ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಜಡೆ ಹೊಬಳಿ ತಲಗುಂದ ಗ್ರಾಮದಲ್ಲಿ ಡಾ. ಆರ್. ಶೇಜೇಶ್ವರ. ಸಹಾಯಕ ನಿರ್ದೇಶಕರು, ಪುರಾತತ್ತ÷್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಶಿವಪ್ಪನಾಯಕ ಅರಮನೆ ಶಿವಮೊಗ್ಗ ಹಾಗೂ ಚುರ್ಚಿಗುಂಡಿ ಮಂಜಪ್ಪ ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ತಲಗುಂದ ಗ್ರಾಮದ ರಾಮೇಶ್ವರ ದೇವಾಲಯದ ಹತ್ತಿರ ಈಗ ಸ್ಥಳೀಯರು ಈಶ್ವರ ದೇವಾಲಯ ಎಂದು ಕರೆಯುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕವನ್ನು ಆಳಿದ ರಾಜ್ಯದ ಪ್ರಥಮ ಕನ್ನಡ ಮನೆತನವಾದ ಕದಂಬ ಅರಸರ ರವಿವರ್ಮನ ಕಾಲದ ಶಾಸನವು ಪತ್ತೆಯಾಗಿದೆ.

ಶಾಸನ: ಕಲ್ಲಿನ ಮೇಲಿರುವ ಶಾಸನವು ೧೪೩ ಸೆಂ.ಮೀ ಉದ್ದ ಹಾಗೂ ೪೯ ಸೆಂ.ಮೀ ಆಗಲವಿದ್ದು, ಬ್ರಾಹ್ಮಿ ಲಿಪಿ ಹಾಗೂ ಸಂಸ್ಕೃತ ಬಾಷೆಯ ಏಳು(೭) ಸಾಲಿನಿಂದ ಕೂಡಿದ್ದು, ಶಾಸನವು ಅಲ್ಲಲ್ಲಿ ಸ್ವಲ್ಪ ತೃಟಿತವಾಗಿದೆ. ಶಾಸನದ ಸಾರಾಂಶ: ಬನವಾಸಿ ಕದಂಬರ ರವಿವರ್ಮನಿಗೆ ಸಂಬAಧಿಸಿದAತೆ ಇದುವರೆಗೂ ೧೦ ಶಾಸನಗಳು ಮಾತ್ರ ಕಂಡುಬAದಿದ್ದು, ಈಗ ದೊರೆತಿರುವ ಶಾಸನವು ಸೇರಿ ೧೧ ಶಾಸನಗಳು ಕಂಡುಬರುತ್ತವೆ. ರವಿವರ್ಮನು ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಶ. ೪೮೫ ರಿಂದ ಕ್ರಿ.ಶ. ೫೧೯ರ ವರೆಗೆ ಸುಮಾರು ೩೪ ವರ್ಷಗಳು ಆಳ್ವಿಕೆ ಮಾಡಿದ್ದು, ಈ ಶಾಸನದಲ್ಲಿ ಹಾರಿತಿಯ ಪುತ್ರರಾದ ಮಾನವ್ಯಸ ಗೋತ್ರಕ್ಕೆ ಸೇರಿದ ಚರ್ಚೆಯಲ್ಲಿ ಪ್ರಸಿದ್ಧರಾದ ಕದಂಬ ವಂಶದ ಮೃಗೇಶವರ್ಮನ ಮಗನಾದ ಮಂಡಲದ ಅಧಿಪತಿಯಾದ ರವಿವರ್ಮನು ದೇವತೆಗಳಿಂದ ಪೂಜಿಸಲ್ಪಟ್ಟು ಪ್ರಸಿದ್ದನಾಗಿದ್ದು ಮುಚ್ಚುಂಡಿಯ ಗ್ರಾಮದಲ್ಲಿ ಆರನೇ ಒಂದು ಭಾಗನ್ನು ದಾನ ನೀಡಿದ್ದಾರೆ. ದಾನ ನೀಡಿದ ಗ್ರಾಮವು ಶಿಕಾರಿಪುರ ತಾಲ್ಲೂಕಿನ ಅಗ್ರಹಾರ ಮುಚ್ಚಡಿ ಅಥವಾ ಮಾಯಿತಮ್ಮನ ಮುಚ್ಚಡಿ ಆಗಿರಬಹುದಾಗಿದೆ.

ಈ ಶಾಸನವು ಕ್ರಿ.ಶ. ೫-೬ನೇ ಶತಮಾನದ್ದಾಗಿದೆ. ಈ ಶಾಸನದ ಹತ್ತಿರ ಕದಂಬ ಅರಸರ ಕಾಲದ ಸಿಂಹ ಶಿಲ್ಪವು ಸಹಾ ದೊರೆತಿದೆ. ಇದರ ಅಕ್ಕಪಕ್ಕದಲ್ಲಿಯೇ ಇತರೆ ಶಾಸನಗಳು, ಶಿವಲಿಂಗಗಳು, ಸಪ್ತಮಾತೃಕೆ ಶಿಲ್ಪಗಳು ಕಂಡುಬರುತ್ತವೆ. ಕೃತಜ್ಞತೆಗಳು: ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಮಂಜಪ್ಪ ಗ್ರಾಮಸ್ಥರಾದ ಮೇಘರಾಜ್, ಮಲ್ಲಿಕಾರ್ಜುನ ಶಾಸನವನ್ನು ಓದಿಕೊಟ್ಟ ಡಾ.ಜಗದೀಶ ಮತ್ತು ನಾಗರಾಜರಾವ್ ಮೈಸೂರು. ಇವರಿಗೆ ಡಾ. ಆರ್. ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ.

  1. ಸಿಂಹ ಶಿಲ್ಪ
  2. ರವಿವರ್ಮ ಶಾಸನ

Leave a Reply

Your email address will not be published. Required fields are marked *