ಹೊನ್ನಾಳಿ;- ಪೆ :5- ತಾಲೂಕು ದಿಡಗೂರು ಗ್ರಾಮದಲ್ಲಿ ಇಂದು ದಿವಂಗತ ಶಾಸ್ತ್ರಿ ಭರಮಣ್ಣ ಮಾರ್ತಂಡಪ್ಪ ನವರು ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .ಶ್ರೀಮತಿ ಕಮಲಮ್ಮ ಮಾರ್ತಂಡಪ್ಪ ದಿಡಗೂರು ಆದ ನಾನು ನನ್ನ ಪತಿ ದೇವರಾದ ಭರಮಣ್ಣ ಶಾಸ್ತ್ರಿ ಮಾರ್ತಂಡಪ್ಪ ನವರು ದಿನಾಂಕ 4/9 /2021 ಶನಿವಾರದಂದು ಶಿವೈಕ್ಯ ರಾಗಿದ್ದರು, ಅವರ ಸ್ಮಾರಕವನ್ನು ನಮ್ಮ ತೋಟದಲ್ಲಿ ನನ್ನ ಪೂಜ್ಯ ಪತಿದೇವರ ನೆನಪಿನ ಸ್ಮರಣಾರ್ಥವಾಗಿ ನಿರ್ಮಿಸಿರುವ ಪುತ್ಥಳಿ ಅನಾವರಣದ ಪ್ರಯುಕ್ತ ದಿನಾಂಕ 5/2 /20 22 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಬಸವರಾಜ ದೇಶೀಕೇಂದ್ರ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಐರಣಿ ಹೊಳೆ ಇವರು ದಿವಂಗತ ಶಾಸ್ತ್ರಿ ಬರ್ಮಣ್ಣ ಮಾರ್ತಂಡಪ್ಪ ನವರ ಪುತ್ಥಳಿ ಅನಾವರಣವನ್ನು ನೆರವೇರಿಸಿದರು.
ಶ್ರೀಗಳಿಗೆ ಭಕ್ತಿಪೂರ್ವಕವಾಗಿ ಶ್ರೀಮತಿ ಕಮಲಮ್ಮ ಮಾರ್ತಂಡಪ್ಪ ಮತ್ತು ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅವರ ಸಂಬಂಧಿಕರು ಗಳು ಪಾದಪೂಜೆಯನ್ನು ಮಾಡುವುದನ್ನು ಮುಖೇನ ಗುರುಗಳ ಭಕ್ತಿಗೆ ಪಾತ್ರರಾದರು.
ಜಿಲ್ಲಾ ಅಧ್ಯಕ್ಷ ಎಚ್ಡಿ ಮಂಜಪ್ಪ ಮಾತನಾಡಿ ದಿವಂಗತ ಬರಮಣ್ಣ ಶಾಸ್ತ್ರಿ ಮಾರ್ತಂಡಪ್ಪನವರು ಇಂಥ ವ್ಯಕ್ತಿ ನಮಗೆ ಸಿಗುವುದು ಬಹಳ ಕಷ್ಟ, ಸಂಸ್ಕಾರ ವ್ಯಕ್ತಿಗಳು ಇವರ ಬಂದ ದಾರಿಯನ್ನು ನಾವುಗಳು ಅವರ ಹಾದಿಯಲ್ಲಿ ಸಾಗಿದಾಗ ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ ರವರು ಮಾತನಾಡಿ, ಈಗಿನ ಕಾಲದ ಮಕ್ಕಳು ತಮ್ಮ ತಂದೆ ತಾಯಿಯರನ್ನು ನೋಡಿಕೊಳ್ಳದೇ ವೃದ್ಧಾಶ್ರಮಕ್ಕೆ ಬಿಟ್ಟಿದ್ದಾರೆ ಹಾಗೂ ಮಠ ಗಳಲ್ಲಿಯೂ ಸಹ ಗುರು-ಹಿರಿಯರನ್ನು ಬಿಟ್ಟಿದ್ದಾರೆ ,ಇದು ದುರ್ದೈವ ಸಂಗತಿಯೆಂದು ಮಾತನ್ನು ಮುಂದುವರಿಸಿ, ಈ ದಿಡಗೂರು ಗ್ರಾಮದ ದಿವಂಗತ ಬರಮಣ್ಣ ಶಾಸ್ತ್ರಿ ಮಾರ್ತಂಡಪ್ಪ ನಿಧನರಾಗಿದ್ದರು ,ಸಹ ಅವರ ಹೆಸರು ಅಜರಾಮರವಾಗಿದೆ.