ನ್ಯಾಮತಿ;- ಪೆ -4 ನ್ಯಾಮತಿ ತಾಲೂಕು ಪಲನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಇಂದು ಉಪಾಧ್ಯಕ್ಷರ ಸ್ಥಾನಕ್ಕೆ ಪಲನಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ನಾಯ್ಕರವರು ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು, ಬೇರೆ ಯಾವ ಸದಸ್ಯರೂ ಕೂಡ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸದೆ ಇರುವ ಕಾರಣ ಗ್ರಾಮ ಪಂಚಾಯತ್ ಸದಸ್ಯರಾದ ನಟರಾಜ ರವರು ಸರ್ವಸದಸ್ಯರು ಒಪ್ಪಿಗೆಯನ್ನು ಪಡೆದುಕೊಂಡು ಸೂಚನೆ ಮೇರೆಗೆ ಇವರು ಅರ್ಜಿ ಯನ್ನು ಸಲ್ಲಿಸಿದ ಏಕೈಕ ಅಭ್ಯರ್ಥಿಯಾಗಿರುವುದರಿಂದ ಚುನಾವಣೆ ಅಧಿಕಾರಿಯಾದ ಲೊಕೋಪ ಇಲಾಖೆಯ AEEಯವರಾದ N J ಗಂಗಪ್ಪನವರು ನಾಗೇಶನಾಯ್ಕರವರನ್ನು ಪಲನಳ್ಳಿ ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷ ರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗೇಶ್ ನಾಯ್ಕರು ಮಾತನಾಡಿ ನನಗೆ ಉಪಾಧ್ಯಕ್ಷ ಸ್ಥಾನ ಸಿಗಲಿಕ್ಕೆ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಗಂಜಿ ನಹಳ್ಳಿ ಪ್ರವೀಣ್ ಅವರು ಮಾನವೀಯ ದೃಷ್ಟಿಯನ್ನು ಇಟ್ಟುಕೊಂಡು ನನಗೆ ಉಪಾಧ್ಯಕ್ಷರನ್ನಾಗಿ ಆಗಲಿಕ್ಕೆಅವರು ಕಾರಣೀಭೂತರಾಗಿದ್ದಾರೆ, ಅದರ ಜೊತೆಗೆ ಸರ್ವ ಸದಸ್ಯರ ಸಹಕಾರದಿಂದ ನಾನು ಉಪಾಧ್ಯಕ್ಷ ನಾಗಿದ್ದೇನೆ ಮೊದಲನೇದಾಗಿ ಸರ್ವ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಲಿಕ್ಕೆ ಇಷ್ಟಪಡುತ್ತೇನೆ ಎಂದು ತಿಳಿಸಿದರು.
ಇದರ ಜೊತೆಗೆ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರುಗಳು ಸಹಕಾರದೊಂದಿಗೆ ಸರ್ಕಾರದಿಂದ ಬರುವ ಯೋಜನೆಗಳನ್ನು ನಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಐದು ಹಳ್ಳಿಗಳಿಗೆ ಜನರಿಗೆ ತಲುಪುವಂತೆ ಕೆಲಸವನ್ನು ಮಾಡುತ್ತೇನೆ ಎಂದರು.

ಮುಸ್ಸೇನಾಳ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ನಾಯ್ಕ ರವರು ಮಾತನಾಡಿ, ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಕಸ ವಿಲೇವಾರಿ ಘಟಕದ ಗುದ್ದಲಿ ಪೂಜೆಗೆ ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯರು ಬಂದಿದ್ದರು, ಆ ಸಮಯದಲ್ಲಿ ಅವರು ನಿಮ್ಮ ಗ್ರಾಮ ಪಂಚಾಯಿತಿಗೆ 30 ಆಶ್ರಯ ಮನೆಗಳನ್ನು ಕೊಡಲಾಗುತ್ತದೆ ಎಂದು ತಿಳಿಸಿದ್ದರು ,ಶಾಸಕರು ಹೇಳಿದ ಹಾಗೆ ನಮ್ಮ ಪಲವ ನಳ್ಳಿ ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಐದು ಹಳ್ಳಿಗಳು ಬರುತ್ತವೆ, ಒಂದು ಗ್ರಾಮಕ್ಕೆ ಸುಮಾರು 25 ಮನೆಯನ್ನು ಕೊಟ್ಟರೂ ಸಹ 5 ಹಳ್ಳಿಗಳಿಗೆ 125 ಮನೆಗಳು ಬೇಕಾಗುತ್ತದೆ ಆದ್ದರಿಂದ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮಾಜದವರು ಹೆಚ್ಚಾಗಿರುವ ಕಾರಣ ನಮ್ಮ ಗ್ರಾಮ ಪಂಚಾಯಿತಿಗೆ ಕನಿಷ್ಠ 100 ಆಶ್ರಯ ಮನೆಯನ್ನು ಕೊಡಬೇಕು ಎಂದು ಒತ್ತಾಯಿಸಿದರು .
ಉಪಸ್ಥಿತಿಯಲ್ಲಿ;- ಎಂಜಿ ಗಂಗಪ್ಪ ಲೋಕೋಪಯೋಗಿ ಇಲಾಖೆಯ AEE ಚುನಾವಣಾ ಅಧಿಕಾರಿಗಳು ,ಅಧ್ಯಕ್ಷರಾದ ಶ್ರೀಮತಿ ಅನಿತಾ ರಾಜಪ್ಪ ಉಪಾಧ್ಯಕ್ಷರಾದ ನಾಗೇಶ್ ನಾಯಕ್ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗಂಜಿಹಳ್ಳಿ ಪ್ರವೀಣ್, ಮುಸ್ಸೇನಾಳ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ನಾಯ್ಕ, ಜಯಶ್ರೀ ,ನೇತ್ರಮ್ಮ, ಗೋವಿಂದರಾಜ್, ನಟರಾಜ ,ಪ್ರೀತಿ ಬಾಯಿ, ಶಕುಂತಲಾಬಾಯಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ,ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಗೂ ಊರಿನ ಗ್ರಾಮಸ್ಥರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *