ಯುವ ಕೇಂದ್ರ
ಕಾರ್ಯಲಯದಲ್ಲಿ ಹಾಜರಿದ್ದು ಭಾಷಣ ಸ್ಪರ್ದೆಯಲ್ಲಿ
ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿ
ಮಾಡಿಕೊಳ್ಳಲು ಮೊಬೈಲ್ ಸಂಖ್ಯೆ 9901863789 ಕ್ಕೆ ಸಂಪರ್ಕಿಸುವಂತೆ
ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೆಕ್ಕಪರಿಶೋಧಕರ ನೇಮಕ ಕುರಿತು ಮಾಹಿತಿ ಸಲ್ಲಿಸಲು ಸೂಚನೆ