ಅವರು ಎಂತಹ ಸಂಸ್ಕಾರಸ್ಥರು ಆಗಿದ್ದರು ಅನ್ನೋದಕ್ಕೆ ಇದೆ ಸಾಕ್ಷಿ ಎನ್ನುವಂತೆ ಇವರ ಧರ್ಮಪತ್ನಿ ಮತ್ತು ಮಕ್ಕಳು ಸೇರಿ ತಮ್ಮ ತಂದೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸುಮಾರು ಮಠಾಧೀಶರು ಗಳನ್ನು ಹಾಗೂ ರಾಜಕೀಯ ಪ್ರತಿನಿಧಿಗಳನ್ನು ಕರೆಸಿ ದೊಡ್ಡ ಕಾರ್ಯಕ್ರಮವನ್ನು ಮಾಡಿ ಅನಾವರಣಗೊಳಿಸಿದ್ದುನ್ನುನೋಡಿದರೆ,
ನಮ್ಮ ತಾಲೂಕಿನಲ್ಲಿ ಪ್ರಥಮವಾಗಿ ದಿಡಗೂರು ಗ್ರಾಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳುತ್ತಾ, ಶ್ರೀಮತಿ ಕಮಲಮ್ಮ ಮಾರ್ತಂಡಪ್ಪ ನವರಿಗೆ ಡಿ ಜಿ ಶಾಂತನಗೌಡ ರವರು ಕಾಲಿಗೆ ಬಿದ್ದು ನಮಸ್ಕರಿಸಿದರು ಕಾರಣ ಏನೆಂದರೆ ಇವರಿಗೆ ಹುಟ್ಟಿದ ಮಕ್ಕಳು ಮಾಡಿದ ಕೆಲಸವನ್ನು ,ನಮ್ಮ ಮಕ್ಕಳು ಗಳಿಗೆ ಸಹ ಸಂಸ್ಕಾರವಂತರಾಗಿ ಬದುಕಿ ,ಇಂತಹ ಸಮಾಜಮುಖಿ ಕೆಲಸವನ್ನು ಮಾಡಲು ಆಶೀರ್ವಾದ ಸಿಗಲಿ ಎಂದು ನಮಸ್ಕರಿಸಿದ್ದೇನೆ ಎಂದು ತಿಳಿಸಿದರು.
ಉಪಸ್ಥಿತಿಯಲ್ಲಿ ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಐರಣಿ ಮಠ, ಶ್ರೀ ತಿಪ್ಪೇಸ್ವಾಮಿ ಸ್ವಾಮಿಗಳು ,ಶ್ರೀ ಪಾಂಡುರಂಗ ಸ್ವಾಮಿಗಳು ,ಅಣ್ಣಪ್ಪ ಸ್ವಾಮಿಗಳು, ಪ್ರಣಾಮ್ ಅನಂತಸ್ವಾಮಿಗಳು, ಕೋಣನತಲೆ ,ಡಿಜಿ ಶಾಂತನ ಗೌಡ್ರು ಮಾಜಿ ಶಾಸಕರು ಹೊನ್ನಾಳಿ ,ಮಂಜಪ್ಪಹೆಚ್ ಬಿ ಜಿಲ್ಲಾಧ್ಯಕ್ಷ ,ದಿಡಗೂರು ಪಾಲಾಕ್ಷ್ ಅಣ್ಣ ,ಪ್ರಕಾಶ್ ಎಜಿ ಮಾಜಿ ಅಧ್ಯಕ್ಷರು ಎಪಿಎಂಸಿ ,ಇನ್ನು ಮುಂತಾದ ಗ್ರಾಮಪಂಚಾಯಿತಿ ಅಧ್ಯಕ್ಷರುಗಳು ಮಾಜಿ ಅಧ್ಯಕ್ಷರುಗಳು ಸದಸ್ಯರುಗಳು ಶ್ರೀಮತಿ ಹೇಮಶ್ರೀ ಪ್ರಾಣೇಶ್ ಅಪ್ಪ ಬೆಂಗಳೂರು, ಶ್ರೀಮತಿ ಕಮಲಮ್ಮ ಮಾರ್ತಂಡಪ್ಪ ಮಕ್ಕಳು ಅಳಿಯಂದಿರು ,ಮೊಮ್ಮಕ್ಕಳು ಹಾಗೂ ಶಾಸ್ತ್ರಿ ಬರಮಣ್ಣ ವಂಶಸ್ಥರು, ದಿಡಗೂರು ಗ್ರಾಮಸ್ಥರು ಹಾಗೂ ಮಾರ್ತಂಡಪ್ಪ ನವರ ಸ್ನೇಹಿತರು ಬಂಧು ಮಿತ್ರರು ಎಲ್ಲ ಸಂಘ ಸಂಸ್ಥೆಯ ಪದಾಧಿಕಾರಿಗಳು ಅಧ್ಯಕ್ಷರುಗಳು ಸಹ ಭಾಗಿಯಾಗಿದ್ದರು.