ದಾವಣಗೆರೆ, ಫೆ.04
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ
ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರ. ಫೆ.05 ರಿಂದ ಫೆ. 07
ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪ್ರವಾಸ ಕಾರ್ಯಕ್ರಮ
ಪರಿಷ್ಕøತಗೊಂಡಿದೆ.
ರೇಣುಕಾಚಾರ್ಯ ಅವರು ಫೆ.05 ರಂದು ಬೆಳಿಗ್ಗೆ 11 ಗಂಟೆಗೆ
ಸುರಹೊನ್ನೆ ಗ್ರಾಮದ ಅಮ್ಮನ ಓಣಿಯಲ್ಲಿ ಸಿಸಿ ರಸ್ತೆ ಕಾಮಗಾರಿ
ಶಂಕುಸ್ಥಾಪನೆ ನೆರೆವೇರಿಸುವರು. ಬೆ.11.30ಕ್ಕೆ ನ್ಯಾಮತಿಯ
ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡುವರು. ಮ.12.30ಕ್ಕೆ ಅರುಂಡಿ
ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ
ಶಂಕುಸ್ಥಾಪನೆ ಮಾಡುವರು. ಮ.01 ಗಂಟೆಗೆ ಕಂಚಿಕೊಪ್ಪ
ಹಾಗೂ ಮ.1.30ಕ್ಕೆ ಗುಡ್ಡೆಹಳ್ಳಿ ಗ್ರಾಮದ ಕೆರೆಯ ಹೊಳೆತ್ತುವ
ಕಾಮಗಾರಿಗೆ ಚಾಲನೆ ನೀಡುವರು. ಮ.02 ಗಂಟೆಗೆ ಮಲ್ಲಿಗೇನಹಳ್ಳಿ
ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳ
ಶಂಕುಸ್ಥಾಪನೆ ನೆರೆವೇರಿಸುವರು. ಮ.2.30ಕ್ಕೆ ರಾಮೇಶ್ವರ
ಗ್ರಾಮದ ಕೆರೆಯ ಹೊಳೆತ್ತುವ ಕಾಮಗಾರಿಗೆ ಚಾಲನೆ
ನೀಡುವರು. ನಂತರ ಮ.3.30ಕ್ಕೆ ಹೊನ್ನಾಳಿಗೆ ತೆರಳಿ ಸಾರ್ವಜನಿಕ
ಕುಂದುಕೊರತೆಗಳ ಆಹ್ವಾಲುಗಳನ್ನು ಸ್ವೀಕರಿಸಿ ವಾಸ್ತವ್ಯ
ಮಾಡುವರು.
ಫೆ.06 ರಂದು ಬೆ.10.30ರಿಂದ ಸಂಜೆ 7 ಗಂಟೆಯವರೆಗೆ ಹೊನ್ನಾಳಿ
ಮತ್ತು ನ್ಯಾಮತಿ ತಾಲ್ಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಿಗೆ
ಭೇಟಿ ನೀಡುವರು.
ಫೆ.07 ರಂದು ಬೆ.11 ಗಂಟೆಗೆ ಅರಕೆರೆ ಗ್ರಾಮದಲ್ಲಿ ಗ್ರಾ.ಪಂ
ಕಟ್ಟಡ, ಘನ ತ್ಯಾಜ್ಯ ವಿಲೇವಾರಿ ಘಟಕದ ಉದ್ಘಾಟನೆ ನೆರವೇರಿಸುವರು.
ಮ.1 ಗಂಟೆಗೆ ಹೊನ್ನಾಳಿಗೆ ತೆರಳಿ ಎ.ಪಿ.ಎಂ.ಸಿ ಆವರಣದಲ್ಲಿ ರೈತರಿಗೆ
ವಿವಿಧ ಸವಲತ್ತುಗಳನ್ನು ವಿತರಿಸುವರು. ಮ.2 ಗಂಟೆಗೆ
ನ್ಯಾಮತಿಯ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 2.30ಕ್ಕೆ ಹೊನ್ನಾಳಿಯಿಂದ ಬೆಂಗಳೂರಿಗೆ ಪ್ರಯಾಣ
ಬೆಳೆಸುವರೆಂದು ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.