ಹೊನ್ನಾಳಿ
ರಾಜ್ಯದಲ್ಲಿ ಕಳೆದ ೧೪ ವರ್ಷಗಳಿಂದ ಕಂದಾಯ ಇಲಾಖೆಯ ಯೋಜನೆಗಳಾದ ನೆಮ್ಮದಿ ಮತ್ತು ಅಟಲ್ ಜೀ ಜನಸ್ನೇಹಿ ಕೇಂದ್ರದAತಹ ಕಂಡೆ ಕರ್ತವ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರೀ ಆಪರೇಟರ್‌ಗಳು ಮತ್ತು ಜಿಲ್ಲಾ ಹಂತದ ಸಮಾಲೋಚಕರುಗಳನ್ನು ಉದ್ದೇಯಲ್ಲಿ ಕಾಯಿಂಗೊಳಿಸಿ ಸೇವಾ ಭದ್ರತೆ ನೀಡಲು ಒತ್ತಾಯಿಸಿ ಶನಿವಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ದಾವಣಗೆರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರೀ ಆಪರೇರ‍್ಗಳು ಹೊನ್ನಾಳಿಯ ಅವರ ನೀವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಈ ಸಮಯದಲ್ಲಿ ಮಾತನಾಡಿದ ಜಿಲ್ಲಾ ಸಮಾಲೋಜಕ ರವೀಶ್, ರಾಜ್ಯದ ೪೨ ಜನ ಜಿಲ್ಲಾ ಸಮಾಲೋಜಕರು ಹಾಗೂ ೧೯೫೦ ಡಾಟಾ ಎಂಟ್ರೀ ಆಪರೇಟರ್‌ಗಳು ಕಳೆದ ೧೪ ವರ್ಷದಿಂದ ಯಾವುದೇ ರೀತಿಯ ಸೇವಾ ಭದ್ರತೆ ಇಲ್ಲದೆ ಅಲ್ಪ ಸಂಬಳ ಪಡೆದು ಕಾರ್ಯನಿರ್ವಹಿಸುತ್ತಿದ್ದೇವೆ, ಈ ಯೋಜನೆಗಳು ಸಹ ಸಾಕಷ್ಟು ಜನ ಮೆಚ್ಚುಗೆ ಆಗಿದ್ದು, ಇಂತಹ ಕೇಂದ್ರಗಳನ್ನು ಸರ್ಕಾರ ಮುಚ್ಚುವ ತೀರ್ಮಾನ ಕೈಬಿಡದೆ ಹೋದಲ್ಲಿ ಸರ್ಕಾರದ ಸೇವೆಗಳಿಂದ ಜನ ಸಾಮಾನ್ಯರು ವಂಚಿತರಾಗುತ್ತಾರೆ ಜೊತೆಯಲ್ಲಿ ನಾವುಗಳು ಸಹ ಕುಟುಂಬ ಸಮೇತರಾಗಿ ಬೀದಿಗೆ ಬೀಳುತ್ತೇವೆ ಎಂದು ಹೇಳಿಕೆ ನೀಡಿದರು.
ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದAತAಹ ಡಾಟಾ ಎಂಟ್ರೀ ಆಪರೇಟರ್‌ಗಳಾದ ಸಂತೋಷ್, ಚೇತನ್, ಶಂಕರ್, ಮಂಗಳಾ, ಯುಧೀಷ್ಟರ್, ರಮೇಶ್, ಪಾಂಡುರAಗ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.